ಇನ್‌ಸ್ಟ್ರಾಗ್ರಾಂನಲ್ಲಿ ಅಪ್ರಾಪ್ತೆಯರ ಅಶ್ಲೀಲ ಫೋಟೋ ಶೇರ್‌ ಮಾಡಿದ ವಿದ್ಯಾರ್ಥಿ

By Kannadaprabha News  |  First Published Jan 31, 2021, 7:56 AM IST

ಡ್ಯಾನಿಯಲ್‌ ಬ್ರೈಟ್‌ ಬಂಧಿತ ಆರೋಪಿ| ಇಬ್ಬರು ಬಾಲಕಿಯರ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿ| ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಿದ ಪೊಲೀಸರು| 


ಬೆಂಗಳೂರು(ಜ.31): ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಫೋಟೋ ಹಾಕಿದ್ದ ವಿದ್ಯಾರ್ಥಿಯೊಬ್ಬನನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಡ್ಯಾನಿಯಲ್‌ ಬ್ರೈಟ್‌ (21) ಬಂಧಿತ.

ಆರೋಪಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಈತನ ತಂದೆ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದಾರೆ. ಆರೋಪಿ ಇಬ್ಬರು ಬಾಲಕಿಯರ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಹಾಕಿದ್ದ. 

Tap to resize

Latest Videos

ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಅಶ್ಲೀಲ ಫೋಟೋ : ಯುವ​ಕನ ಅರೆಸ್ಟ್

ಈ ಬಗ್ಗೆ ದೆಹಲಿ ಸೈಬರ್‌ ಟಿಪ್‌ಲೈನ್‌ಗೆ ದೂರು ಬಂದಿದ್ದು, ಪ್ರಕರಣವನ್ನು ಆಗ್ನೇಯ ವಿಭಾಗದ ಸೈಬರ್‌ ಠಾಣೆಗೆ ವರ್ಗಾಯಿಸಿದ್ದರು. ಸಿಇಎನ್‌ ಸೈಬರ್‌ ಠಾಣೆ ಇನ್‌ಸ್ಪೆಕ್ಟರ್‌ ಎಲ್‌.ವೈ.ರಾಜೇಶ್‌ ನೇತೃತ್ವದ ತಂಡ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!