ಎಷ್ಟೇ ದುಡ್ಡು ಕೊಟ್ರು ಹೆಂಡತಿ ತೂಕ ಇಳಿಸದ ಡಾಕ್ಟರ್, ರೊಚ್ಚಿಗೆದ್ದ ಗಂಡ ಏನ್ಮಾಡಿದ?

By Suvarna News  |  First Published Dec 3, 2020, 9:28 PM IST

ಡಾಕ್ಟರ್ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ/  ಹೆಂಡತಿಯ ತೂಕ ಇಳಿದಿಲ್ಲ/ ಹಣ ಕೊಟ್ಟರೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ/ ವೈದ್ಯರ ಮೇಲೆ ಹಲ್ಲೆ ಮಾಡಿ ಹಣ ಲಪಟಾಯಿಸಿ ಪರಾರಿ


ಸೂರತ್ (  ಡಿ. 03)   32 ವರ್ಷದ ವೈದ್ಯರ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಿದ ಶಾಲಾ ಶಿಕ್ಷಕನನ್ನು ಬಂಧಿಸಲು ಪೊಲೀಸರು ತಂಡ ರಚನೆ ಮಾಡಿದ್ದಾರೆ.

ಆರೋಫಿ  ಮನೋಜ್ ಧುದಗರ ಎಂದು ಡಾ ಅಜಯ್ ಮೊರಾಡಿಯಾಗೆ ಕಳೆದ ಕೆಲವು ತಿಂಗಳಿನಿಂದ  ತನ್ನ ಹೆಂಡತಿ ತೂಕ ಕಡಿಮೆ ಮಾಡುವ ಚಿಕಿತ್ಸೆಗೆ ಹಣ ನೀಡುತ್ತಿದ್ದ. ಆದರೆ ಎಂಥದ್ದೆ ಚಿಕಿತ್ಸೆ ಮಾಡಿದರೂ ಹೆಂಡತಿಯ ತೂಕ ಕಡಿಮೆಯಾಗಲಿಲ್ಲ. ಇದರ ಪರಿಣಾಮ ಸಿಟ್ಟಿಗೆದ್ದ ಆರೋಪಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದು ಹಣ ವಾಪಸ್ ಕೊಡಲು ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಫಸ್ಟ್ ನೈಟ್‌ ನಲ್ಲೇ ಎಡವಟ್ಟು; ಈ ಗಂಡ ಬೇಡ ಎಂದು ಪತ್ನಿ 

ಕಬ್ಬಿಣದ ಬ್ಲೇಡ್ ಒಂದನ್ನು  ತೆಗೆದುಕೊಂಡು ಡಾಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ.  ನಂತರ ಡಾಕ್ಟರ್ ಬಳಿ ಇದ್ದ 1,500 ರೂ. ಲೂಟಿ ಮಾಡಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ವೈದ್ಯರ ಗಂಟಲಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

click me!