
ಮಾಗಡಿ(ಡಿ.23): ಅಡುಗೆ ಚೆನ್ನಾಗಿಲ್ಲವೆಂಬ ವಿಚಾರಕ್ಕೆ ಜಗಳವಾಡಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ರಾಮನಗರ(Ramanagara) ಜಿಲ್ಲೆಯ ದಮ್ಮನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಸಿದ್ದಮ್ಮ (55) ಈಕೆಯ ಪುತ್ರಿ ಸುಮಿತ್ರಾ (30), ಸುಮೀತಾಳ ಪತಿ ಹನುಮಂತರಾಜು (35) ಆತ್ಮಹತ್ಯೆ ಮಾಡಿಕೊಂಡವರು. ಈ ಮೂವರೊಂದಿಗೆ ಕೆರೆಗೆ ಹಾರಿದ್ದ ಕೀರ್ತನಾ(11) ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಅಕ್ಕ ಸಿದ್ದಮ್ಮನ ಮಗಳಾದ ಸುಮಿತ್ರಾಳನ್ನು ವಿವಾಹವಾಗಿ ಅಕ್ಕನ ಮನೆಯಲ್ಲೇ ತಂಗಿದ್ದ ಹನುಮಂತರಾಜು ಮಂಗಳವಾರ ರಾತ್ರಿ ಕುಡಿದು ಬಂದು ಅಡುಗೆ ಚೆನ್ನಾಗಿಲ್ಲ ಎಂದು ಜಗಳ ತೆಗೆದಿದ್ದಾನೆ. ಈ ವೇಳೆ ಮನನೊಂದು ಸಿದ್ದಮ್ಮ ಕೆರೆಗೆ(Lake) ಹಾರಿದ್ದಾಳೆ. ಬಳಿಕ ಪತ್ನಿ ಸುಮಿತ್ರಾ, ಕೀರ್ತನಾ ಮತ್ತು ಹನುಮಂತರಾಜು ಕೂಡ ಕೆರೆಗೆ ಹಾರಿದ್ದಾರೆ. ಈ ವೇಳೆ ಮತ್ತೊರ್ವ ಪುತ್ರಿ ಚಂದನಾ ನೀರಿಗೆ ಹಾರದೆ ಕಿರುಚಾಡಿದ್ದಾಳೆ. ಗ್ರಾಮಸ್ಥರು ಬಂದು ಕೀರ್ತನಾಳನ್ನು ರಕ್ಷಿಸಿದ್ದಾರೆ. ಆದರೆ ಉಳಿದ ಮೂವರು ಮೃತಪಟ್ಟಿದ್ದರು(Death).
Tumakuru Family Suicide : ತುಮಕೂರು ಎಇಇ ಕುಟುಂಬ ಆತ್ಮಹತ್ಯೆಗೆ ಬೇರೆ ಟ್ವಿಸ್ಟ್
ಭಯಬೀತಳಾಗಿ ಕಿರಿಚಾಡಿಕೊಂಡು ನಡೆದ ವಿಷಯದ ಬಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾಳೆ. ಗ್ರಾಮಸ್ಥರು ಕೆರೆಯ ಬಳಿ ತೆರಳುವಷ್ಟರಲ್ಲಿ ಮಗಳು, ಅಳಿಯ, ಅತ್ತೆ ಮೃತಪಟ್ಟಿದ್ದಾರೆ. ಈ ವೇಳೆ ಕೀರ್ತನಾಳನ್ನು ರಕ್ಷಿಸಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ(Hospital) ದಾಖಲಿಸಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ಕೌಟುಂಬಿಕ ಕಲಹ: ಪತ್ನಿ ಆತ್ಮಹತ್ಯೆ; ಪತಿ ಬಂಧನ
ಬೆಂಗಳೂರು(Bengaluru): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತು ಗೃಹಿಣಿಯೊಬ್ಬರು(House Wife) ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಉಲ್ಲಾಳ ಸಮೀಪದ ಬಸ್ತಿ ಗ್ರಾಮದಲ್ಲಿ ನಡೆದಿದೆ.
ಬಸ್ತಿ ನಿವಾಸಿ ರಂಜಿತಾ(26) ಮೃತ ದುರ್ದೈವಿ. ಈ ಘಟನೆ ಸಂಬಂಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಮೃತಳ ಪತಿ ಮಂಜುನಾಥ್‌ನನ್ನು ಜ್ಞಾನಭಾರತಿ ನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest).
ಖಾಸಗಿ ಕಂಪನಿ ನೌಕರ ಮಂಜುನಾಥ್ ಹಾಗೂ ರಂಜಿತಾ ಐದು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದು(Love Marriage), ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿದ್ದು, ಸಣ್ಣಪುಟ್ಟವಿಷಯಗಳಿಗೆ ಮನೆಯಲ್ಲಿ ಇಬ್ಬರಿಗೂ ಜಗಳವಾಗುತ್ತಿತ್ತು. ಇದೇ ರೀತಿ ಭಾನುವಾರ ರಾತ್ರಿ ಸಹ ದಂಪತಿ ಮಧ್ಯೆ ಜಗಳವಾಗಿದೆ. ಈ ಗಲಾಟೆ ಬಳಿಕ ಕೋಣೆಗೆ ಮಲಗಲು ಹೋದ ರಂಜಿತಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರುದಿನ ಮುಂಜಾನೆ ಪತ್ನಿ ಕೊಠಡಿಗೆ ಮಂಜುನಾಥ ತೆರಳಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Lover Commit Suicide: ಪ್ರೇಮಿ ಸಾವಿವ ಸುಳ್ಳು ಸುದ್ದಿಗೆ ಪ್ರೇಯಸಿ ಬಲಿ..!
ತಮ್ಮ ಮಗಳ ಸಾವಿಗೆ ಆಳಿಯ ಕಾರಣ ಎಂದು ಆರೋಪಿಸಿ ಜ್ಞಾನಭಾರತಿ ಠಾಣೆಯಲ್ಲಿ ಮೃತಳ ತಾಯಿ ಭಾಗ್ಯಮ್ಮ ದೂರು(Complaint) ನೀಡಿದ್ದು, ಅದರ ಆಧಾರದ ಮೇಲೆ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ(Karkala): ಮದ್ಯಪಾನ(Alcohol) ಮಾಡಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಹೆಪ್ಪಳ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿ ಸುಂದರ (50) ಎಂಬವರು ವಿಪರೀತ ಮದ್ಯಪಾನ ಮಾಡುತ್ತಿದ್ದು, ಮಾನಸಿಕ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಗುಣವಾಗಿರಲಿಲ್ಲ. ಡಿ.22ರ ಬೆಳಗ್ಗೆ ಅವರು ಮನೆ ಹತ್ತಿರದ ಹಾಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ