
ಕೋಲಾರ(ಅ. 28): ನಾನು ಸಾಯುತ್ತಿದ್ದೇನೆ (Mis You Friends) ನನ್ನ ಬ್ಯಾನರ್ ಹಾಕಿ ನನಗೆ ಶ್ರಂದ್ಧಾಂಜಲಿ ಸಲ್ಲಿಸಿ ಎಂದು ಸ್ನೇಹಿತರಿಗೆ ಮೆಸೇಜ್(Message) ಮಾಡಿ ಕಾಲೇಜು ವಿದ್ಯಾರ್ಥಿಯೊಬ್ಬ(Student) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಅಮಾನಿ ಕೆರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಕೊಳ್ಳೂರು ಕಾಲೋನಿಯ ಕಿಶೋರ್(17) ಪ್ರಥಮ ಪಿಯುಸಿಯನ್ನು ಗಂಗೋತ್ರಿ ಕಾಲೇಜಿನಲ್ಲಿ ಓದುತ್ತಿದ್ದ. ಮಂಗಳವಾರ ಬೆಳಿಗ್ಗೆ ಕಾಲೇಜಿಗೆಂದು ಹೋದವನು ಸಂಜೆ ಸ್ನೇಹಿತರಿಗೆ ಮೆಸೇಜ್ ಮಾಡಿ ಮಿಸ್ ಯೂ ಪ್ರೆಂಡ್ಸ್ ಎಂದು ತಿಳಿಸಿರುವುದನ್ನು ಸ್ನೇಹಿತರು ವಿದ್ಯಾರ್ಥಿಯ ಪೋಷಕರಿಗೆ(Parents) ತಿಳಿಸಿದ್ದಾರೆ.
ಪೋಷಕರು ಕೆರೆಯ ಬಳಿ ಹೋಗಿ ಹುಡುಕಿದಾಗ ಚಪ್ಪಲಿ ಮತ್ತು ಬಟ್ಟೆಗಳು ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ರಾತ್ರಿಯಾದ ಕಾರಣ ಬುಧವಾರ ಬೆಳಿಗ್ಗೆ ಕೆರೆಯಿಂದ ಶವವನ್ನು(Deadbody) ಹೊರತೆಗೆಯಲಾಯಿತು.
ಹೊಸಕೋಟೆ: ಪ್ರೇಯಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ, ಕಾರಣ?
ಬಲ್ಲ ಮೂಲಗಳ ಪ್ರಕಾರ ಕಿಶೋರ್ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಐ ಲವ್ ಯೂ ಎಂದು ಮೆಸೇಜ್ ಮಾಡಿದ್ದು ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾಳೆ. ಪ್ರಾಂಶುಪಾಲರು ಕಿಶೋರ್‌ನನ್ನು ಕರೆಸಿ ಆವನಿಗೆ ಹೊಡೆದಿದ್ದರಿಂದ ಅವಮಾನ ಸಹಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುದ್ದಿ ಹೇಳಲು ಮತ್ತೆ ಕಾಲ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಸ್ನೇಹಿತರು ಪೋಷಕರಿಗೆ ತಿಳಿಸಿದ್ದಾರೆ.
ಕಿಶೋರ್ ತಂದೆ ವೆಂಕಟೇಶಪ್ಪ ಪೊಲೀಸರಿಗೆ(Police) ದೂರು ನೀಡಿದ್ದು, ನನ್ನ ಮಗನಿಗೆ ಆಗಾಗ ಹೊಟ್ಟೆನೋವು ಬರುತ್ತಿತ್ತು. ಆದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ ಕಾಲೇಜಿನ ಪ್ರಾಂಶುಪಾಲರು ಹೊಡೆದಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ