ಟೈಯರ್ ಶಾಪ್‌‌ನಿಂದ ದಿನಕ್ಕೆ 200 ಕೋಟಿ ರೂ ಆದಾಯ ಕಂಪನಿ ಕಟ್ಟಿದ್ದು ಹೇಗೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಡಿ!

By Suvarna News  |  First Published Oct 5, 2023, 7:30 PM IST

ಬಾಲಿವುಡ್ ನಟ ನಟಿಯರಿಗೆ ಇಡಿ ನೋಟಿಸ್ ಬೆನ್ನಲ್ಲೇ ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹೆಸರು ಕೇಳಿಬರುತ್ತಿದೆ. ಹೌದು, ಜ್ಯೂಸ್ ಶಾಪ್ ಇಟ್ಟಿದ್ದ ಸೌರಬ್ ಹಾಗೂ ಟೈಯರ್ ಶಾಪ್ ಇಟ್ಟಿದ್ದ ಈತನ ಪಾರ್ಟ್ನರ್ ಪ್ರತಿ ದಿನ 200 ಕೋಟಿ ರೂಪಾಯಿ ಆದಾಯ ಗಳಿಸಲು ಆರಂಭಿಸಿದ್ದು ಹೇಗೆ? ತನಿಖೆ ನಡೆಸುತ್ತಿರುವ ಇಡಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ.

Sourabh Chandrakar Mahadev online betting app case tyre shop owner to rs 200 crore per day income company ckm

ದೆಹಲಿ(ಅ.05) ನಟ ರಣಬೀರ್ ಕಪೂರ್‌ಗೆ ಇಡಿ ವಿಚಾರಣೆಗೆ ನೋಟಿಸ್ ನೀಡಿದೆ. ಇನ್ನು ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿದಂತೆ ಹಲವು ಸೆಲೆಬ್ರೆಟಿಗಳಿಗೂ ಇಡಿ ಶಾಕ್ ನೀಡಿದೆ. ಇದಕ್ಕೆ ಮುಖ್ಯ ಕಾರಣ ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ಮಾಲೀಕ ಸೌರಬ್ ಚಂದ್ರಾಕರ್. ರಣಬೀರ್ ಕಪೂರ್‌ಗೆ ಈ ಬೆಟ್ಟಿಂಗ್ ಆ್ಯಪ್ ಕುರಿತು ಮತ್ತಷ್ಟು ಮಾಹಿತಿ ಪಡೆಯಲು ಇಡಿ ನೋಟಿಸ್ ನೀಡಿದೆ. ಇತ್ತ ಸನ್ನಿ ಲಿಯೋನ್, ಟೈಗರ್ ಶ್ರಾಫ್ ಸೇರಿದಂತೆ ಇತರ ಸೆಲೆಬ್ರೆಟಿಗಳು ಸೌರಬ್ ಚಂದ್ರಾಕರ್ ಅವರಿಂದ ಹವಾಲ ಹಣ ಸ್ವೀಕರಿಸಿದ್ದಾರೆ ಅನ್ನೋ ಆರೋಪ ಹೊತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಸೌರಬ್ ಚಂದ್ರಾಕರ್, ಈತನ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರತಿ ದಿನಕ್ಕೆ 200 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆಯಾ? ಹೌದು, ಇದು ನಿಜ.

ಚತ್ತೀಸಘಡದ ಬಿಲಾಯಿ ಜಿಲ್ಲೆಯ ನೆಹರೂ ನಗರದಲ್ಲಿ ಕೆಲ ವರ್ಷಗಳಿಂದ ಸೌರಬ್ ಚಂದ್ರಾಕರ್ ಜ್ಯೂಸ್ ಅಂಗಡಿ ಇಟ್ಟಿದ್ದ. ರವಿ ಉಪ್ಪಾಲ್ ಇದೇ ನಗರದಲ್ಲಿ ಟೈಯರ್ ಶಾಪ್ ಇಟ್ಟಿದ್ದ. ಇವರಿಬ್ಬರು ಗ್ಯಾಂಬ್ಲಿಂಗ್‌ನಲ್ಲಿ ನಿಷ್ಣಾತರು. ತಮ್ಮ ಜ್ಯೂಸ್ ಅಂಗಡಿ ಹಾಗೂ ಟೈಯರ್ ಶಾಪ್‌ನಿಂದ ಬರುತ್ತಿದ್ದ ಆದಾಯ ಹಾಗೂ ಸ್ಥಳೀಯವಾಗಿ ಬೆಟ್ಟಿಂಗ್‌ನಿಂದ ಬಂದ ಹಣದಿಂದ ನೇರವಾಗಿ ದುಬೈ ಫ್ಲೈಟ್ ಹತ್ತಿದ್ದಾರೆ.

Tap to resize

Latest Videos

ನಟ ರಣಬೀರ್ ಕಪೂರ್‌ಗೆ ಶಾಕ್, ಅ.6ಕ್ಕೆ ವಿಚಾರಣೆ ಹಾಜರಾಗಲು ಇಡಿ ನೋಟಿಸ್!

ದುಬೈನಲ್ಲಿ ಕೆಲ ಬೆಟ್ಟಿಂಗ್ ರಾಕೆಟ್ ಜೊತೆ ಲಿಂಕ್ ಬೆಳೆಸಿದ್ದಾರೆ. ಬಳಿಕ ಭಾರತ ಹಾಗೂ ಪಾಕಿಸ್ತಾನ ಮೂಲದವರನ್ನು ಸೇರಿಸಿಕೊಂಡು ಹೊಸ ಬೆಟ್ಟಿಂಗ್ ಆ್ಯಪ್ ಅಭವೃದ್ಧಿಪಡಿಸಿದ್ದಾರೆ. ಮಹದೇವ್ ಬೆಟ್ಟಿಂಗ್ ಆ್ಯಪ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದಾರೆ. ಈ ಆ್ಯಪ್ ಭಾರತ ಮಾತ್ರವಲ್ಲ, ಯುಎಇ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲೇ 4,000 ಪ್ಯಾನಲ್ ಆಫರೇಟರ್ಸ್ ಹೊಂದಿರುವ ಈ ಕಂಪನಿ, ಒಬೊಬ್ಬರ ಬಳಿ 200 ಗ್ರಾಹಕರಿದ್ದಾರೆ. ಪ್ರತಿ ದಿನ ಕನಿಷ್ಠ 200 ಕೋಟಿ ರೂಪಾಯಿ ಆದಾಯಗಳಿಸುತ್ತಿದೆ.

ಇತ್ತೀಚೆಗೆ ಸೌರಬ್ ಚಂದ್ರಾಕರ್ ದುಬೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದು. ಈ ಮದುವೆಗೆ 200 ಕೋಟಿ ರೂಪಾಯಿ ಖರ್ಚು ಮಾಡಿದ್ದ. ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಸೌರಬ್ ಚಂದ್ರಾಕರ್ ಬಳಿಯಿಂದ ಹವಲಾ ಹಣ ಸ್ವೀಕರಿಸಿದ್ದಾರೆ ಅನ್ನೋ ಕಾರಣಕ್ಕೆ ಇಡಿ ದಾಳಿ ನಡೆಸಿದೆ. ಕಳೆದ ತಿಂಗಳು ಸೌರಬ್ ಚಂದ್ರಾಕರ್ ಕಚೇರಿ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು 417 ಕೋಟಿ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿದೆ. ಸಾವಿರಾರೂ ಕೋಟಿ ರೂಪಾಯಿ ವಂಚನೆ ನಡೆದಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಹವಾಲಾ ಹಣ ಸ್ವೀಕರಿಸಿದ ಆರೋಪ;ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿ ಹಲವು ಬಾಲಿವುಡ್ ನಟ-ನಟಿಯರಿಗೆ ಇಡಿ ಶಾಕ್
 

vuukle one pixel image
click me!
vuukle one pixel image vuukle one pixel image