ಉಡುಪಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ನಗರದ ಪ್ರಮುಖ ರಸ್ತೆಗಳು, ಟೂರಿಸಂ ತಾಣಗಳಲ್ಲಂತೂ ಬೀದಿ ನಾಯಿಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಇತ್ತೀಚೆಗೆ ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಾಯಿಗಳ ಗುಂಪು ಅಟ್ಯಾಕ್ ಮಾಡಿದ್ದು, ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಉಡುಪಿ (ಆ.27): ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ನಗರದ ಪ್ರಮುಖ ರಸ್ತೆಗಳು, ಟೂರಿಸಂ ತಾಣಗಳಲ್ಲಂತೂ ಬೀದಿ ನಾಯಿಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಇತ್ತೀಚೆಗೆ ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಾಯಿಗಳ ಗುಂಪು ಅಟ್ಯಾಕ್ ಮಾಡಿದ್ದು, ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚಾರ್ಲಿ ಸಿನಿಮಾ ಬಂದ ನಂತರ ನಾಯಿಗಳ ಬಗೆಗಿನ ಜನರ ದೃಷ್ಟಿಕೋನವೇ ಬದಲಾಗಿದೆ. ಬೀದಿ ನಾಯಿಗಳಿಗೂ ಆಹಾರ ಕೊಟ್ಟು ಪ್ರೀತಿ ಮಾಡುವ ನಾಗರಿಕರು ಹೆಚ್ಚಾಗಿದ್ದಾರೆ. ಮೂಕಪ್ರಾಣಿ ನಾಯಿಯ ಮೇಲೆ ಸಹಜವಾಗಿಯೇ ಜನರಿಗೆ ಮಮತೆ ಹೆಚ್ಚು.
ಹಾಗಂತ ಈ ಬೀದಿ ನಾಯಿಗಳಿಂದ ಸಮಸ್ಯೆ ಇಲ್ಲವೆಂದೇನಿಲ್ಲ. ಉಡುಪಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಗುಂಪಾಗಿ ಕಂಡುಬರುವ ಬೀದಿನಾಯಿಗಳು ಜನರಿಗೆ ಉಪಟಳ ನೀಡುತ್ತಿವೆ. ಚಲಿಸುವ ವಾಹನಗಳ ಮೇಲೆ ಎರಗುವುದು. ಸಾರ್ವಜನಿಕ ಸಂಚಾರದ ವೇಳೆ ಗುಂಪಾಗಿ ದಾಳಿ ಮಾಡುವುದು ಪದೇ ಪದೇ ನಡಿಯುತ್ತಿದೆ. ರಾತ್ರಿಯ ವೇಳೆ ಜನ ಸಂಚರಿಸಲು ಕಷ್ಟ ಪಡುವಂತಾಗಿದೆ. ಮುಂಜಾನೆ ಹಾಲು, ಪೇಪರ್ ಲೈನ್ ಮಾಡುವ ಹುಡುಗರಿಗಂತೂ ಬೀದಿ ನಾಯಿಗಳ ಕಾಟ ತಪ್ಪಿಲ್ಲ. ಇತ್ತೀಚೆಗೆ ಮಣಿಪಾಲ ಅಕಾಡೆಮಿ ಸ್ಕೂಲ್‌ನ ಒಂದನೇ ತರಗತಿ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿದೆ.
ಹಾಳಾದ ರಸ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ತರಾಟೆ: ಸ್ಪಷ್ಟನೆ ನೀಡಿದ ಶಾಸಕ ಭಟ್
ಪುಟ್ಟ ಬಾಲಕಿಯ ತಲೆಗೆ ದೊಡ್ಡ ಗಾಯವಾಗಿದ್ದು ಆಕೆಗೆ ಅಜ್ಜರ ಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಮಸ್ಯೆಯ ಗಂಭೀರತೆ ಅರಿತ ಹಿರಿಯ ನ್ಯಾಯಾಧೀಶಯೊಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಬೀದಿನಾಯಿಗಳ ಉಪಟಳ ತಪ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶರ್ಮಿಳ.ಎಸ್ ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ನಗರಸಭೆ ಮತ್ತು ಪ್ರಾಣಿ ದಯಾ ಸಂಘದವರು ಸೂಕ್ತ ಕ್ರಮ ಜರುಗಿಸಬೇಕು ಎಂದು ನ್ಯಾಯಾಧೀಶೆ ಗಮನ ಸೆಳೆದಿದ್ದಾರೆ. ಬೀದಿ ನಾಯಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿ, ಅಲ್ಲಿ ಬೀದಿನಾಯಿಗಳನ್ನು ದಾಖಲಿಸಿ.
ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ತಾತ್ಕಾಲಿಕ ಶೆಡ್ ಕೆಡವಿದ ಉಡುಪಿ ನಗರಸಭೆ
ಬೀದಿ ನಾಯಿ ಹಾವಳಿ ತಪ್ಪಿಸಿ ಸಾರ್ವಜನಿಕರನ್ನು ರಕ್ಷಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನರ ರಕ್ಷಣೆ ನಗರ ಸಭೆ ಅಧಿಕಾರಿಗಳ ಕರ್ತವ್ಯ. ನಗರದಲ್ಲಿ ನೂರಾರು ಬೀದಿ ನಾಯಿಗಳಿವೆ. ಹಾಗಾಗಿ ಆದಷ್ಟು ಬೇಗ ಪುನರ್ವಸತಿ ಕೇಂದ್ರಗಳಿಗೆ ದಾಖಲು ಮಾಡಿ ಎಂದು ನಗರಸಭೆ ಅಧಿಕಾರಿಗಳಿಗೆ ನ್ಯಾಯಾಧೀಶೆ ಸೂಚನೆ ನೀಡಿದ್ದಾರೆ. ಉಡುಪಿ ಜಿಲ್ಲೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅಪರಿಚಿತ ಸ್ಥಳಗಳಲ್ಲಿ ಅಡ್ಡಾಡುತ್ತಾರೆ. ಈ ವೇಳೆ ಬೀದಿನಾಯಿಗಳು ಸಮಸ್ಯೆ ಉಂಟು ಮಾಡುತ್ತಿರುವುದರಿಂದ, ಆದಷ್ಟು ಬೇಗ ಪುನರ್ವಸತಿ ಕೇಂದ್ರ ಸ್ಥಾಪಿಸಿ ನಾಯಿಗಳನ್ನು ರಕ್ಷಿಸುವುದರ ಜೊತೆಗೆ ನಾಗರಿಕರ ಸುರಕ್ಷತೆಗೂ ನಗರಾಡಳಿತ ಗಮನ ನೀಡಬೇಕಾಗಿದೆ.