ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ

By Suvarna News  |  First Published Dec 3, 2020, 3:36 PM IST

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ/ ಬಲವಂತದ ಮತಾಂತರ ಆರೋಪದ ಮೇಲೆ ಮೊದಲ ಬಂಧನ/ ಸುಗ್ರೀವಾಜ್ಙೆ ಮೂಲಕ ಕಾನೂನು ಪಾಸ್ ಮಾಡಿದ್ದ ಯೋಗಿ ಸರ್ಕಾರ


ಲಕ್ನೋ/  ಬರೇಲಿ(ಡಿ. 03) ಮದುವೆಯಾಗುವುದಕ್ಕೆ ಮತಾಂತರ ವಿಚಾರದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮುಖೇನ ಕಾನೂನು ಪಾಸ್ ಮಾಡಿತ್ತು.   ಇದೀಗ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ  ಮೊಟ್ಟ ಮೊದಲನೆ ವ್ಯಕ್ತಿಯ ಬಂಧನವಾಗಿದೆ.

ಜಾತಿ ಪರಿವರ್ತನೆ ನಿಷೇಧ ಕಾಯ್ದೆಯಡಿ ಬಾಲಕಿಯ ತಂದೆ ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಹೊಸ ಕಾಯ್ದೆ ಅನುಸಾರ ಪ್ರಕರಣ ದಾಖಲಿಸಿಕೊಂಡಿದ್ದರು.  ಆರೋಪಿ ಓವಿಯಾಸ್ ಅಹಮದ್(21)  ಎಂಬಾತನ ಬಂಧನವಾಗಿದೆ.  ಮದುವೆಯಾಘುವುಕ್ಕೋಸ್ಕರ ಹಿಂದು ಯುವತಿಗೆ ಇಸ್ಲಾಂಗೆ ಮತಾಂತರ ಆಗು ಎಂದು ಒತ್ತಡ ಹೇರುತ್ತಿದ್ದ.

Latest Videos

undefined

ಲವ್ ಜಿಹಾದ್ ಮಾಡಿದ್ರೆ ಏನ್ ಶಿಕ್ಷೆ; ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ

ಎಫ್ ಐಆರ್ ದಾಖಲಾದಾಗಿನಿಂದ ಆರೋಪಿ ನಾಪತ್ತೆಯಾಗಿದ್ದ. ಹಲವು ಕಡೆಗಳಲ್ಲಿ ದಾಳಿ ಮಾಡಿ ಅಂತಿಮವಾಗಿ ಸೆರೆಸಿಕ್ಕಿದ್ದಾನೆ. ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಹೊಸ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓವಿಯಾಸ್ ಅಹಮದ್(21) ಗೆ ಸ್ಥಳೀಯ ಮಹಿಳೆಯೊಂದಿಗೆ ಸಂಬಂಧ ಇತ್ತು. ಕಳೆದ ವರ್ಷ ಇಬ್ಬರು ಒಟ್ಟಿಗೆ ಪರಾರಿಯಾಗಿದ್ದರು.  ಮಹಿಳೆ ಕುಟುಂಬದವರು ಈತನ ಮೇಲೆ ಕಿಡ್ನಾಪ್ ದೂರು ನೀಡಿದ್ದರೂ ಮಹಿಳೆ ಅಲ್ಲಗಳೆದಿದ್ದರು. ಹಾಗಾಗಿ ಅಹಮದ್ ಬಚಾವ್ ಆಗಿದ್ದ. ನಂತರ ಮಹಿಳೆಯನ್ನು ಬೇರೆಯವರ ಜತೆ ಮದುವೆ ಮಾಡಲಾಗಿತ್ತು.

ಮದುವೆ ವಿಚಾರ ನಮಗೆ ಗೊತ್ತಾದ ದಿನದಿಂದ ಓವಿಯಾಸ್ ಅಹಮದ್(21)   ಕುಟುಂಬಕ್ಕೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದ. ನಮ್ಮ ಕುಟುಂಬದ ಹೆಣ್ಣು ಮಗಳನ್ನು ಇಸ್ಲಾಂಗೆ ಮತಾಂತರ ಆಗಬೇಕು ಎಂದು ಒತ್ತಡ ಹೇರುತ್ತಿದ್ದ ಎಂದು ಯುವತಿಯ ತಂದೆ ದೂರಿನಲ್ಲಿ ಹೇಳಿದ್ದರು`.

 

click me!