Instagramನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಪೋಸ್ಟ್ ಪ್ರಕರಣ; ದೂರು ದಾಖಲಾಗ್ತಿದ್ದಂತೆ ಅಲರ್ಟ್ ಆದ ಕಿರಾತಕರು!

By Ravi Janekal  |  First Published Aug 5, 2023, 10:40 AM IST

ಇನ್‌ಸ್ಟಾಗ್ರಾಮ್‌ನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ಅಪ್‌ಲೋಡ್ ಪ್ರಕರಣಕ್ಕೆ ಸಂಬಂಧ ದೂರು ದಾಖಲಾಗ್ತಿದ್ದಂತೆ ಕಿರಾತಕರು ಅಲರ್ಟ್ ಆಗಿದ್ದಾರೆ.


ಹುಬ್ಬಳ್ಳಿ (ಆ.5) : ಇನ್‌ಸ್ಟಾಗ್ರಾಮ್‌ನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ಅಪ್‌ಲೋಡ್ ಪ್ರಕರಣಕ್ಕೆ ಸಂಬಂಧ ದೂರು ದಾಖಲಾಗ್ತಿದ್ದಂತೆ ಕಿರಾತಕರು ಅಲರ್ಟ್ ಆಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್ ಡಿಲಿಟ್ ಮಾಡಿದ್ದಾರೆ. kashmira1990_0 ಇನ್ ಸ್ಟಾ ಅಕೌಂಟ್ ನಲ್ಲಿ  ವಿದ್ಯಾರ್ಥಿನಿಯರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್‌ ಮಾಡಿದ್ದರು. ಹುಬ್ಬಳ್ಳಿಯ ಸಮರ್ಥ ಕಾಲೇಜ್ ವಿದ್ಯಾರ್ಥಿನಿಯರ ಫೋಟೊ ಅಶ್ಲೀಲವಾಗಿ ಎಡಿಟ್ ಮಾಡಿದ್ದ ದುಷ್ಕರ್ಮಿಗಳು. ಅದನ್ನು ಕಾಲೇಜು ಇನ್‌ಸ್ಟಾಗ್ರಾಮ್ ಅಕೌಂಟ್‌ ನಲ್ಲೇ ಹ್ಯಾಕ್ ಮಾಡಿ ಹರಿಬಿಟ್ಟಿದ್ದರು. 

Tap to resize

Latest Videos

ಉಡುಪಿ ಪ್ರಕರಣ ಮಾಸುವ ಮುನ್ನವೇ ಹುಬ್ಬಳೀಲಿ ವಿದ್ಯಾರ್ಥಿನಿ ಅಶ್ಲೀಲ ಫೋಟೊ ಅಪ್ಲೋಡ್!

ಈ ಪ್ರಕರಣ ಸಂಬಂಧ ನಿನ್ನೆ ಸಮರ್ಥ ಕಾಲೇಜ್(Samarth collage hubballi) ವಿದ್ಯಾರ್ಥಿನಿಯರು ಸೈಬರ್ ಕ್ರೈಮ್ ಪೊಲೀಸ್ ಠಾಣೆ(Cyber crime police station)ಯಲ್ಲಿ ದೂರು ದಾಖಲಿಸಿದ್ರು. ದೂರು ದಾಖಲಾಗ್ತಿದ್ದಂತೆ ಕಾಲೇಜ್ ಗೆ ಭೇಟಿ ನೀಡಿದ್ದ ಪೊಲೀಸರು. ದೂರು ದಾಖಲಾದ ಬೆನ್ನಲ್ಲೆ ಇನ್ ಸ್ಟಾ ದಲ್ಲಿ ಹಾಕಿರೋ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯ

ವಿದ್ಯಾರ್ಥಿನಿಯರ ಫೋಟೊ ಬಳಸಿಕೊಂಡು ಅಶ್ಲೀಲವಾಗಿ ಇನ್ಸ್‌ಟಾದಲ್ಲಿ ಅಪ್ಲೋಡ್ ಆಗುತ್ತಿರುವ ಬಗ್ಗೆ ಜೂನ್ 20 ರಿಂದಲೇ  ಕಾಲೇಜ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದ ವಿದ್ಯಾರ್ಥಿನಿಯರು. ಆದರೂ ಕಾಲೇಜ್ ಆಡಳಿತ ಮಂಡಳಿ ದೂರು ದಾಖಲಿಸದೇ ನಿರ್ಲಕ್ಷ್ಯ ವಹಿಸಿತ್ತು. ಸದ್ಯ ಆರೋಪಿಗಳ ಪತ್ತೆಗೆ ತಂಡ ರಚಿಸಿರುವ ಪೊಲೀಸರು. ಕಾಲೇಜು ವಿದ್ಯಾರ್ಥಿಗಳಿಂದಲೇ ಕೃತ್ಯ ನಡೆದಿರುವ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ ಹೀಗಾಗಿ ಪ್ರಕರಣ ಸಂಬಂಧ ಹಲವು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿರುವ ಪೊಲಿಸರು. ಖಾಕಿ ಅಲರ್ಟ್ ಆಗುತ್ತಲೇ ಪೋಸ್ಟ್ ಡೀಲಿಟ್ ಮಾಡಿರೋ ಕಿಡಗೇಡಿ.

ಬೆಂಗಳೂರಿನಲ್ಲಿ ಅಮಾನುಷ ಘಟನೆ: ಬಾಲಕಿಯ ಮೇಲೆ 65 ವರ್ಷದ ಪ್ರಾಂಶುಪಾಲನಿಂದ ರೇಪ್‌

click me!