
ಚಾಮರಾಜನಗರ (ಸೆ.29): ಕೊಳ್ಳೇಗಾಲ ನಗರದ ಸರ್ಕಾರಿ ಉಪವಿಭಾಗದ ಆಸ್ಪತ್ರೆ ಅರಿವಳಿಕೆ ತಜ್ಞೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹದೇಶ್ವರ ಕಾಲೇಜು ರಸ್ತೆಯ ಮನೆಯೊಂದರಲ್ಲಿ ನಡೆದಿದೆ.
ಡಾ.ಸಿಂಧೂಜಾ(28) ಮೃತಪಟ್ಟ ದುರ್ದೈವಿ. ತಮಿಳನಾಡು ಮೂಲದವರಾದ ಸಿಂಧೂಜಾ ಎಂಬಿಬಿಎಸ್ ಮುಗಿಸಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಂದಿದ್ದರು. ಸ್ನಾತಕೋತ್ತರ ಶಿಕ್ಷಣದ ಭಾಗವಾಗಿ ಅವರು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆ ಉಪವಿಭಾಗದಲ್ಲಿ ಅರಿವಳಿಕೆ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಸ್ಪತ್ರೆಯಲ್ಲಿ ಎಲ್ಲ ಸಿಬ್ಬಂದಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಯಾರೊಂದಿಗೂ ವೈಷಮ್ಯ ಇರಲಿಲ್ಲ.
ತುಮಕೂರು: ಪತ್ನಿಯ ಅಂತ್ಯಸಂಸ್ಕಾರಕ್ಕೆ ಬಾರದ ಗಂಡ; ಮನೆ ಮುಂದೆ ಶವ ಬಿಟ್ಟು ಹೋದ ಗ್ರಾಮಸ್ಥರು!
ಎಂದಿನಂತೆ ಗುರುವಾರ ಡ್ಯೂಟಿ ಮುಗಿಸಿಕೊಂಡು ಮಹದೇಶ್ವರ ಕಾಲೇಜು ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಹೋಗಿರುವ ವೈದ್ಯ. ಆದರೆ ಶುಕ್ತವಾರ ಬೆಳಗ್ಗೆ ಡ್ಯೂಟಿ ಬಾರದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿಲ್ಲ. ಹೀಗಾಗಿ ಅನುಮಾನಗೊಂಡು ಆಸ್ಪತ್ರೆ ಸಿಬ್ಬಂದಿ ಸಿಂಧೂಜಾ ವಾಸವಿದ್ದ ಮನೆಗೆ ಹೋಗಿದ್ದಾರೆ. ಬಾಗಿಲು ತಟ್ಟಿದರೂ ತೆಗೆದಿಲ್ಲ. ಕೊನೆಗೆ ಕಿಟಕಿ ಗಾಜು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ನೆಲದ ಮೇಲೆ ಶವವಾಗಿ ಬಿದ್ದಿದ್ದ ಸಿಂಧೂಜಾ. ಶವದ ಬಳಿ ಸಿರೆಂಜ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮುಂದಿನ ವರ್ಷ ಜನೆವರಿ 2ಕ್ಕೆ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಅಥವಾ ಕೊಲೆಯಾಗಿದೆಯಾ? ಸ್ಥಳಕ್ಕೆ ಭೇಟಿ ನೀಡಿದ ಕೊಳ್ಳೇಗಾಲ ಪಟ್ಟಣ ಪೊಲೀಸರು. ಪರಿಶೀಲನೆ ನಡೆಸಿದ್ದಾರೆ. ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತ್ನಿ ಶೀಲಶಂಕಿಸಿ ಕೊಲೆಗೆ ಯತ್ನಿಸಿದ ದುರಳ ಗಂಡ; ಸಲ್ಮಾ ಸಾವು ಬದುಕಿನ ಹೋರಾಟ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ