ಉತ್ತರ ಕನ್ನಡ: ಯುವತಿಯ ಕಳ್ಳ ಸಾಗಣೆಗೆ ಯತ್ನ, ಮೂವರ ವಿರುದ್ಧ ದೂರು

By Kannadaprabha News  |  First Published Nov 20, 2023, 2:00 AM IST

ಕೊಂಡ್ಲಿ ಮೂಲದ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಯುವತಿಗೆ ಆರೋಪಿತರು ನೀನು ತುಂಬಾ ಚೆನ್ನಾಗಿದ್ದೀಯ, ನೀನು ಒಪ್ಪಿದರೆ ಒಳ್ಳೆ ಗಿರಾಕಿ ಕೊಡಿಸುತ್ತೇವೆ, ಹೇರಳ ಹಣ ಸಂಪಾದಿಸಬಹುದು ಎಂದು ಒತ್ತಾಯಿಸಿದ್ದ ಆರೋಪಿಗಳು


ಸಿದ್ದಾಪುರ(ನ.20):  ಯುವತಿಯೋರ್ವಳನ್ನು ವೇಶ್ಯೆವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಪ್ರಚೋದಿಸಿ ಕಳ್ಳ ಸಾಗಣೆಗೆ ಯತ್ನಿಸುತ್ತಿದ್ದ ಮೂವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕಾಶ ಕೊಂಡ್ಲಿ, ಮಹೇಶ ನಾರಾಯಣ ಮಡಿವಾಳ ಕೊಂಡ್ಲಿ, ಪಾರ್ವತಮ್ಮ ಬೆಂಗಳೂರು ಎನ್ನುವವರ ಮೇಲೆ ಪ್ರಕರಣ ದಾಖಲಾಗಿದೆ.

ಕೊಂಡ್ಲಿ ಮೂಲದ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಯುವತಿಗೆ ಆರೋಪಿತರು ನೀನು ತುಂಬಾ ಚೆನ್ನಾಗಿದ್ದೀಯ, ನೀನು ಒಪ್ಪಿದರೆ ಒಳ್ಳೆ ಗಿರಾಕಿ ಕೊಡಿಸುತ್ತೇವೆ, ಹೇರಳ ಹಣ ಸಂಪಾದಿಸಬಹುದು ಎಂದು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಪಟ್ಟಣದ ಐಬಿ ಬಳಿ ಕರೆಯಿಸಿ ಒತ್ತಾಯಿಸಿದ್ದಾರೆ. 

Tap to resize

Latest Videos

undefined

ದೀಪಾವಳಿ ವಿಶೇಷ "ಹೊಂಡೆಯಾಟ": ಉತ್ತರಕನ್ನಡದಲ್ಲಿ ಗ್ರಾಮೀಣ ಕ್ರೀಡೆ ಇಂದಿಗೂ ಜೀವಂತ..!

ಇದಕ್ಕೆ ಯುವತಿ ಒಪ್ಪದಿದ್ದಾಗ ಪಾರ್ವತಮ್ಮ ಯುವತಿಯ ಮೇಲೆ ಹಲ್ಲೆ ಮಾಡಿ ಹೆದರಿಸಿ ಯುವತಿಯ ಕಳ್ಳ ಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಾಸಿ ತನಿಖೆ ಮುಂದುವರಿಸಿದ್ದಾರೆ.

click me!