ಶಾಲೆಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಆಟವಾಡುವುದಾಗಿ ಮನೆಯಲ್ಲಿ ಹೇಳಿ ಕೆರೆಗೆ ಮೀನು ಹಿಡಿಯಲು ಹೋಗಿದ್ದ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಮನಗರ (ಏ.10): ಶಾಲೆಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಆಟವಾಡುವುದಾಗಿ ಮನೆಯಲ್ಲಿ ಹೇಳಿ ಕೆರೆಗೆ ಮೀನು ಹಿಡಿಯಲು ಹೋಗಿದ್ದ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾರಸಂದ್ರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮನೆಯಲ್ಲಿ ಆಟವಾಡುವುದಾಗಿ ಹೇಳಿದ್ದ ಮೂವರು ಮಕ್ಕಳು ಕೆರೆಯ ಬಳಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಒಬ್ಬ ಬಾಲಕ ಮೀನು ಹಿಡಿಯಲು ಕೆರೆಯ ಆಳದ ಜಾಗದಲ್ಲಿ ಹೋಗಿದ್ದಾನೆ. ಅವನನ್ನು ರಕ್ಷಣೆ ಮಾಡಲು ಇನ್ನೊಬ್ಬ ಬಾಲಕ ಕೂಡ ಹೋಗಿ ಅವನೂ ಕೂಡ ಮುಳುಗಿದ್ದಾನೆ. ಇದನ್ನು ನೋಡಿದ ಇನ್ನೊಬ್ಬ ಬಾಲಕ ಕೆರೆಯ ದಡದಿಂದ ಊರಿನತ್ತ ಭಯದಿಂದಲೇ ಓಡಿ ಹೋಗಿದ್ದಾನೆ. ಇಬ್ಬರು ಕೆರೆಯಲ್ಲಿ ಮುಳುಗಿದರೂ ಭಯದಲ್ಲಿ ಈ ವಿಚಾರವನ್ನು ಯಾರಿಗೂ ಹೇಳದೇ ಗಾಬರಿಯಾಗಿದ್ದಾನೆ. ನಂತರ, ಇವರ ವರ್ತನೆಯನ್ನು ಕಂಡು ಕೇಳಿದಾಗ ನಡೆದ ವಿಚಾರವನ್ನು ಹೇಳಿದ್ದಾನೆ. ನಂತರ ಗ್ರಾಮಸ್ಥರು ಕೆರೆಯ ಬಳಿ ಹೋಗಿ ನೋಡಿದಾಗ ಕೆರೆಯ ದಡದಲ್ಲಿ ಚಪ್ಪಲಿ ಹಾಗೂ ಬಟ್ಟೆಗಳು ಕಂಡುಬಂದಿದ್ದು, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಖಚಿತವಾಗಿದೆ.
ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ
ಒಂದೇ ಮನೆಯ ಇಬ್ಬರು ಬಾಲಕರು: ಅಪೀಧ್ (11), ಇಬ್ರಾಹಿಂ (12) ಒಂದೇ ಮನೆಯ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಈ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಮಾರಸಂದ್ರ ಎಂಬ ಗ್ರಾಮದಲ್ಲಿ ಬಳಿಯಿರುವ ಮಡಿಕೆ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುವ ಸಂದರ್ಭದಲ್ಲಿ ಮೂವರು ಬಾಲಕರ ಪೈಕಿಯಲ್ಲಿ ಒಬ್ಬ ಕಾಲು ಜಾರಿ ಬಿದ್ದು ಆತನನ್ನು ರಕ್ಷಿಸಲು ಹೋಗಿ ಇನ್ನೊಬ್ಬ ಬಾಲಕ ಸಾವನ್ನಪ್ಪಿದ್ದಾನೆ. ಸ್ವಲ್ಪ ಸಮಯದ ನಂತರ ಸ್ಥಳೀಯರು ಬಂದು ನೋಡಿದ್ದು ಇಬ್ಬರು ಬಾಲಕರು ಮೃತಪಟ್ಟಿರುವುದು ಖಚಿತವಾಗಿದೆ.
ಮಕ್ಕಳ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ: ಗ್ರಾಮದ ಕೆಲವು ನುರಿತ ಈಜುಗಾರರು ಕೆರೆಗೆ ಇಳಿದು ಬಾಲಕರನ್ನು ಹುಡುಕಾಡಿದರೂ ಮೃತದೇಹ ಸಿಗಲಿಲ್ಲ. ನಂತರ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದಿಂದ ಬಾಲಕರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಸಂಜೆ ವೇಳೆಗೆ ಇಬ್ಬರ ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ. ಮಕ್ಕಳ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!
ರಜೆಯ ವೇಳೆ ಮಕ್ಕಳ ಬಗ್ಗೆ ಕಾಳಜಿವಹಿಸಿ: ಇನ್ನು ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿರುತ್ತದೆ. ಇನ್ನು ಮನೆಯಲ್ಲಿ ಯಾರಾದರೊಬ್ಬರು ಪೋಷಕರು ಇದ್ದರೆ ಮಕ್ಕಳನ್ನು ಕಾಳಜಿ ಮಾಡುತ್ತಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು ಮನೆಯ ಬಳಿ ಆಟವಾಡಲು ಬಿಟ್ಟು ತಂದೆ ತಾಯಿ ಕೂಲಿ ಅಥವಾ ಜಮೀನಿನ ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ. ಆದರೆ, ಮಕ್ಕಳು ಕೇವಲ ಆಟವಾಡಿಕೊಂಡು ಇರದೇ ಹೊಲ, ಗದ್ದೆ, ತೋಟ, ಹಣ್ಣು ಕೀಳುವುದು, ಬಾವಿಗೆ ಇಣುಕುವುದು, ನದಿಗೆ ಈಜಲು ಹೋಗುವುದು, ಮೀನು ಹಿಡಿಯುವುದು, ಕಲ್ಲು ಎಸೆಯವುದು ಹೀಗೆ ಹಲವು ಅಪಾಯಕಾರಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ಬಗ್ಗೆ ಪೋಷಕರು ಗಮನಿಸದೇ ಹೋದರೆ ಹೀಗೆ ಮಕ್ಕಳು ಸಾವನ್ನಪ್ಪಿ ಪ್ರಾಯಶ್ಚಿತ ಪಡಬೇಕಾದ ಸಂಗತಿ ಬರುತ್ತದೆ.