ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣವನ್ನೇ ಕಳ್ಳರು ರಾತ್ರೋ ರಾತ್ರಿ ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ.
ಬೆಂಗಳೂರು (ಅ.05): ಸಿಲಿಕಾನ್ ಸಿಟಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಕೊಂಚ ದೂರದಲ್ಲಿ ನಿರ್ಮಾಣ ಮಾಡಲಾಗಿದ್ದ ಬಿಎಂಟಿಸಿ ಬಸ್ ತಂಗುದಾಣವೊಂದನ್ನು ರಾತ್ರೋ ರಾತ್ರಿ ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ. ಬಸ್ ತಂಗುದಾಣ ಪರಿಶೀಲನೆಗೆ ಬಂದ ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲಿ ಬಸ್ ನಿಲ್ದಾಣ ಇಲ್ಲದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳರ ಕೈಚಳಕ ನೋಡಿದರೆ ನೀವೂ ಕೂಡ ಒಂದು ಕ್ಷಣ ದಂಗಾಗೋದು ಗ್ಯಾರಂಟಿ. ಚಿನ್ನ, ಪರ್ಸ್, ಹಣ, ಮೊಬೈಲ್ ಅಥವಾ ಬ್ಯಾಗ್ ಕದಿಯುವುದನ್ನು ನೋಡಿದ್ದೇವೆ. ಆದರೆ, ಈ ಘಟನೆಯಲ್ಲಿ ಕಳ್ಳರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಅನತಿ ದೂರದಲ್ಲಿರುವ ಬಸ್ ತಂಗುದಾಣವನ್ನೇ ಕದ್ದೊಯ್ದಿರುವ ಘಟನೆ ನಡೆದಿದೆ. ನಗರದ ಕನ್ನಿಗ್ಯಾಂ ರಸ್ತೆಯ ಬಸ್ ನಿಲ್ದಾಣದ ತಂಗುದಾಣವನ್ನು ರಾತ್ರೋ ರಾತ್ರಿ ಕದ್ದು ಸಾಗಿಸಿದ್ದಾರೆ.
ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಊಹಾಪೋಹಗಳಿಗೆ ತೆರೆ ಎಳೆದ ದತ್ತುಪುತ್ರ ಉಮೇಶ್!
ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಟೀಲ್ ಕಂಬಿಗಳು, ಶೀಟ್‌ಗಳಿಂದ ಬಿಎಂಟಿಸಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡಲಾಗಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ಪಡೆದು ಖಾಸಗಿ ಕಂಪನಿಯಿಂದ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಯಾಣಿಕರಿಗೆ ನೆರಳಾಗಿದ್ದ ಬಸ್ ತಂಗುದಾಣದ ಶೆಡ್‌ಅನ್ನು ಕಂಪನಿಯಿಂದ ಕಳೆದ ತಿಂಗಳು ಬಂದು ಪರಿಶೀಲನೆ ಮಾಡಿದಾಗ ಅಲ್ಲಿ ಬಸ್ ಶೆಲ್ಟರ್ ಇಲ್ಲದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಇನ್ನು ಬಿಬಿಎಂಪಿ ವತಿಯಿಂದ ತೆರವು ಮಾಡಿದ್ದಾರೆ ಎಂದು ಸುಮ್ಮನಾಗಿದ್ದರು.
ಖಾಸಗಿ ಕಂಪನಿಯು ಸಿಎಸ್‌ಆರ್ ಫಂಡ್‌ನಿಂದ ನಿರ್ಮಿಸಿದ್ದ ಬಸ್ ತಂಗುದಾಣವನ್ನು ಒಂದು ಮಾಹಿತಿಯೂ ನೀಡದೇ ಬಿಬಿಎಂಪಿ ತೆರವುಗೊಳಿಸದ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಬಗ್ಗೆ ಬಿಬಿಎಂಪಿ ಅಧಿಕಾರಿಗಳು ತಂಗುದಾಣವನ್ನು ತೆರುವು ಮಾಡಿಲ್ಲ ಎಂದು ತಿಳಿಸಿದ್ದಾರೆ. ಇದಾದ ನಂತರ ಕಂಪಯಿಂದ ಸೆ.30ರಂದು ಪೊಲೀಸ್ ಠಾಣೆಗೆ ದುರು ನೀಡಲಾಗಿದೆ. ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಸಿಸಿಟಿವಿ ಹಾಗೂ ಇತರೆ ಮೂಲಗಳಿಂದ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಎಲ್ಲೆಡೆ ಬಸ್ ತಂಗುದಾಣ ಕಳ್ಳರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿ ವರದಕ್ಷಿಣೆಗೋಸ್ಕರ ಮಡದಿಯನ್ನೇ ಕೊಲೆಗೈದ ಪಾಪಿ ಗಂಡ
ಘಟನೆಯಲ್ಲಿ ಆಗಿದ್ದೇನು?
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಿಲುಗಡೆ ಪ್ರದೇಶದಲ್ಲಿ ಖಾಸಗಿ ಕಂಪನಿಗಳು ತಮ್ಮ ಸಿಎಸ್‌ಆರ್ ಫಂಡ್‌ನಲ್ಲಿ ಬಸ್ ಶೆಲ್ಟರ್ ನಿರ್ಮಿಸಲು ಅವಕಾಶವಿದೆ. ಹೀಗೆ, ನಿರ್ಮಿಸಲಾಗಿದ್ದ ಕಂಪನಿಯ ಬಸ್ ಶೆಲ್ಟರ್‌ನ ಕಬ್ಬಿಣದ ಕಂಬಿಗಳು, ಚೇರ್‌ಗಳು, ಬೋರ್ಡ್‌ಗಳು, ಶೀಟ್‌ಗಳನ್ನು ಕಳ್ಳರು ಕಬ್ಬಿಣ ಕತ್ತರಿಸುವ ಯಂತ್ರವನ್ನು ಉಪಯೋಗಿಸಿ ಕತ್ತರಿಸಿದ್ದಾರೆ. ನಂತರ, ಅದನ್ನು ಆಟೋದಲ್ಲಿ ಬಂದು ತುಂಬಿಕೊಂಡು ಹೋಗಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಪತ್ತೆ ಮಾಡುತ್ತಿದ್ದಾರೆ.