ಪುತ್ತೂರು: ಕಾಂಗ್ರೆಸ್ ಮುಖಂಡನ ಮನೆ ದರೋಡೆ ಮಾಡಿದ್ದ ಪ್ರಕರಣ; 6 ಆರೋಪಿಗಳ ಬಂಧನ

By Ravi Janekal  |  First Published Sep 29, 2023, 7:25 PM IST

ಮನೆಮಂದಿಯನ್ನು ಕಟ್ಟಿಹಾಕಿ ಕಾಂಗ್ರೆಸ್ ಮುಖಂಡನ ಮನೆ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು.  ಆರೋಪಿಗಳನ್ನು ಬಂಧಿಸಿದ ಕುರಿತು ಸುದ್ದಿಗೋಷ್ಠಿ ನಡೆಸಿ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ರಿಷ್ಯಂತ್ ಮಾಹಿತಿ ನೀಡಿದರು. 


ಪುತ್ತೂರು (ಸೆ.29): ಮನೆಮಂದಿಯನ್ನು ಕಟ್ಟಿಹಾಕಿ ಕಾಂಗ್ರೆಸ್ ಮುಖಂಡನ ಮನೆ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು. 

ಆರೋಪಿಗಳನ್ನು ಬಂಧಿಸಿದ ಕುರಿತು ಸುದ್ದಿಗೋಷ್ಠಿ ನಡೆಸಿ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ರಿಷ್ಯಂತ್ ಮಾಹಿತಿ ನೀಡಿದರು. 

Tap to resize

Latest Videos

ಕೇರಳ ಮೂಲದ ಐವರು ಮತ್ತು ವಿಟ್ಲದ ಪೆರುವಾಯಿಯ ಮೂಲದ ಕುಖ್ಯಾತರ ಬಂಧನ. ಆರೋಪಿಗಳಾದ ರವಿ, ವಸಂತ, ಸುಧೀರ್, ಸನಲ್ ಕೆ.ವಿ., ಕಿರಣ್, ಮಹಮ್ಮದ್ ಫೈಝಲ್, ಅಬ್ದುಲ್ ನಿಸಾರ್ ಬಂಧಿತರು. ಈ ಪೈಕಿ ರವಿ ಎಂಬ ಆರೋಪಿ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪೆರೋಲ್ ಮೇಲೆ ರಜೆ ಪಡೆದು ಆಗಮಿಸಿದ್ದ ಆರೋಪಿ ಈ ವೇಳೆ ಉಳಿದ ಆರು ಮಂದಿಯ ಜೊತೆ ಸೇರಿ ದರೋಡೆಯಲ್ಲಿ ಭಾಗಿಯಾಗಿದ್ದಾನೆ.

 

ಪುತ್ತೂರು: ಲೈವ್‌ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಆರು ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಮೇಲೆ ಪುತ್ತೂರು ಹಾಗೂ ವಿಟ್ಲ ಠಾಣೆಯಲ್ಲಿ ಮೊಕದ್ದಮೆ, ವಸಂತ ಎಂಬವನ ಮೇಲೆ ಬದಿಯಡ್ಕ, ಕುಂಬಳೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲು, ಇನ್ನು ಕಿರಣ್ ಎಂಬಾತನ ಮೇಲೆ ಬಂಟ್ವಾಳ, ಬರ್ಕೆ, ಮಂಜೇಶ್ವರ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲು, ಕುಖ್ಯಾತ ದರೋಡೆಕೋರ ಸನಲ್ ಕೆ.ವಿ.ಎಂಬಾತನ ಮೇಲೆ ಕೇರಳ ರಾಜ್ಯವೊಂದರಲ್ಲೇ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಮಹಮ್ಮದ್ ಫೈಝಲ್ ಮೇಲೆ ಪುತ್ತೂರು, ವಿಟ್ಲ, ಮಂಜೇಶ್ವರ, ಕುಂಬಳೆಯಲ್ಲಿ ಪ್ರಕರಣ ದಾಖಲಾಗಿವೆ. ಅಬ್ದುಲ್ ನಿಸಾರ್ ಮೇಲೆ ಪುತ್ತೂರು, ವಿಟ್ಲ, ಮಂಜೇಶ್ವರದಲ್ಲಿ ಪ್ರಕರಣ. 

 

ಪುತ್ತೂರು ಯುವತಿ ಹತ್ಯೆ ಪ್ರಕರಣ: ಗೆಳತಿಯನ್ನು ಇರಿದು ಕೊಂದಿದ್ದಕ್ಕೆ ಸಂಶಯವೇ ಕಾರಣ?

ಈ ಆರು ಆರೋಪಿಗಳು ಮತ್ತು ಪೆರೋಲ್ ನಲ್ಲಿ ಬಂದಿದ್ದ ರವಿ ಜೊತೆಗೂಡಿ ದರೋಡೆ ಕೃತ್ಯ ನಡೆಸಿದ್ದರು. ಸೆ.7 ರಂದು ಬಡಗನ್ನೂರು ಗ್ರಾಮದ ಕುದ್ಕಾಡಿಯಲ್ಲಿ ನಡೆದಿದ್ದ ಘಟನೆ.ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗುರುಪ್ರಸಾದ್ ರೈ ಎಂಬವರ ಮನೆಗೆ ಬೆಳಗ್ಗೆ ಸುಮಾರು 2 ಗಂಟೆಯ ಅವಧಿಯಲ್ಲಿ ಮನೆಗೆ ನುಗ್ಗಿದ್ದ ದರೋಡೆಕೋರರು. ಮನೆಯ ಬಾಗಿಲು ಮುರಿದು ಚಿನ್ನಾಭರಣ ಲೂಟಿ ಮಾಡಿದ್ದರು. ಎಂಟು ಪವನ್ ಚಿನ್ನ, 30 ಸಾವಿರ ನಗದು ದರೋಡೆ ಮಾಡಿದ್ದ ಕುಖ್ಯಾತರು. ಪ್ರಕರಣ ದಾಖಲಿಸಿಕೊಂಡು ಎಸ್ಪಿ ರಿಷ್ಯಂತ್, ಡಿವೈಎಸ್ಪಿ ಗಾನ ಪಿ ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದ ಖಾಕಿ. ಕೊನೆಗೂ ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೊಲೀಸರು. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಹಸ್ತಾಂತರಿಸಿದ ಎಸ್ಪಿ ರಿಷ್ಯಂತ್.

click me!