* ರೌಡಿ ಜಿಲಾಲ್ ತಂಗಿ ವಿವಾಹವಾಗಿದ್ದ ರೌಡಿ ರಾಹುಲ್‌ಗೆ ಸ್ಕೆಚ್
* ಕೊಲೆಗೆ ಸಿದ್ಧರಾಗಿದ್ದ ರೌಡಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
* ಜೈಲಿನಲ್ಲೇ ಪೋಟೋ ಶೂಟ್
ಬೆಂಗಳೂರು(ಮಾ.18): ತನ್ನ ತಂಗಿಯನ್ನು ಪ್ರೀತಿಸಿ ವಿವಾಹವಾದ ಎಂಬ ಕಾರಣಕ್ಕೆ ಕೋಪಗೊಂಡು ರೌಡಿ ರಾಹುಲ್ ಹತ್ಯೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಕುಳಿತು ರೌಡಿ ಜಿಲಾನ್ ಸುಪಾರಿ ನೀಡಿದ್ದ ಸಂಗತಿ ಸಿಸಿಬಿ(CCB) ತನಿಖೆಯಲ್ಲಿ ಬಯಲಾಗಿದೆ. ವಿ.ವಿ.ಪುರ ಸಮೀಪದ ಪಾರ್ವತಿಪುರದ ಜಿಲಾನ್‌ನ ಸಹಚರರಾದ ಶೋಯೆಬ್, ನಮೀದ್, ಅರ್ಬಾಜ್ ಖಾನ್ ಹಾಗೂ ಫೈಜಲ್ ಬಂಧಿತರಾಗಿದ್ದು(Arrest), ರಾಯಲ್ ಕಾನ್‌ಕಾರ್ಡ್ ಇಂಟರ್ ನ್ಯಾಷನಲ್ ಶಾಲೆ ಮತ್ತು ಶಾರದಾ ಸಮಾಜದ ನಡುವಿನ ಶಿವಗಂಗ ಮಠದ ರಸ್ತೆಯಲ್ಲಿ ರಾಹುಲ್ ಹತ್ಯೆಗೆ ಆರೋಪಿಗಳು(Accused) ಹೊಂಚು ಹಾಕಿದ್ದಾಗ ಸಿಸಿಬಿ ದಾಳಿ(CCB Raid) ನಡೆಸಿದೆ.
ಪಾರ್ವತಿಪುರದಲ್ಲಿ ಜಿಲಾನ್ ಹಾಗೂ ರಾಹುಲ್ ನೆರೆಹೊರೆಯಲ್ಲಿ ನೆಲೆಸಿದ್ದು, ಹಲವು ವರ್ಷಗಳಿಂದ ಪಾತಕಲೋಕದಲ್ಲಿ ಇಬ್ಬರು ಸಕ್ರಿಯವಾಗಿದ್ದರು. ಸ್ಥಳೀಯವಾಗಿ ಹಿಡಿತ ಸಾಧಿಸುವ ಸಂಬಂಧ ಅವರಲ್ಲಿ ಮನಸ್ತಾಪವಾಗಿತ್ತು. ಆಗ ತನ್ನ ಸೋದರಿಯನ್ನು ರಾಹುಲ್ ಪ್ರೀತಿಸುವ(Love) ಸಂಗತಿ ತಿಳಿದು ಜಿಲಾನ್ ಕ್ರೋಧಗೊಂಡಿದ್ದ. ತನ್ನ ತಂಗಿ ಸಹವಾಸಕ್ಕೆ ಬಾರದಂತೆ ಆತನಿಗೆ ಜಿಲಾನ್ ಎಚ್ಚರಿಸಿದ್ದ. ಆದರೆ 2021ರಲ್ಲಿ ಮಹಿಳೆ ಕೊಲೆ(Murder) ಪ್ರಕರಣ ಸಂಬಂಧ ಜಿಲಾನ್‌ನನ್ನು ಬಂಧಿಸಿ ವಿ.ವಿ.ಪುರ ಠಾಣೆ ಪೊಲೀಸರು ಜೈಲಿಗೆ(Jail) ಕಳುಹಿಸಿದ್ದರು.
Sex Racket : ಹೆಸರಿಗೆ ಸ್ಪಾ.. ಒಳಗೆ ಅದೇ ದಂಧೆ.. ಆನ್‌ಲೈನ್‌ನಲ್ಲೇ ವ್ಯವಹಾರ!
ಇತ್ತ ಜಿಲಾನ್ ಜೈಲು ಸೇರಿದ ಬಳಿಕ ಆತನ ತಂಗಿ ಜೊತೆ ರಾಹುಲ್ ಮದುವೆಯಾಯಿತು. ಇದರಿಂದ ಕೆರಳಿದ ಜಿಲಾನ್, ರಾಹುಲ್ ಕೊಲೆಗೆ ನಿರ್ಧರಿಸಿದ. ಆಗ ಪಾರ್ವತಿಪುರದ ತನ್ನ ಸಹಚರರಾದ ಶೋಯೆಬ್, ನಮೀದ್, ಅರ್ಬಾಜ್ ಖಾನ್ ಹಾಗೂ ಫೈಜಲ್‌ನನ್ನು ಸೆಂಟ್ರಲ್ ಜೈಲಿಗೆ ಕರೆಸಿಕೊಂಡು ರಾಹುಲ್ ಹತ್ಯೆಗೆ ಸುಪಾರಿ ನೀಡಿದ. ಅಂತೆಯೇ ರಾಹುಲ್ ಕೊಲೆಗೆ ಆರೋಪಿಗಳು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಸಂಗತಿ ತಿಳಿದು ಕಾರ್ಯಾಚರಣೆ ನಡೆಸಿದ ಸಂಘಟಿತ ಅಪರಾಧ ದಳದ (OCW) ಎಸಿಪಿ ಎಚ್.ಎನ್.ಧರ್ಮೇಂದ್ರ ನೇತೃತ್ವದ ತಂಡ, ಎರಡು ದಿನಗಳ ಹಿಂದೆ ವಿ.ವಿ.ಪುರ ಸಮೀಪ ಆರೋಪಿಗಳನ್ನು ಬಂಧಿಸುವ ಮೂಲಕ ಸಂಭವನೀಯ ಕೊಲೆಯನ್ನು ತಪ್ಪಿಸಿದ್ದಾರೆ.
ಜೈಲಿನಲ್ಲೇ ಪೋಟೋ ಶೂಟ್
ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ರೌಡಿ ಜಿಲಾನ್, ಕಾರಾಗೃಹದಲ್ಲೇ ಮೊಬೈಲ್‌ನಲ್ಲಿ ಫೋಟೋ ಶೂಟ್(Photo Shoot) ಮಾಡಿಕೊಂಡಿದ್ದ. ಈ ಫೋಟೋಗಳು ಬಹಿರಂಗವಾಗಿದ್ದು, ಕಾರಾಗೃಹದಲ್ಲಿ ರೌಡಿಗಳಿಗೆ ವಿಐಪಿ ಸತ್ಕಾರದ ಆರೋಪಕ್ಕೆ ಪುರಾವೆ ನೀಡುತ್ತವೆ.
ಗಂಡನ ಮೇಲಿನ ಸಿಟ್ಟಿಗೆ ಡಾಬಾಗೆ ಬೆಂಕಿ ಹಚ್ಚಲು ಪತ್ನಿ ಸುಪಾರಿ, ಅಮಾಯಕ ಜೀವ ಬಲಿ
ಬೆಂಗಳೂರು: ನಗರದ ಹೊರವಲಯದಲ್ಲಿರುವ ಸೋಲದೇವನಹಳ್ಳಿಯ ಡಾಬಾಗೆ ಬೆಂಕಿ ಪ್ರಕರಣಕ್ಕೆ (Fಇರ ಛಾಸೆ) ರೋಚಕ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಮೂವರನ್ನು ಬಂಧಿಸಿದ ಜ.14 ರಂದು ನಡೆದಿತ್ತು. ಹೌದು... ಗಂಡ ಅರ್ಪಿತ್ ಸಹ ಒಡೆತನದ ಡಾಬಾಗೆ ಬೆಂಕಿ ಹಚ್ಚಲು ಆತನ ಪತ್ನಿ ಶೀತಲ್ ಸುಪಾರಿ ನೀಡಿರುವ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ (DCP Vinayak Patil) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
Sexual Harassment: ಕನ್ನಡ ಚಿತ್ರರಂಗದ ಖ್ಯಾತ ನಟಿಯ ಸಹೋದರನ ವಿರುದ್ಧ ರೇಪ್ ಕೇಸ್ ದಾಖಲು
ಸದ್ಯ ಪೊಲೀಸರು ಮನು ಕುಮಾರ್, ಮಂಜುನಾಥ್ ಮತ್ತು ಹೇಮಂತ್ ಮೂವರನ್ನು ಬಂಧಿಸಿದ್ದರು, ಇತ್ತ ಶೀತಲ್ ನಾಪತ್ತೆಯಾಗಿದ್ದು, ಆಕೆಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು.
ಡಿಸೆಂಬರ್ 24, 2021ರಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರ್ಪಿತ್ ಎಂಬವರಿಗೆ ಸೇರಿದ ಯುಟರ್ನ್ ಹೆಸರಿನ ಡಾಬಾಗೆ (Daba) ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಡಾಬಾದಲ್ಲಿದ್ದ ಕೆಲಸಗಾರನ ಮೇಲೆಯೂ ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೆಲಸಗಾರ ಸಹ ಸಾವನ್ನಪ್ಪಿದ್ದನು. ಸೋಲದೇವನಹಳ್ಳಿಯಲ್ಲಿ ದೀಪಕ್, ಸಚಿನ್ ಹಾಗೂ ಅರ್ಪಿತ್ ಮೂವರು ಪಾಲುದಾರಿಕೆಯಲ್ಲಿ ಡಾಬಾ ನಡೆಸುತ್ತಿದ್ದರು.