ರಜೆಚೀಟಿಯಲ್ಲಿ ಸಿಕ್ಕಾಪಟ್ಟೆ ಸ್ಪೆಲ್ಲಿಂಗ್​ ಮಿಸ್ಟೆಕ್​: ಲೇಡಿ ಸಬ್ ಇನ್ಸ್‌ಪೆಕ್ಟರ್ ಅರೆಸ್ಟ್​! ಅಷ್ಟಕ್ಕೂ ಆಗಿದ್ದೇನು ನೋಡಿ...

ಗ್ರಹಚಾರ ಕೆಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಈ ಘಟನೆ. ಲೇಡಿ ಸಬ್​-ಇನ್ಸ್​ಪೆಕ್ಟರ್​ ಒಬ್ಬರು ಕೊಟ್ಟ ರಜೆ ಚೀಟಿಯಲ್ಲಿನ ಕಾಗುಣಿತ ದೋಷದಿಂದ ಆಕೆ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಏನಿದು ಸ್ಟೋರಿ? 
 

Spelling Errors In Leave Application Land Rajasthan Lady Sub Inspector Behind Bars suc

ಅದೃಷ್ಟ ಎನ್ನೋದು ಯಾವಾಗ ಕೈಕೊಡತ್ತೋ ಗೊತ್ತಿಲ್ಲ. ಗ್ರಹಚಾರ ಕೆಟ್ಟರೆ ಏನು ಬೇಕಾದರೂ ಆಗಬಹುದು. ಯಾವಾಗಲೋ ಹೇಳಿದ ಸುಳ್ಳು ಇನ್ನಾವಾಗಲೋ ಬಯಲಾಗಿ ದೊಡ್ಡ ಅವಾಂತರವೂ ಆಗಬಹುದು, ಇಲ್ಲವೇ ಯಾವ ಕಾಲದಲ್ಲಿಯೋ ಮಾಡಿದ ಮೋಸ, ವಂಚನೆ ಇನ್ಯಾವಾಗಲೋ ಅಚಾನಕ್​ ಬಯಲಾಗಿ ಮರ್ಯಾದೆಯೂ ಹೋಗಬಹುದು. ಮೊನ್ನೆಯಷ್ಟೇ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ  ಕಂತೆ ಹಣ ಪತ್ತೆಯಾಗಿತ್ತು. ಇಡೀ ಕಾನೂನು ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಈ ಘಟನೆ ನಡೆದಿದೆ. ಆದರೆ ಈ ಕೃತ್ಯ ಬೆಳಕಿಗೆ ಬರಲು ಅವರ ಮನೆಗೆ ಅಚಾನಕ್​ ಬೆಂಕಿ ಬಿದ್ದದ್ದು ಕಾರಣವಾಯಿತು. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯಿಂದಾಗಿ ಈ ಘಟನೆ ಬೆಳಕಿಗೆ ಬಂದಿತ್ತು. ಇಲ್ಲದಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಲೇ ಇರಲಿಲ್ಲ. ಗ್ರಹಚಾರ ಕೆಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಆದರೆ ಇನ್ನೊಂದು ಇಂಟರೆಸ್ಟಿಂಗ್​ ಘಟನೆಯೊಂದು ರಾಜಸ್ಥಾನದ ಜುಂಜುನುವಿನಲ್ಲಿ ನಡೆದಿದೆ. ಲೇಡಿ  ಸಬ್-ಇನ್ಸ್‌ಪೆಕ್ಟರ್ (SI) ಒಬ್ಬರು, ರಜೆ ಚೀಟಿ ಬರೆದು ತಗ್ಲಾಕ್ಕೊಂಡು ಕೆಲಸದಿಂದಲೇ ವಜಾಗೊಳ್ಳುವ ಸ್ಥಿತಿ ಎದುರಾಗಿದೆ. ಸದ್ಯ ಈಕೆ ಅರೆಸ್ಟ್​ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಈಕೆ ಬರೆದಿರುವ ರಜಾ ಚೀಟಿಯಲ್ಲಿ ಸಿಕ್ಕಾಪಟ್ಟೆ ಕಾಗುಣಿತ ದೋಷ ಅಂದ್ರೆ ಸ್ಪೆಲ್ಲಿಂಗ್​  ಮಿಸ್ಟೆಕ್​ ಇತ್ತು. ಕಾಗುಣಿತ ದೋಷ ಇದ್ದ ಮಾತ್ರಕ್ಕೆ ಕೆಲಸದಿಂದ ವಜಾ ಮಾಡುವುದು ಅಂದ್ರೆ ಇದೇನಿದು ಎಂದು ಕೇಳಬಹುದು. ಆದರೆ ಅಲ್ಲಿರುವ ಅಸಲಿಯತ್ತೇ ಬೇರೆ.   ರಜಾ ಚೀಟಿಯಲ್ಲಿನ ಕಾಗುಣಿತ ದೋಷದಿಂದಾಗಿ ಈ ಸಬ್​ ಇನ್ಸ್​ಪೆಕ್ಟರ್​ ಅಸಲಿಯತ್ತು ಬಯಲಾಗಿರುವ ಕಾರಣ ಕೆಲಸದಿಂದ ವಜಾಗೊಳ್ಳುವ ಪ್ರಮೇಯ ಬಂದಿದೆ.

Latest Videos

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇಸ್​ ಜಡಿದಳು- ಏನಾಯ್ತು ನೋಡಿ

ಸಬ್-ಇನ್ಸ್‌ಪೆಕ್ಟರ್​ ಹೆಸರು ಮೋನಿಕಾ. ಇವರು ರಜೆಗಾಗಿ ಬರೆದಿದ್ದ ಚೀಟಿಯಲ್ಲಿ ಸಿಕ್ಕಾಪಟ್ಟೆ ತಪ್ಪು ಇದ್ದದ್ದು ನೋಡಿ ಅಲ್ಲಿರುವ ಹಿರಿಯ ಅಧಿಕಾರಿಗಳಿಗೆ ಡೌಟ್​ ಬಂದಿದೆ. ಇಷ್ಟೆಲ್ಲಾ ತಪ್ಪು ಬರೆದಿರುವಾಕೆ ಅತ್ಯಧಿಕ ಅಂಕ ಗಳಿಸಿ, ಪರೀಕ್ಷೆ ಪಾಸಾದದ್ದು ಹೇಗೆ ಎನ್ನುವ ಅನುಮಾನ ಕಾಡಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಮೋನಿಕಾ ಹಿಂದಿಯಲ್ಲಿ 184 ಮತ್ತು ಸಾಮಾನ್ಯ ಜ್ಞಾನದಲ್ಲಿ 161 ಅಂಕಗಳನ್ನು ಗಳಿಸಿದ್ದರು, ಆದರೆ ಸಂದರ್ಶನದಲ್ಲಿ ಕೇವಲ 15 ಅಂಕಗಳನ್ನು ಪಡೆದಿದ್ದರು. ಆದರೆ ಪರೀಕ್ಷೆಗಳ ಅಂಕದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದರು.   ಅಲ್ಲಿರುವ ಹಿರಿಯ ಅಧಿಕಾರಿಗಳಿಗೆ  ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಎನ್ನಿಸಿದೆ.

ಕೊನೆಗೆ ತನಿಖೆ ಮಾಡಿದಾಗ ಬಯಲಾಗಿದ್ದು ಇಷ್ಟೇ.  ಮೋನಿಕಾ ಅವರು 2021 ರ ಸಬ್​ ಇನ್ಸ್​ಪೆಕ್ಟರ್​ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ಸಾಧನವನ್ನು ಬಳಸಿ ಅಷ್ಟು ಅಂಕ ಗಳಿಸಿದ್ದರು ಎನ್ನುವುದು! ಅವರಿಗೆ ಅವರು ಪರೀಕ್ಷಾ ವಂಚನೆಗಾಗಿ 15 ಲಕ್ಷ ರೂಪಾಯಿ ಲಂಚ ಕೊಟ್ಟಿರುವುದೂ ಬೆಳಕಿಗೆ ಬಂದಿದೆ.  ವಿಶೇಷ ಕಾರ್ಯಾಚರಣೆ ಗುಂಪು (SOG) ಮೋನಿಕಾ ಮತ್ತು ಅವರ ಆಕೆಯ ಸಹಚರ ಪೌರವ್ ಕಲಿರ್ ಇಬ್ಬರನ್ನೂ ಬಂಧಿಸಿದೆ. ಪ್ರಕರಣ ಇನ್ನೂ ತನಿಖೆಯಲ್ಲಿದೆ. ಸದ್ಯ ತನಿಖೆ ನಡೆಯುತ್ತಿದ್ದು, ಇದರ ಆಧಾರದ ಮೇಲೆ, ಆರೋಪ ಸಾಬೀತಾದರೆ ಮೋನಿಕಾ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ!

ಓಡಿಹೋಗಲು ನಿರಾಕರಿಸಿದ ವಿವಾಹಿತೆಯ ಮನೆಗೆ ಹೆಣ್ಣಿನ ವೇಷದಲ್ಲಿ ಬಂದ... ಮುಂದಾದದ್ದು ಘೋರ ದುರಂತ!

vuukle one pixel image
click me!