ಗೆಳತಿ ಮತಾಂತರಕ್ಕೆ ಯತ್ನಿಸಿದ್ದ ಮೊಹಮ್ಮದ್ ಸೂಫಿಯಾನ್‌ಗೆ ಗುಂಡೇಟು ಬಿದ್ದಿದೆ. ಪ್ರೇಯಸಿ ಹತ್ಯೆಗೈದ ಪಾಪಿ ಎನ್‌ಕೌಂಟರ್ ಬಳಿಕ ಉತ್ತರ ಪ್ರದೇಶದಲ್ಲಿ ಸೆರೆಯಾಗಿದ್ದಾನೆ.
ಲಖನೌ: ಇಸ್ಲಾಂ (Islam) ಧರ್ಮಕ್ಕೆ ಮತಾಂತರವಾಗಿ (Conversion) ಮದುವೆಯಾಗಲು (Marriage) ಒಪ್ಪಲಿಲ್ಲ ಎಂದು ತನ್ನ ಹಿಂದೂ (Hindu) ಪ್ರೇಯಸಿಯನ್ನು (Lover) ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ನೂಕಿ ಹತ್ಯೆಗೈದಿದ್ದ ಮೊಹಮ್ಮದ್ ಸೂಫಿಯಾನ್ (Mohammed Sufiyan) ಎಂಬಾತನನ್ನು ಉತ್ತರಪ್ರದೇಶದ ಪೊಲೀಸರು (Uttar Pradesh Police) ಎನ್‌ಕೌಂಟರ್ (Encounter) ನಡೆಸಿ ಸೆರೆಹಿಡಿದಿದ್ದಾರೆ. ಎನ್‌ಕೌಂಟರ್ ವೇಳೆ ಸೂಫಿಯಾನ್‌ನ ಬಲಗಾಲಿಗೆ ಗುಂಡೇಟು ಬಿದ್ದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರೊಂದಿಗೆ 19 ವರ್ಷ ನಿಧಿ (Nidhi Gupta) ಹತ್ಯೆ ಪ್ರಕರಣದ ಬೆನ್ನು ಹತ್ತಿದ್ದ ಉತ್ತರಪ್ರದೇಶ ಪೊಲೀಸರಿಗೆ ಯಶಸ್ಸು ಸಿಕ್ಕಿದಂತೆ ಆಗಿದೆ.
ಮೊಹಮ್ಮದ್ ಸೂಫಿಯಾನ್ ಮತ್ತು ನಿಧಿ ಇಬ್ಬರೂ ನೆರೆಹೊರೆಯವರಾಗಿದ್ದು ಪ್ರೀತಿಸುತ್ತಿದ್ದರು. 3 ದಿನಗಳ ಹಿಂದೆ ನಿಧಿಗೆ ಇಸ್ಲಾಂಗೆ ಮತಾಂತರ ಆಗಿ ಬಳಿಕ ನನ್ನ ಮದುವೆ ಆಗು ಎಂದು ಸೂಫಿಯಾನ್ ಒತ್ತಾಯಿಸಿದ್ದ. ಈ ಹಿನ್ನೆಲೆಯಲ್ಲಿ ನಿಧಿ ಪೋಷಕರು ಸೂಫಿಯಾನ್ ಮನೆಗೆ ಹೋಗಿ, ಆತನ ಪಾಲಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ನಿಧಿಯನ್ನು ಅಪಾರ್ಟ್‌ಮೆಂಟ್ ಮೇಲೆ ಎಳೆದೊಯ್ದ ಸೂಫಿಯಾನ್, ಆಕೆಯನ್ನು 4ನೇ ಅಂತಸ್ತಿನಿಂದ ತಳ್ಳಿ ಸಾಯಿಸಿ ಪರಾರಿಯಾಗಿದ್ದ.
ಇದನ್ನು ಓದಿ: Nidhi Gupta Murder Case: ಇಸ್ಲಾಂ ಸೇರದ್ದಕ್ಕೆ ನಾಲ್ಕನೇ ಅಂತಸ್ತಿಂದ ನೂಕಿ ಕೊಂದ..!
ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೂಫಿಯಾನ್ ಪತ್ತೆಗೆ ಪೊಲೀಸರು 9 ತಂಡ ರಚಿಸಿ ಯುಪಿ, ದೆಹಲಿ, ರಾಜಸ್ಥಾನ ರಾಜ್ಯಗಳಲ್ಲಿ ಹುಡುಕಾಟ ಆರಂಭಿಸಿದ್ದರು. ಈ ಪೈಕಿ ಒಂದು ಪೊಲೀಸರ ತಂಡಕ್ಕೆ ಸೂಫಿಯಾನ್ ದುಬಗ್ಗಾದಲ್ಲಿನ ಇರುವ ಮಾಹಿತಿ ಸಿಕ್ಕಿ ಅಲ್ಲಿಗೆ ತೆರಳಿತ್ತು.
ಪೊಲೀಸರು ಅಲ್ಲಿಗೆ ತೆರಳಿದ ವೇಳೆ ಸೂಫಿಯಾನ್ ಪೊಲೀಸರ ಮೇಲೇ ಗುಂಡು ಹಾರಿಸಿದ್ದ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ ವೇಳೆ ಆತನ ಕಾಲಿಗೆ ಗುಂಡು ಬಿದ್ದಿದ್ದು, ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ. ಗುಂಡೇಟು ತಗುಲಿರುವ ಸೂಫಿಯಾನನ್ನು ಲಖನೌದ ಕೆಜಿಎಂಯು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್ ರಾಸಲೀಲೆ..!
ನಿಧಿ ಗುಪ್ತಾಳ ‘ವಿಡಿಯೋ’ವನ್ನು ಆರೋಪಿ ಇರಿಸಿಕೊಂಡಿದ್ದ. ಅದನ್ನು ಇರಿಸಿಯೇ ಮತಾಂತರದ ಬೇಡಿಕೆ ಇಟ್ಟಿದ್ದ ಎಂದು ಮೂಲಗಳು ಹೇಳಿವೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶ ರಾಜ್ಯ ರಾಜಧಾನಿ ಲಖನೌನ ದುಬಗ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಕುಂಜ್ ಸೆಕ್ಟರ್ ಎಚ್ ನಲ್ಲಿ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಆಕೆಯನ್ನು ತಳ್ಳಲಾಗಿತ್ತು. ನಿಧಿ ಗುಪ್ತಾಳನ್ನು ತಳ್ಳಿದ ಬಳಿಕವೂ ಆಕೆ ಬದುಕುಳಿದಿದ್ದಳು. ನಂತರ, ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಆಘಾತ ಕೇಂದ್ರದಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದ ಹೆಚ್ಚುವರಿ ಡಿಸಿಪಿ (ಪಶ್ಚಿಮ) ಸಿಎನ್ ಸಿನ್ಹಾ, ಆರೋಪಿಯನ್ನು ಮೊಹಮ್ಮದ್ ಸೂಫಿಯಾನ್ ಎಂದು ಗುರುತಿಸಲಾಗಿದ್ದು, ಕೊಲೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದರು. ಹಾಗೂ, ಬಾಲಕಿಯ ತಾಯಿ ದುಬಗ್ಗಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಗರ್ಲ್ ಫ್ರೆಂಡ್ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್ ಮಾಡಿದ..!
ಅಲ್ಲದೆ, ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಯುತ್ತಿದೆ. ಯಾವುದೇ ಕೋಮು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ಹೆಚ್ಚಿನ ಜಾಗರೂಕತೆಯಿಂದ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದರು. ಸದ್ಯ, ಆರೋಪಿ ಮೊಹಮ್ಮದ್ ಸೂಫಿಯನ್‌ನನ್ನು ಎನ್‌ಕೌಂಟರ್ ಬಳಿಕ ಸೆರೆ ಹಿಡಿಯಲಾಗಿದೆ.