Ambergris Smuggling : ವಿಜಯನಗರಕ್ಕೂ ಕಾಲಿಟ್ಟ ಅಂಬರ್‌ ಗ್ರೀಸ್  ಮಾರಾಟ ಜಾಲ!

By Suvarna NewsFirst Published Dec 22, 2021, 8:54 PM IST
Highlights

* ತಿಮಿಂಗಿಲ ವಾಂತಿ ಮಾರಾಟ ಪ್ರಕರಣ
* ಗಣಿ ಜಿಲ್ಲೆಯಲ್ಲಿಯೂ ವ್ಯಾಪಕ ಜಾಲ
* ಭಾರೀ ಮೊತ್ತಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು 

ವಿಜಯನಗರ (ಡಿ. 22) ಬೆಂಗಳೂರು (Bengaluru) ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ  ತಿಮಿಂಗಿಲದ ವಾಂತಿ ಮಾರಾಟಗಾರರ  ಬಂಧಿಸಿದ ಪ್ರಕರಣ ವರದಿಯಾಗಿತ್ತು. ವಿದೇಶ ಮತ್ತು ಬೃಹತ್ ನಗರಗಳಲ್ಲಿ ನಡೆಸುತ್ತಿರೋ ದಂಧೆ ಇದೀಗ ಗಣಿ ನಾಡು ಬಳ್ಳಾರಿಗೂ (Ballari) ಕಾಲಿಟ್ಟಿದೆ. ವಿಜಯನಗರ (Vijayanagara)ಜಿಲ್ಲೆ ಪೊಲೀಸರ ಭರ್ಜರಿ ಕಾರ್ಯಾಚರಣೆ 

ಒಂದೂವರೇ ಕೋಟಿ ಮೌಲ್ಯದ ತಿಮಿಂಗಲ ವಾಂತಿಯನ್ನು ವಶಕ್ಕೆ ಪಡೆಯಲಾಗಿದೆ. ಒಂದೂವರೇ ಕೆಜಿ ತಿಮಿಂಗಲ ವಾಂತಿ ಮಾರಾಟಕ್ಕೆ ಯತ್ನ ಮಾಡುತ್ತಿದ್ದರು.  ಕೊಪ್ಪಳದ ವೆಂಕಟೇಶ್, ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ಮಹೇಶ್ ಮತ್ತು ವಿಜಯಪುರದ ಶ್ರೀಧರ್  ಎಂಬುವರನ್ನು ಬಂಧಿಸಲಾಗಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಹಾರಾಷ್ಟ್ರಕ್ಕೆ ಸಾಗಿಸಿದ್ದರು: ಕರ್ನಾಟಕದಿಂದ ಸಾಗಿಸಲಾಗಿದ್ದ ಸುಮಾರು 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ (ಆ್ಯಂಬರ್ಗಿಸ್‌) ಯನ್ನು ಮಹಾರಾಷ್ಟ್ರದ ಠಾಣೆ ಅರಣ್ಯ ವಿಭಾಗದ ಸಿಬ್ಬಂದಿ ವಶಪಡಿಸಿಕೊಂಡಿದ್ದರು.. ಪ್ರಕರಣ ಸಂಬಂಧ ಕರ್ನಾಟಕ ಮೂಲದ ಓರ್ವ ಸೇರಿದಂತೆ 5 ಜನರನ್ನು ಬಂಧಿಸಲಾಗಿತ್ತು.

ಮಲ್ಲೇಶ್ವರ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಬಳಿ ಇತ್ತು 17 ಕೋಟಿ ರೂ. ಅಂಬರ್‌ ಗ್ರೀಸ್ !

 ಬೆಂಗಳೂರು ಮಲ್ಲೇಶ್ವರದ ಪೊಲೀಸರು (Bengaluru Police) ಭರ್ಜರಿ  ಕಾರ್ಯಾಚರಣೆ ನಡೆಸಿದ್ದು ತಿಮಿಂಗಲದ ವಾಂತಿ ಅಂಬರ್ ಗ್ರೀಸ್ (Ambergris)ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದರು.  ಪುನೀತ್ ಕುಮಾರ್ , ಮಧುಕುಮಾರ್ , ನಂದೀಶ್, ಯೋಗೇಶ್ , ಹಾಗೂ ಗೋಪಾಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 17 ಕೋಟಿ ರೂ. ಬೆಲೆಬಾಳುವ ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿತ್ತು.

ಇತ್ತೀಚೆಗೆ ಡ್ರಗ್ಸ್ ಜತೆ ಈ ಅಂಬರ್ ಗ್ರೀಸ್ ಮಾರಾಟದ ಪ್ರಕರಣಗಳು ಒಂದಾದ ಮೇಲೆ ಒಂದು ದಾಖಲಾಗುತ್ತಿದೆ. ಪೊಲೀಸರ ಗಾಳಕ್ಕೆ ಆರೋಪಿಗಳು ಸೆರೆ ಸಿಕ್ಕುತ್ತಿದ್ದಾರೆ.

ಘನ ಮೇಣದ ವಾಸನೆಯಿಂದ ಕೂಡಿರುವ ಅಂಬರ್ ಗ್ರಿಸ್ ನ್ನು  ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ  1.7  ಕೋಟಿ ರೂ.  ಮೌಲ್ಯವಿದೆ ಎನ್ನುವುದು ಲೆಕ್ಕಾಚಾರ.

ಒಂದಿಷ್ಟು ಮಾಹಿತಿ;  ಹಲವು ದೇಶಗಳು ಅಂಬರ್ ಗ್ರೀಸ್ ಅಥವಾ ಗ್ರೇ ಆಂಬರ್ ಕಾನೂನು ಬಾಹಿರ ಚಟುವಟಿಗೆ ಎಂದು ಘೋಷಣೆ ಮಾಡಿದವು. ಅಂಬರ್ ಗ್ರೀಸ್ ಹಿಡಿದುಕೊಂಡು ನಡೆದರೆ ಪ್ಲೇಗ್ ಬರುವುದಿಲ್ಲ ಎಂಬ ನಂಬಿಕೆಯೂ ಒಂದು ಕಾಲದಲ್ಲಿತ್ತು.  ತಲೆನೋವು, ಒತ್ತಡ ನಿವಾರಣೆಗೆ ಇದನ್ನು ಔಷಧ ಎಂದು ಸುದ್ದಿ ಹಬ್ಬಿಸಿದ್ದರೂ ಇದೆ.  ಹಾಲಿವುಡ್ (Hollywood)ನಲ್ಲಿ ಇದೇ ಅಂಬರ್ ಗ್ರೀಸ್ ಕತೆ ಇಟ್ಟುಕೊಂಡು ಸಿನಿಮಾಗಳು ಆಗಿವೆ.  ಅಳವಿನ ಅಂಚಿನಲ್ಲಿರುವ ತಿಮಿಂಗಿಲ ರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ನಡುವೆ ಮಾತುಕತೆಯೂ ಆಗಿದೆ. 

ವೀರ್ಯ ತಿಮಿಂಗಿಲದ ಪಿತ್ತರಸ ನಾಳದ ಸ್ರವಿಸುವಿಕೆಯಿಂದ ಆ್ಯಂಬರ್ ಗ್ರಿಸ್ ರೂಪುಗೊಳ್ಳುತ್ತದೆ. ಇದು ಸಾಮಾನ್ಯವಾಗಿ ದೈತ್ಯ ಸ್ಕ್ವಿಡ್‌ಗಳು ಅಥವಾ ಕಟಲ್‌ಫಿಶ್‌ನ ತ್ಯಾಜ್ಯವಾಗಿರುತ್ತದೆ. ತಿಮಿಂಗಿಲವು ಅದನ್ನು ವಾಂತಿ ಅಥವಾ ಮಲ ವಸ್ತುವಾಗಿ ಕಳುಹಿಸುತ್ತದೆ.  ಸಮುದ್ರದಲ್ಲಿ ತೇಲುತ್ತಿರುವಂತೆ ಕಂಡುಬರುತ್ತದೆ. 

ಆ್ಯಂಬರ್ ಗ್ರೀಸ್ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಪಾನ್, ಆಸ್ಟ್ರೇಲಿಯಾ ಮತ್ತು ಮೊಲುಕನ್ ದ್ವೀಪಗಳಲ್ಲಿ ಕಂಡುಬರುತ್ತದೆ. ಹಲವಾರು ವರ್ಷಗಳ ನಂತರ ತೂಕದಲ್ಲಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ. 

click me!