Bengaluru: ಪೊಲೀಸ್‌ ಸಹಾಯಕ್ಕೆ ಕರೆ ಮಾಡಿದ ಸ್ಪೇನ್‌ ಪ್ರಜೆ, ಕನ್ನಡ ಮಾತನಾಡದ ಕಾರಣಕ್ಕೆ ಫೋನ್‌ ಕಟ್‌ ಮಾಡಿದ 112 ಆಪರೇಟರ್‌!

Published : Jan 20, 2025, 10:08 AM IST
Bengaluru: ಪೊಲೀಸ್‌ ಸಹಾಯಕ್ಕೆ ಕರೆ ಮಾಡಿದ ಸ್ಪೇನ್‌ ಪ್ರಜೆ, ಕನ್ನಡ ಮಾತನಾಡದ ಕಾರಣಕ್ಕೆ ಫೋನ್‌ ಕಟ್‌ ಮಾಡಿದ 112 ಆಪರೇಟರ್‌!

ಸಾರಾಂಶ

ಬೆಂಗಳೂರಿನಲ್ಲಿ ಸ್ಪೇನ್ ಪ್ರಜೆಯೊಬ್ಬರ ಮನೆಗೆ ಕಳ್ಳತನ ನಡೆದಿದ್ದು, ಕನ್ನಡದಲ್ಲಿ ಮಾತನಾಡದ ಕಾರಣಕ್ಕೆ ಪೊಲೀಸ್ ತುರ್ತು ಸಹಾಯವಾಣಿ ಸಿಬ್ಬಂದಿ ಕರೆಯನ್ನು ಕಡಿತಗೊಳಿಸಿದ್ದಾರೆ. ಕಳ್ಳರು ಲ್ಯಾಪ್‌ಟಾಪ್, ಐಡಿ ಕಾರ್ಡ್ ಸೇರಿದಂತೆ 82,000 ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಬೆಂಗಳೂರು (ಜ.20): ರಾಜಧಾನಿಯಲ್ಲಿ ವಾಸವಾಗಿರುವ ಸ್ಪೇನ್‌ ಮೂಲದ ಪ್ರಜೆಯೊಬ್ಬ ತನ್ನ ಫ್ಲ್ಯಾಟ್‌ಗೆ ಕಳ್ಳನೊಬ್ಬ ನುಗ್ಗಿದ್ದಾನೆ ಅನ್ನೋದನ್ನ ರಿಪೋರ್ಟ್‌ ಮಾಡಲು ಪೊಲೀಸ್‌ ತುರ್ತುನಂಬರ್‌ಗೆ ಕರೆ ಮಾಡಿದ್ದರು. ಸಹಾಯ ಬೇಡಿ ಪೊಲೀಸ್‌ ನಂಬರ್‌ಗೆ ಕರೆ ಮಾಡಿದ್ದರೆ, ಎಮರ್ಜೆನ್ಸಿ ಕರೆ ಸ್ವೀಕಾರ ಮಾಡುವ ಆಪರೇಟರ್‌ ಸ್ಪೇನ್‌ ಮೂಲದ ಪ್ರಜೆ ಕನ್ನಡದಲ್ಲಿ ಮಾತನಾಡದ ಕಾರಣಕ್ಕೆ ಕರೆಯನ್ನೇ ಕಟ್‌ ಮಾಡಿದ ಘಟನೆ ನಡೆದಿದೆ. ಇದರಿಂದಾಗಿ ಮನೆಗೆ ಹೊಕ್ಕಿದ್ದ ಕಳ್ಳ, ಅಮೂಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ. ಆ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಯಾವುದೇ ಸಿಸಿಟಿವಿ ಇದ್ದಿರಲಿಲ್ಲ ಹಾಗೂ ಸಿಬ್ಬಂದಿಗೆ ಯಾವುದೇ ಶಬ್ದ ಕೂಡ ಕೇಳಿರಲಿಲ್ಲ ಎನ್ನಲಾಗಿದೆ.

ಬುಧವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಇಬ್ಬರು ಕಳ್ಳರು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದರಿಂದ ಸ್ಪೇನ್‌ ದೇಶದ ವ್ಯಕ್ತಿಯೊಬ್ಬ ಸುಮಾರು ಆರು ಗಂಟೆಗಳ ಕಾಲ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಿಲುಕಿಕೊಂಡಿದ್ದರು. ತುರ್ತು ಸಂಖ್ಯೆ 112ಕ್ಕೆ ಅವರು ಕರೆದ ಮಾಡಿದ್ದಾರೆ.ಈ ವೇಳೆ ಆಪರೇಟರ್‌ ಕನ್ನಡದಲ್ಲಿ ಮಾತನಾಡಿ ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಇಲ್ಲಿ ಆದ ತಪ್ಪು ಸಂವಹನದಿಂದಾಗಿ ತಕ್ಷಣದ ಸಹಾಯ ತಮಗೆ ಸಿಗಲಿಲ್ಲ ಎಂದು ವ್ಯಕ್ತಿ ಹೇಳಿದ್ದಾರೆ.

30 ವರ್ಷದ ಜೀಸಸ್ ಅಬ್ರಿಯೆಲ್, ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ನೈಡಸ್ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿರುವ ತಮ್ಮ ನೆಲಮಹಡಿಯ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಬೆಡ್‌ರೂಮ್‌ನಲ್ಲಿರುವ ಬಾತ್‌ರೂಮ್‌ನ ಕಿಟಕಿಯಿಂದ ಇಬ್ಬರು ಕಳ್ಳಲು ಒಳಗೆ ನುಗ್ಗಿದ್ದರು. ಅಂದಾಜು 30 ನಿಮಿಷಗಳ ಕಾಲ ಅವರು ಮನೆಯಲ್ಲಿದ್ದರು. ಈ ವೇಳೆ ಅಬ್ರಿಯೆಲ್ ಜೀವಭಯದಿಂದ ಇನ್ನೊಂದು ರೂಮ್‌ಗೆ ಶಿಫ್ಟ್‌ ಆಗಿದ್ದರು.

ಕನ್ನಡ ಮಾತನಾಡಲು ಬರದ ಅಬ್ರಿಯೆಲ್‌ 112 ನಂಬರ್‌ಗೆ ಸಹಾಯಕ್ಕಾಗಿ ಕರೆ ಮಾಡಿದ್ದರು. ಈ ವೇಳೆ 112 ಅಪರೇಟರ್‌ ಕನ್ನಡದಲ್ಲಿ ಮಾತನಾಡುವಂತೆ ಹೇಳಿ ಕರೆಯನ್ನು ಕಟ್‌ ಮಾಡಿದ್ದಾರೆ. 'ನನಗೆ ಶಬ್ದ ಕೇಳಿಸಿದ ಬಳಿಕ ಸಹಾಯಕ್ಕಾಗಿ 112ಗೆ ಕರೆ ಮಾಡಿದೆ. ಆದರೆ, ಸಂವಹನದ ಸಮಸ್ಯೆ ಇಂದಾಗಿ ನನಗೆ ತಕ್ಷಣಕ್ಕೆ ಸಹಾಯ ಸಿಗಲಿಲ್ಲ. ಕಾಲ್‌ ಸ್ವೀಕಾರ ಮಾಡಿದ ಆಪರೇಟರ್‌ ಕನ್ನಡದಲ್ಲಿ ಮಾತುಡುವಂತೆ ಹೇಳಿದರು. ಬಳಿಕ ಕರೆಯನ್ನು ಕಟ್‌ ಮಾಡಿದ್ದಾರೆ' ಎಂದು ಅಬ್ರಿಯೆಲ್‌ ಅವರ ಮನೆಯ ಮಾಲೀಕ ಎಸ್‌.ಸುದೀಪ್‌ ತಿಳಿಸಿದ್ದಾರೆ.

ಬೆಲೆಬಾಳುವ ವಸ್ತು ಕದ್ದ ಕಳ್ಳರು: ಮನೆಗೆ ನುಗ್ಗಿದ್ದ ಕಳ್ಳರು ಲ್ಯಾಪ್‌ಟಾಪ್‌, ಪ್ಲಾಟಿನಂ ಉಂಗುರ, ಹೆಡ್‌ಫೋನ್‌, 10 ಸಾವಿರ ರೂಪಾಯಿ ಇದ್ದ ಪರ್ಸ್‌, ಅಬ್ರಿಯೆಲ್‌ ಅವರ ಸ್ಪೇನ್‌ ಐಡಿ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಹಾಗೂ ಡೆಬಿಟ್‌ ಕಾರ್ಡ್‌ಅನ್ನು ಕದ್ದುಕೊಂಡು ಹೋಗಿದ್ದಾರೆ. ಬೆಡ್‌ರೂಮ್‌ನಲ್ಲಿದ್ದ ಬಾತ್‌ರೂಮ್‌ ವಿಂಡೋನಿಂದ ಒಳಗೆ ನುಗ್ಗಿದ್ದ ಕಳ್ಳರು ಅಲ್ಲಿಂದಲೇ ಹೊರಹೋಗಿದ್ದಾರೆ.  82,000 ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರೂ, ನಗದು ಮತ್ತು ದುಬಾರಿ ಬಟ್ಟೆಗಳು ಸೇರಿದಂತೆ ಇತರ ಮೌಲ್ಯದ ವಸ್ತುಗಳನ್ನು ಬಿಟ್ಟುಹೋಗಿದ್ದಾರೆ.

ಈ ಘಟನೆಯ ಬಳಿಕ ಅಬ್ರಿಯೆಲ್‌ ಬೆಳಗ್ಗೆ 8.30ರವರೆಗೂ ತಮ್ಮ ಇನ್ನೊಂದು ಬೆಡ್‌ರೂಮ್‌ನಲ್ಲಿದ್ದರು. ಬೆಳಗ್ಗೆ ತಮ್ಮ ಮನೆ ಮಾಲೀಕರ ಸಂಪರ್ಕ ಮಾಡಿದ ಬಳಿಕ ಅವರು ಮನೆಗೆ ಧಾವಿಸಿದ್ದಾರೆ.' ಈ ಘಟನೆ ಅವರಿಗೆ ಆಘಾತ ತಂದಿದೆ. ಬೆಲ್ಲಗ್ಗೆ 8.30ರವರೆಗೂ ಅವರು ಯಾರಿಗೂ ಕರೆ ಮಾಡಲಿಲ್ಲ' ಎಂದು ಸುದೀಪ್‌ ತಿಳಿಸಿದ್ದಾರೆ.

Udupi: OLX ಅಲ್ಲಿ ಬಸ್‌ ಮಾರಿ, ಅದೇ ಬಸ್ಸು ಕದ್ದು ಮನೆಗೆ ತಂದ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್!

ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ ಇರುವುದರಿಂದ ಅಧಿಕಾರಿಗಳಿಗೆ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿತ್ತು. ಕಳ್ಳತನ ನಡೆದ ಸಮಯದಲ್ಲಿ ಹತ್ತಿರದ ಸೆಕ್ಯುರಿಟಿಯೊಂದಿಗೆ ಮಾತನಾಡುತ್ತಿದ್ದ ಪ್ರವೇಶದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಗೆ, ಫ್ಲಾಟ್ ಸಂಕೀರ್ಣದ ಕೊನೆಯ ಭಾಗದಲ್ಲಿ ಪ್ರತ್ಯೇಕ ಸ್ಥಳವಿದ್ದ ಕಾರಣ ಏನೂ ಕೇಳಿಸಲಿಲ್ಲ. ಕಳ್ಳರು ಆ ಪ್ರದೇಶದಲ್ಲಿ ನಡೆಯುತ್ತಿರುವ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಭಾವ್ಯ ಸುಳಿವುಗಳಿಗಾಗಿ ಅವರು ಹತ್ತಿರದ ಕಟ್ಟಡಗಳು ಮತ್ತು ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 305 (ವಾಸದ ಮನೆಯಲ್ಲಿ ಕಳ್ಳತನ) ಮತ್ತು 331 (ಮನೆ ಅತಿಕ್ರಮಣ ಅಥವಾ ಮನೆ ಕಳ್ಳತನಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುಪಾರಿ ನೀಡಿ ಗಂಡನ ಕೊಲೆ ಮಾಡಿಸಿ 'ಹಾರ್ಟ್‌ ಅಟ್ಯಾಕ್‌' ಡ್ರಾಮಾ' 9 ತಿಂಗಳ ಹಿಂದೆ ಹೂತ ಶವ ಹೊರತೆಗೆದ ಪೊಲೀಸ್‌!

ಸಂವಹನ ಸಮಸ್ಯೆಗೆ ಪ್ರತಿಕ್ರಿಯೆಯಾಗಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ತುರ್ತು ಸಹಾಯವಾಣಿ ನಿರ್ವಾಹಕರು ಅಬ್ರಿಯೆಲ್ ಅವರ ಸ್ಪ್ಯಾನಿಷ್-ಇಂಗ್ಲಿಷ್ ಮಿಶ್ರ ಕರೆಯನ್ನು ತಮಾಷೆ ಅಥವಾ ಕುಡಿದ ಡಯಲ್ ಎಂದು ತಪ್ಪಾಗಿ ಭಾವಿಸಿರಬಹುದು ಎಂದು ಸೂಚಿಸಿದರು. ಸಹಾಯವಾಣಿಗೆ ಹೆಚ್ಚಿನ ಪ್ರಮಾಣದ ಕರೆಗಳು ಬರುತ್ತವೆ, ಅವುಗಳಲ್ಲಿ ಹಲವು ಕ್ಷುಲ್ಲಕ ಕರೆಗಳಾಗಿವೆ ಎಂದು ಅಧಿಕಾರಿ ವಿವರಿಸಿದರು. "ನಗರದಲ್ಲಿ ತುರ್ತು ಸಹಾಯವಾಣಿಗೆ ಒಂದು ದಿನದಲ್ಲಿ 15,000-20,000 ಕರೆಗಳು ಬರುತ್ತವೆ ಮತ್ತು ಅವುಗಳಲ್ಲಿ ಸುಮಾರು 1,500 ಮಾತ್ರ ನಿಜವಾದವು" ಎಂದು ಅಧಿಕಾರಿ ಹೇಳಿದರು. ಅಧಿಕಾರಿಯ ಪ್ರಕಾರ, ನಿಜವಾದ ಕರೆಗಳನ್ನು ತಕ್ಷಣದ ಕ್ರಮಕ್ಕಾಗಿ ಹತ್ತಿರದ ಹೊಯ್ಸಳ ತಂಡಕ್ಕೆ ನಿರ್ದೇಶಿಸಲಾಗುತ್ತದೆ, ಸ್ಥಳದಲ್ಲೇ ಪರಿಸ್ಥಿತಿಯನ್ನು ಪರಿಶೀಲಿಸುವ ಮೊದಲು ಯಾವುದೇ ಪ್ರಕರಣವನ್ನು ಕ್ಲೋಸ್‌ ಮಾಡೋದಿಲ್ಲ ಎಂದು ತಿಳಿಸಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!