ಜ್ಯೋತಿಷಿ ಮನೆಗೆ ಕನ್ನ ಹಾಕಿದ ಕಳ್ಳರು ಇದ್ದ ಬದ್ದ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಜ್ಯೂತಿಷಿ ಪೊಲೀಸ್ ದೂರು ದಾಖಲಿಸಿದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ತಿಂಗಳು ಉರುಳಿದರೂ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಆರೋಪಿಗಳು ನೋಟುಗಳ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಕಾನ್ಪುರ(ಅ.05) ಖತರ್ನಾಕ ಕಳ್ಳರು ಭಾರಿ ಪ್ಲಾನ್ ಮಾಡಿ ಜ್ಯೋತಿಷಿ ಮನೆಗ ಕನ್ನ ಹಾಕಿದ್ದಾರೆ. ಮನೆಯಲ್ಲಿದ್ದ ನಗದು ಹಣವನ್ನು ದೋಚಿ ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಜ್ಯೋತಿಷಿ ಸಂಪಾದಿಸಿದ್ದ ಹಣವೆಲ್ಲಾ ಕಳ್ಳರ ಪಾಲಾಗಿತ್ತು. ಆಘಾತಗೊಂಡ ಜ್ಯೋತಿಷಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಪೊಲೀಸರು ತನಿಖೆ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಇತ್ತ ಜ್ಯೋತಿಷಿ ಕೂಡ ಹಲವರ ನೆರವು ಪಡೆದು ಸುಳಿವಿಗಾಗಿ ಪ್ರಯತ್ನ ಪಟ್ಟಿದ್ದರು. ಆದರೆ ಪ್ರಯೋಜನವಾಗಲಿಲ್ಲ. ತಿಂಗಳು ಉರುಳಿದರೂ ಕಳ್ಳರ ಸುಳಿವಿಲ್ಲ. ಇತ್ತ ಕಳ್ಳರು ಯಾವುದೇ ಸುಳಿವು ನೀಡಿದ ಕಳ್ಳತನ ಮಾಡಿದ್ದೇವೆ. ಇನ್ನು ನಮ್ಮನ್ನು ಯಾರು ಹಿಡಿಯುವುದಿಲ್ಲ ಎಂದು ನೋಟಿನ ಜೊತೆಗೆ ತೆಗದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಆದ ಬೆನ್ನಲ್ಲೇ ಮಾಹಿತಿ ಪಡೆದ ಪೊಲೀಸರು ಓರ್ವನ ಖದೀಮನ ಬಂಧಿಸಿ 2 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಕಾನ್ಪುರದಲ್ಲಿ.
ಕಾನ್ಪುರದ ಖ್ಯಾತ ಜ್ಯೋತಿಷಿ ತರುಣ್ ಶರ್ಮಾ ಮನೆಯಲ್ಲಿ ಕಳ್ಳನತ ನಡೆದಿತ್ತು. ಮನೆಯಲ್ಲಿದ್ದ ಎಲ್ಲಾ ನಗದು ಹಣ, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು. ಆಘಾತಗೊಂಡಿದ್ದ ತರುಣ್ ಶರ್ಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಇಬ್ಬರು ಕಳ್ಳತನ ಮಾಡಿರುವುದು ಸ್ಪಷ್ಟವಾಗಿದೆ.
ಲವ್ ಜಿಹಾದ್‌ಗೆ ಒದ್ದಾಡಿದ ರಾಷ್ಟ್ರೀಯ ಶೂಟರ್‌ಗೆ ಸಿಕ್ಕಿತು ನ್ಯಾಯ, ಪತಿ ರಖೀಬುಲ್‌ಗೆ ಜೀವಾವಧಿ ಶಿಕ್ಷೆ!
ಜ್ಯೋತಿಷಿ ಮನೆ, ವಲಯದ ಎಲ್ಲಾ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲನೆ ಮಾಡಿದರೂ ಪ್ರಯೋಜನವಾಗಲಿಲ್ಲ. ಕಾರಣ ಈ ಕಳ್ಳರ ಪತ್ತೆ ಇಲ್ಲ. ಖದೀಮರು ಸಿಸಿಟಿವಿಗಳನ್ನು ಗಮನದಲ್ಲಿಟ್ಟುಕೊಂಡೆ ಕಳ್ಳತನದ ಪ್ಲಾನ್ ರೂಪಿಸಿದ್ದರು. ತನಿಖೆ ಚುರುಕುಗೊಳಿಸಿದರೂ ಪ್ರಯೋಜನವಾಗಲಿಲ್ಲ. ಆರೋಪಿಗಳ ಸುಳಿವು ಪತ್ತೆಯಾಗಲಿಲ್ಲ.
ಕೆಲ ತಿಂಗಳು ಕಳೆದರೂ ಪೊಲೀಸರಿಗೆ ಸುಳಿವೇ ಸಿಗಲಿಲ್ಲ. ಇತ್ತ ಆರೋಪಿಗಳು ಹಿರಿ ಹಿರಿ ಹಿಗ್ಗಿದ್ದಾರೆ. ನಮ್ಮ ಕಳ್ಳತನ ಸಕ್ಸಸ್ ಆಗಿದೆ. ಒಂದೇ ಒಂದು ಸುಳಿವು ಉಳಿಸದೇ ಕಳ್ಳತನ ಮಾಡಿದ್ದೇವೆ. ಇನ್ನು ನಮ್ಮನ್ನು ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ಮತ್ತೊಂದು ಕಳ್ಳತನಕ್ಕೆ ಪ್ಲಾನ್ ಹಾಕಿದ್ದಾರೆ. ಇದರ ನಡುವೆ ಆರೋಪಿಗಳು ಕಳ್ಳತನ ಮಾಡಿದ ಬಳಿಕ ಹೊಟೆಲ್‌ನಲ್ಲಿ ರೂಂ ಬುಕ್ ನಗದು ನೋಟುಗಳನ್ನು ಬೆಡ್ ಮೇಲೆ ಚೆಲ್ಲಿ ಕೆಲ ನೋಟುಗಳನ್ನು ಕೈಯಲ್ಲಿ ಹಿಡಿದ ವಿಡಿಯೋ ಮಾಡಿದ್ದರು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗೆಳೆಯನಿಂದ ಕಳ್ಳತನದ ಟ್ರೈನಿಂಗ್: ಗುರುದಕ್ಷಿಣೆ ಕೊಡಲು ಬೈಕ್ ಕದ್ದ ಬಾಲಕ ಅಂದರ್..!
ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಈ ವಿಡಿಯೋ ಹರಿದಾಡಲು ಆರಂಭಿಸುತ್ತಿದ್ದಂತೆ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ಸೈಬರ್ ಕ್ರೈಂ ಪೊಲೀಸ ನರೆವು ಪಡೆದು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ 2 ಲಕ್ಷ ರೂಪಾಯಿ ನಗದು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಇನ್ನು ಮತ್ತೊರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.