ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ

By Sathish Kumar KH  |  First Published Apr 10, 2023, 5:05 PM IST

* ಅನೈತಿಕ ಸಂಬಂಧ ಬಯಲಾಗುವ ಭಯದಲ್ಲಿ ಪತ್ನಿಯನ್ನು ಕೊಲೆಗೈದ ಗಂಡ.
* ಪೋಟೋಗ್ರಾಫರ್ ಕೆಲಸ‌ ಮಾಡೋ ಅಂದ್ರೆ, ಅನೈತಿಕ ಕೆಲಸ ಮಾಡ್ತಿದ್ದ ಆಸಾಮಿ
* ಆರೋಪಿಯನ್ನು ಹಿಡಿದು ತಕ್ಕ ಶಿಕ್ಷೆ ಕೊಡಿ ಎಂದು ಮೃಳ ಸಂಬಂಧಿಕರ ಆಕ್ರೋಶ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಏ.10): ಸಂಸಾರದಲ್ಲಿ ಗಂಡ ಹೆಂಡತಿ ಇಬ್ಬರೂ ಹೊಂದಾಣಿಕೆಯಿಂದ ಹೋದಲ್ಲಿ ಮಾತ್ರ ಸುಖವಾಗಿ ಸಾಗುತ್ತದೆ. ಆದರೆ, ಇಲ್ಲೊಬ್ಬ ಪತಿರಾಯ ಮನೆಯಲ್ಲಿ ಸುಂದರ ಪತ್ನಿ ಹಾಗೂ ಮುದ್ದಾದ ಮಡದಿ ಇದ್ದರೂ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ತನ್ನ ಅನೈತಿಕ ಸಂಬಂಧ ಎಲ್ಲಿ ಬಯಲಾಗುತ್ತದೆಯೋ ಎಂದು ತನ್ನ ಪತ್ನಿಯನ್ನು ಹತ್ಯಗೈದು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾನೆ.

Tap to resize

Latest Videos

ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಪತಿ ಫೋಟೋ ಗ್ರಾಫರ್‌ ಆಗಿದ್ದು, ಆರ್ಥಿಕ ಸಮಸ್ಯೆಯೇನೂ ಇರಲಿಲ್ಲ. ಇನ್ನು ಪತ್ನಿ ಗೃಹಿಣಿಯಾಗಿದ್ದು, ಇಬ್ಬರು ಮಕ್ಕಳೊಂದಿಗೆ ತುಂಬು ಸಂಸಾರವನ್ನು ನಿಭಾಯಿಸುತ್ತಿದ್ದಳು. ಆದರೆ, ಸುಖ ಸಂಸಾರಕ್ಕೆ ಮತ್ತೊಬ್ಬ ಮಹಿಳೆ ಎಂಟ್ರಿ ಕೊಟ್ಟಿದ್ದಾಳೆ. ಆಕೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ ಪತಿರಾಯ ಕದ್ದು ಮುಚ್ಚಿ ಆಟವಾಡುತ್ತಲೇ ಇದ್ದ. ಆತನ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡು ಪ್ರಶ್ನೆ ಮಾಡಿದ್ದಾಳೆ. ಆದರೆ, ಈ ವಿಚಾರ ಪತ್ನಿಗೆ ಗೊತ್ತಾಗುತ್ತಿದ್ದಂತೆ ಜಗಳ ಆರಂಭಿಸಿ ಆಕೆಯ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾನೆ. ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ.

ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!

ಹುಡುಗಿಯರಿಗೆ ಬಲೆ ಬೀಳಿಸೋದೆ ಈತನ ಕಾಯಕ: ಮೃತೆ ಗೃಹಿಣಿಯಲ್ಲಿ ರೋಜಾ (27) ಎಂದು ಗುರುತಿಸಲಾಗಿದೆ. ಪತಿ ಯರಿಸ್ವಾಮಿಯೇ ಪತ್ನಿ ಕೊಲೆಗೈದ ಪಾತಕಿ ಆಗಿದ್ದಾನೆ. ಮದುವೆ ಅಂದಿನಿಂದಲೂ ತನ್ನ ಪತ್ನಿಗೆ ಯರಿಸ್ವಾಮಿ ಕಿರುಕುಳ ಕೊಡುತ್ತಲೇ ಬರುತ್ತಿದ್ದನು. ಇದನ್ನು ಸಹಿಸಿಕೊಂಡು ಪತ್ನಿ ಜೀವನ ಮಾಡುತ್ತಿದ್ದಳು.  ವೃತ್ತಿಯಲ್ಲಿ ಅವನು ಪೋಟೋಗ್ರಾಫರ್ ಆಗಿದ್ದು, ತನ್ನದೇ ಸ್ವಂತ ಸ್ಟುಡಿಯೋ ವೊಂದನ್ನು ನಡೆಸುತ್ತಿರುತ್ತಾನೆ. ಆದರೆ, ಫೋಟೋ ತೆಗೆದುಕೊಂಡು ಆರಾಮಾಗಿ ಜೀವನ ಮಾಡಬೇಕಾಗಿದ್ದವ, ಶೋಕಿಗೆ ಬಿದ್ದು ಸ್ಟುಡಿಯೋಗೆ ಬರುವ ಎಲ್ಲಾ ಹೆಣ್ಣು ಮಕ್ಕಳ ಮೇಲೆ ಕಣ್ಣಾಕುತ್ತಾ ಬಂದಿದ್ದಾನೆ. ಈ ಶೋಕಿಯನ್ನು ನೋಡಿ ಒಂದು ಹುಡುಗಿ ಕೂಡ ಬಲೆಗೆ ಬಿದ್ದಿದ್ದು, ಆಕೆಯೊಂದಿಗೆ ಅನೈತಿಕ ಸಂಬಂಧವನ್ನೂ ಮುಂದುವರೆಸಿದ್ದಾನೆ. 

ರಾಜಿ ಮಾಡಿದರೂ ಅನೈತಿಕ ಸಂಬಂಧ ಬಿಡಲಿಲ್ಲ: ಇನ್ನು ಹುಡುಗಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಕೆಲಸವನ್ನೂ ಸರಿಯಾಗಿ ಮಾಡದೇ ಶೋಕಿ ಮಾಡುತ್ತಾ ತಿರುಗುತ್ತಿದ್ದ ಗಂಡನ ವರಸೆ ನೋಡಿ ಅನುಮಾನದಿಂದ ಕಾದು ನೋಡಿದ್ದಾಳೆ. ಆಗ ತನ್ನ ಗಂಡನಿಗೆ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ತಿಳಿದು, ಮನೆಯ ಹಿರಿಯರಿಗೂ ತಿಳಿಸಿದ್ದಾಳೆ.  ಇನ್ನು ವಿಚಾರ ತಿಳಿದ ಬಳಿಕ ಯುವತಿಯ ಮನೆಯವರು ಕೂರಿಸಿ ರಾಜಿ ಪಂಚಾಯ್ತಿ ಮಾಡಿದ್ದಾರೆ. ನೀನು ಈ ರೀತಿ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಪತ್ನಿ ರೋಜಾ ತನ್ನ ಗಂಡನೇ ಸರ್ವಸ್ವ ಎಂದು ಆತನ ಪರವೇ ಮಾತನಾಡಿದ್ದಾಳೆ. ಇಂದಲ್ಲ ನಾಳೆ ಸರಿ ಹೋಗಗುತ್ತಾರೆಂದು ಸುಮ್ಮನಾಗಿದ್ದರು. ಆದರೆ, ಮಹಾ ದುರಂತವೇ ಸಂಭವಿಸಿದೆ.

ಪತ್ನಿ ಕೊಲೆ ಮಾಡಿ ಆಸ್ಪತ್ರೆಗೆ ತಂದು ಹಾಕಿದ: ಆದರೆ ಪೋಟೋಗ್ರಾಫರ್ ಯರಿಸ್ವಾಮಿ ಯಡವಟ್ಟು ಆಟಗಳು ದಿನೇ ದಿನೇ ಹೆಚ್ಚಾಗಿದ್ದಕ್ಕೆ, ಪತ್ನಿ ಪ್ರಶ್ನೆ ಮಾಡಿ‌ ಜಗಳಾಡಿದ್ದಾಳೆ. ಇದರಿಂದ ಕೋಪಿತಗೊಂಡ ಗಂಡ ತನ್ನ ಅನೈತಿಕ ಸಂಬಂಧ ಎಲ್ಲಿ ಬಯಲಾಗುತ್ತೋ ಎಂದು ಪತ್ನಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ಮನಬಂದಂತೆ ಥಳಿಸಿರೋ ಪರಿಣಾಮ ತೀವ್ರ ರಕ್ತಸ್ರಾವ ಆಗಿದೆ. ಸಂಜೆ ವೇಳೆ ತಾನೇ ಅಕ್ಕ ಪಕ್ಕದವರಿಗೆ ಏನೂ ಗೊತ್ತಾಗಬಾರದು ಎಂದು ನಾಟಕವಾಡಿ ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾನೆ.

Bengaluru Crime: ಕುದುರೆ ಮೇಲೆ ಕೂರಿಸಲಿಲ್ಲವೆಂದು ಅಪ್ರಾಪ್ತ ಬಾಲಕನ ಕೊಲೆ!

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶವ ಬಿಟ್ಟು ಪರಾರಿ: ಪ್ರಥಮ ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಇನ್ನು ಕೊಲೆ ಆರೋಪ ಎಲ್ಲಿ ತನ್ನ ತಲೆ ಮೇಲೆ ಬರುತ್ತೋ ಎಂದು ಪರಾರಿ ಆಗಿದ್ದಾನೆ. ಈ ಘಟನೆಯು ಮೃತ ಮಹಿಳೆ ತವರು ಮನೆವರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ ಶವಗಾರದ ಬಳಿ ರೋಧನೆ ಯುವತಿ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ನಂತರ ಪತಿಯಿಂದಲೇ ಪತ್ನಿ ಕೊಲೆ ಅಗಿದೆ ಎಂದು ಮೃತ ಮಹಿಳೆ ಕುಟುಂಬಸ್ಥರು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಕ್ಕ ಮನೆಗೆ ಬಂದರೂ ಸತ್ಯ ಬಾಯಿಬಿಡದ ಮೃತೆ ರೋಜಾ: ಈ ಘಟನೆ ಆಗುವುದಕ್ಕೂ ಒಂದೆರಡು ದಿನ ಮುಂಚೆ ಅದೇ ಮನೆಗೆ ಮೃತ ರೋಲಾಳ ಅಕ್ಕ ಪೂಜಾ ಆಕೆಯ ಮನೆಗೆ ಹೋಗಿದ್ದಾರೆ. ಅವಾಗ ಯಾವುದೇ ಜಗಳ ನಡೆದಿಲ್ಲ. ತನ್ನ ಗಂಡನ ಅನೈತಿಕ ಸಂಬಂಧ ಬಯಲಾದರೆ ಎಲ್ಲಿ ಸಂಸಾರ ಒಡೆಯುತ್ತದೆ. ನಾನು ಮತ್ತು ಎರಡು ಪುಕ್ಕ ಮಕ್ಕಳು ಅನಾಥ ಆಗಬೇಕಾದೀತು ಎಂದು ಮೃತ ಯುವತಿ ತನ್ನ ಅಕ್ಕನ‌ ಬಳಿ ಯಾವ ವಿಚಾರವನ್ನು ಪ್ರಸ್ತಾಪಿಸಿಲ್ಲ. ಇನ್ನು ಪತಿಯ ದೌರ್ಜನ್ಯ ಮದುವೆ ಮಾಡಿಕೊಟ್ಟಾಂಗಿನಿಂದ‌ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಕಿರುಕುಳ ಕೊಡುವ ವಿಚಾರ ಗೊತ್ತಿದ್ದು, ಅಕ್ಕನೂ ಸುಮ್ಮನೆ ವಾಪಸ್‌ ಹೋಗಿದ್ದಾರೆ.

ಹಲವು ಹುಡುಗಿಯರ ಜೊತೆ ಅನೈತಿಕ ಸಂಬಂಧ: ಈ ಕುರಿತು ಮಾತನಾಡಿದ ಮೃತಳ ಅಕ್ಕ ಪೂಜಾ, ತನ್ನ ತಂಗಿಯ ಗಂಡನಿಗೆ ಒಂದಲ್ಲ ಎರಡಲ್ಲ ಸುಮಾರು ಹುಡುಗಿಯರ ಜೊತೆ ಅವನಿಗೆ ಅನೈತಿಕ ಸಂಬಂಧ ಇದೆ. ಅದೇ ಕಾರಣಕ್ಕೆ ನನ್ನ ತಂಗಿಯನ್ನು ಇಂದು ಕೊಲೆ ಮಾಡಿ ನಡುರಸ್ತೆಯಲ್ಲಿ ಬಿಟ್ಟು ಕಳ್ಳತನ ರೀತಿ ಪರಾರಿ ಆಗಿದ್ದಾನೆ. ಅವನಿಗೆ ಉಗ್ರ ಶಿಕ್ಷೆ ಆಗಬೇಕು. ಎರಡು ಪುಟ್ಟ ಕಂದಮ್ಮಗಳಿಗೆ ಇವಳ ಸಾವಿನ ಸುದ್ದಿ ಕೂಡ ತಿಳಿಸದ ಪರಿಸ್ಥಿತಿ ನಮಗೆ ಬಂದಿದೆ. ಆದ್ದರಿಂದ ನಮಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಬೇಕು, ಕೊಲೆ ಮಾಡಿ ಪರಾರಿ ಆಗಿರುವ ಯರಿಸ್ವಾಮಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮೃತ ಯುವತಿ ಸಹೋದರಿಯರು ಆಗ್ರಹಿಸಿದ್ದಾರೆ.

click me!