ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸದ ಮುಂದೆ ಐಷಾರಾಮಿ ಜಾಗ್ವಾರ್ ಕಾರು ಅಪಘಾತಕ್ಕೀಡಾಗಿದೆ. ಸಿಎಂ ನಿವಾಸಕ್ಕೆ ನುಗ್ಗುತ್ತಿದ್ದ ಕಾರು ಹಾಗೂ ಅಪಘಾತದ ಕುರಿತ ಹೆಚ್ಚಿನ ವಿವರ ಇಲ್ಲಿದೆ
ಬೆಂಗಳೂರು(ಜ.30): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸ ಕಾವೇರಿ ಮುಂದೆ ಉದ್ಯಮಿಯೊಬ್ಬರ ಜಾಗ್ವಾರ್ ಕಾರು ಅಪಘಾತಕ್ಕೀಡಾಗಿದೆ. ಪರ್ಲೇ ವೇರ್ ಹೌಸ್ ಮಾಲೀಕನ ಪುತ್ರ ಕಾರು ಚಾಲನೆ ಮಾಡುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ.
ಲಾಕ್‌ಡೌನ್‌ನಿಂದ ಅಪಘಾತ ಕಡಿಮೆ: ಕಳೆದ ವರ್ಷ ಸಾವಿನ ಸಂಖ್ಯೆ ಇಳಿಮುಖ
ಅಪಘಾತದ ತೀವ್ರತೆದೆ ಐಷರಾಮಿ, ಗರಿಷ್ಠ ಸುರಕ್ಷತೆಯ ಜಾಗ್ವಾರ್ ಕಾರು ಪುಡಿ ಪುಡಿಯಾಗಿದೆ. ಇತ್ತ ಕಾರು ಚಾಲನೆ ಮಾಡುತ್ತಿದ್ದ ವೇಳೆ ಉದ್ಯಮಿ ಪರ್ಲ್ ವೇರ್ ಹೌಸ್ ಮಾಲೀಕ ಪುತ್ರ ಶೇನ್ ಷಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಠಪೂರ್ತಿ ಕುಡಿದ ಅತೀ ವೇಗವಾಗಿ ಕಾರು ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ. ಸ್ವಲ್ಪ ಯಾಮಾರಿದ್ದರೂ, ತಡರಾತ್ರಿ ಮುಖ್ಯಮಂತ್ರಿ ನಿವಾಸ ಕಾವೇರಿಗೆ ಕಾರು ನುಗ್ಗುತ್ತಿತ್ತು. ಆದರೆ ನಿವಾಸದ ಸನಿಹದಲ್ಲೇ ಅಪಘಾತಕ್ಕೀಡಾಗಿದೆ. ಅದೃಷ್ಟವಶ ಸಿಎಂ ನಿವಾಸ ಕಾವೇರಿ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದು ಪೊಲೀಸರು ಅಪಘಾತದಿಂದ ಪಾರಾಗಿದ್ದಾರೆ.
ಹೈ ಗ್ರೌಂಡ್ ಸಂಚಾರ ಪೊಲೀಸರಿಂದ ಸ್ವಯಂ ಪ್ರೇರಿತ ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆ ದಾಖಲಾಗಿರುವ ಶೇನ್ ಷಾ ಗಾಯದ ತೀವ್ರತೆ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.