ಮದುವೆಗೆ ಸಂಬಂಧಿಯಂತೆ ಬರ್ತಿದ್ದ; ಚಿನ್ನಾಭರಣ ಎಗರಿಸುತ್ತಿದ್ದ ನಯವಂಚಕ ನಯಾಜ್ ಖಾನ್!

Published : Sep 27, 2022, 12:22 PM ISTUpdated : Sep 27, 2022, 12:25 PM IST
ಮದುವೆಗೆ ಸಂಬಂಧಿಯಂತೆ ಬರ್ತಿದ್ದ; ಚಿನ್ನಾಭರಣ ಎಗರಿಸುತ್ತಿದ್ದ ನಯವಂಚಕ ನಯಾಜ್ ಖಾನ್!

ಸಾರಾಂಶ

ಮದುವೆ ಸಮಾರಂಭಗಳಲ್ಲಿ ಶಿಸ್ತಾಗಿ ಬಂದವರೆಲ್ಲ ಸಂಬಂಧಿಕರೇ ಇರಬಹುದು ಅಂತಾ ಅಂದ್ಕೊಳ್ಳೋದೇ ಹೆಚ್ಚು. ಇಲ್ಲಿ ನೋಡಿ ಇಲ್ಲೊಬ್ಬ ಮದುವೆ ಸಮಾರಂಭಗಳಲ್ಲಿ ಸಂಬಂಧಿಯಂತೆ ಓಡಾಡಿಕೊಂಡು ಚಿನ್ನಾಭರಣ ಎಗರಿಸುವ ಖತರ್ನಾಕ ಕಳ್ಳನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ

ಬೆಂಗಳೂರು (ಸೆ.27): ಮದುವೆ ಸಮಾರಂಭಗಳಲ್ಲಿ ಶಿಸ್ತಾಗಿ ಬಂದವರೆಲ್ಲ ಸಂಬಂಧಿಕರೇ ಇರಬಹುದು ಅಂತಾ ಅಂದ್ಕೊಳ್ಳೋದೇ ಹೆಚ್ಚು. ಇಲ್ಲಿ ನೋಡಿ ಇಲ್ಲೊಬ್ಬ ಮದುವೆ ಸಮಾರಂಭಗಳಲ್ಲಿ ಸಂಬಂಧಿಯಂತೆ ಓಡಾಡಿಕೊಂಡು ಚಿನ್ನಾಭರಣ ಎಗರಿಸುವ ಖತರ್ನಾಕ ಕಳ್ಳನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವೃತ್ತಿಪರ ಕಳ್ಳನಾಗಿದ್ದು, ಇವನು ಆಯ್ದುಕೊಳ್ಳುತ್ತಿದ್ದ ಸ್ಥಳಗಳು ಮದುವೆ ಸಮಾರಂಭ, ಕಲ್ಯಾಣಪಂಟದಲ್ಲಿ ಅರತಕ್ಷತೆ ಇಂಥವುಗಳೇ. ಇಲ್ಲಿ ಮಹಿಳೆಯರು ಸಂಬಂಧಿಕರು ಹೆಚ್ಚು ಚಿನ್ನಾಭರಣ ಧರಿಸಿ ಸಮಾರಂಭಕ್ಕೆ ಬಂದಿರುತ್ತಾರೆಂದು ಊಹಿಸಿ ಈ ಖತರ್ನಾಕ ಕಳ್ಳ ಇಲ್ಲೆಲ್ಲ ಸಂಬಂಧಿಕರಂತೆ ಓಡಾಡಿಕೊಂಡುಕಳವು ಮಾಡುತ್ತಿದ್ದ.

ವಸ್ತುಗಳನ್ನು ತಾವೇ ಮಾರಿಕೊಂಡು ವಂಚನೆ : ಐವರು ಫ್ಲಿಪ್ಕಾರ್ಟ್ ಉದ್ಯೋಗಿಗಳು ಅರೆಸ್ಟ್

 ಆರೋಪಿ ಬಂಧನ : ಕಲ್ಯಾಣ ಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಚಾಲಾಕಿ ಕಳ್ಳನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಾದರಾಯನಪುರದ ಅರ್ಫಾತ್‌ ನಗರದ ನಿವಾಸಿ ನಯಾಜ್‌ ಖಾನ್‌(51) ಎಂಬಾತನಿಂದ .3.50 ಲಕ್ಷ ರು. ಮೌಲ್ಯದ 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಸೆ.9ರಂದು ರಾಜಾಜಿನಗರದ ಕೈಗಾರಿಕಾ ಪ್ರದೇಶದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ರೂಪಾ ಎಂಬುವವರ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
Chikkaballapura : ಲಾರಿ ಅಪಹರಣ : ಮಾಲೀಕ, ಚಾಲಕನಿಂದಲೇ ಕೃತ್ಯ

ವೃತ್ತಿಪರ ಕಳ್ಳನಾಗಿರುವ ಆರೋಪಿ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಾಹನ ಕಳವು, ಮನೆಗಳವು ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಕೈ ಚಳಕ ತೋರಿಸುತ್ತಿದ್ದ. ಮೂರು ತಿಂಗಳ ಹಿಂದೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಬಂದು ಹೊರಬಂದು ಕಲ್ಯಾಣ ಮಂಟಪದಲ್ಲಿ ಅತಿಥಿಗಳ ಕೊಠಡಿಗೆ ತೆರಳಿ ಸೂಟ್‌ಕೇಸ್‌ನಲ್ಲಿ ಇರಿಸಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?