
ಹೊಸಕೋಟೆ (ಫೆ.04): ಅವರಿಬ್ಬರು 12 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಈ ಪ್ರೀತಿಗೆ ಸಾಕ್ಷಿಯಾಗಿ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಜನಿಸಿದ್ದರು. 12 ವರ್ಷದ ಹಿಂದೆ ಮದುವೆ ಆಗಿದ್ದ ಇವರು ಮೂರ್ನಾಲ್ಕು ವರ್ಷ ಬಹಳ ಅನನ್ಯವಾಗಿ ಇದ್ದರು. ನಂತರ ಗಂಡನಿಗೆ ಮೂಡಿದ ಅನುಮಾನ ಇವತ್ತು ಹೆಂಡತಿಯ ಕೊಲೆವರೆಗೆ ಹೋಗಿದೆ. ಇವರಿಬ್ಬರ ಈ ವೈಮನಸ್ಸು ಇಂದು ಮೂವರು ಮಕ್ಕಳು ಬೀದಿಗೆ ಬಂದಂತಾಗಿದೆ. ಹೌದು! ಈ ಘನ ಘೋರ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಮ್ಮರಸನಹಳ್ಳಿ ಗ್ರಾಮದಲ್ಲಿ.
ಮೂಲತಃ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ನಿಜಾಮುದ್ದೀನ್ ಮತ್ತು ರಾಬೀಯಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. ಮೂರ್ನಾಲ್ಕು ವರ್ಷ ಮದುವೆಯಾದ ಮೇಲೆ ಅನನ್ಯವಾಗಿದ್ದರು. ನಂತರ ಹೆಂಡತಿ ರಾಬೀಯಾ ಮೇಲೆ ನಿಜಾಮುದ್ದೀನ್ ಗೆ ಅನುಮಾನ ಮೂಡಿತ್ತು. ಅನೈತಿಕ ಸಂಬಂಧದ ಅನುಮಾನ ಮೂಡಿದ ಗಂಡ ಹೆಂಡತಿಗೆ ದಿನನಿತ್ಯ ಕಿರುಕುಳ ನೀಡಿದ್ದಾನೆ ಜೊತೆಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ.
ಇನ್ನೂ ಹೀಗೆ ಹಲವು ವರ್ಷಗಳಿಂದ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ನಿಜಾಮುದ್ದೀನ್ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಿಂದ ಹೊಸಕೋಟೆ ತಾಲ್ಲೂಕಿನ ತಮ್ಮರಸನಹಳ್ಳಿ ಗ್ರಾಮಕ್ಕೆ ಹೋಗಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ನಿನ್ನೆ ಹೆಂಡತಿ ರಾಬೀಯಾಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಸುಮಾರು ರಾತ್ರಿ 10 ಗಂಟೆಗೆ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಗೆ ಬಂದಿದ್ದಾನೆ. ಸೂಲಿಬೆಲೆಯಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿರುವ ನಿಜಾಮುದ್ದೀನ್ ಹೆಂಡತಿಯ ವೆಲ್ ಮೂಲಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ನೀನು ಸುಂದರಿಯಾಗಿಲ್ಲ, ನಿರುದ್ಯೋಗಿ, ವರದಕ್ಷಿಣೆಯೂ ಇಲ್ಲ: ಕಿರುಕುಳದಿಂದ ನೇಣಿಗೆ ಶರಣಾದ ವಿವಾಹಿತೆ!
ಕೊಲೆ ಮಾಡಿದ ನಂತರ ತಾನೇ ಸೂಲಿಬೆಲೆ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಒಟ್ಟಾರೆ ಪ್ರೀತಿಸಿ ಮದುವೆಯಾದ ಇಬ್ಬರಿಬ್ಬರು ಅನೇಕರಿಗೆ ಮಾದರಿಯಾಗಿ ಜೀವನ ನಡೆಸಬೇಕಿತ್ತು. ಕೊಲೆ ಮಾಡುವ ಮೊದಲು ತನ್ನ ಮೂರು ಮಕ್ಕಳ ಬಗ್ಗೆ ಗಂಡ ನಿಜಾಮುದ್ದೀನ್ ಯೋಚನೆ ಮಾಡಬೇಕಿತ್ತು. ಅನುಮಾನದಿಂದ ಹೆಂಡತಿ ರಾಬೀಯಾಳನ್ನು ಕೊಲೆ ಮಾಡಿರುವುದು ಶೋಚನೀಯ. ಸದ್ಯಕ್ಕೆ ಮೂರು ಮಕ್ಕಳ ಜೀವನ ಹೇಗೆ ಎಂಬುದು ಇದೀಗ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ