ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್‌ಪಿ ರಾಜೇಶ್‌!

Published : Dec 05, 2024, 04:36 PM ISTUpdated : Dec 05, 2024, 04:42 PM IST
ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು  ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್‌ಪಿ ರಾಜೇಶ್‌!

ಸಾರಾಂಶ

ಪತಿ-ಪತ್ನಿಯ ಸಾವಿಗೆ ಕಾರಣನಾದ ಮುಖ್ಯ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ. ಡಿವೈಎಸ್‌ಪಿ ರಾಜೇಶ್‌ ಅವರು ನಡೆದ ಘಟನೆಯನ್ನು ವಿವರಿಸಿದ್ದು ಹೀಗೆ ನೋಡಿ...  

ಭೂತ, ಪ್ರೇತ, ಪಿಶಾಚಿ, ಆತ್ಮಗಳ ಇರುವಿಕೆ ಇದೆಯೋ ಇಲ್ಲವೋ ಎನ್ನುವ ಬಗ್ಗೆ ದೊಡ್ಡ ಜಿಜ್ಞಾಸೆಯೇ ಇದೆ. ಅದು ಅವರವರ ಭಾವಕ್ಕೆ ಬಿಟ್ಟ ವಿಷಯ. ಆದರೆ 2010ರಲ್ಲಿ ನಡೆದ ಮೈ ಝುಂ ಎನ್ನುವ ಘಟನೆಯೊಂದನ್ನು ವಿವರಿಸಿದ್ದಾರೆ DySP ಎಲ್‌.ವೈ, ರಾಜೇಶ್‌ ಅವರು. ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಘಟನೆಯನ್ನು ಅವರು ಮೆಲುಕು ಹಾಕಿದ್ದಾರೆ.  ಅವರ ಮಾತಿನಲ್ಲಿಯೇ ಹೇಳುವುದಾದರೆ, ಅದು 2012ರ ಆಸುಪಾಸು. ಬೆಂಗಳೂರಿನ ಮೈಕೋ ಲೇಔಟ್‌ ಉದ್ಘಾಟನೆ ಇತ್ತು.  ಉತ್ತಮ ಕೆಲಸ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ಕೂಡ ಕೊಡುವುದು ಇತ್ತು. ಅದರಲ್ಲಿ ನನ್ನ ಹೆಸರೂ ಇತ್ತು. ನಾನು ಪ್ರಶಸ್ತಿ ಸ್ವೀಕರಿಸುವುದಕ್ಕೆಂದು ಅಲ್ಲಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಂದು ಕರೆ ಬಂತು.  ಅಗರಾ ಕೆರೆ ಬಳಿ  ನಿರ್ಜನ ಪ್ರದೇಶದಲ್ಲಿ ಹುಡುಗನ ಶವ ಬಿದ್ದಿದೆ ಎಂದು ಆಟೋ ಡ್ರೈವರ್‍‌ ಒಬ್ಬರು ಕರೆ ಮಾಡಿ ಹೇಳಿದರು. ಕೂಡಲೇ ನಾನು,  ಫಿಂಗರ್ ಪ್ರಿಂಟ್‌ ತಜ್ಞರು, ಕ್ಯಾಮೆರಾಮನ್‌, ಶ್ವಾನದಳ ಎಲ್ಲವನ್ನೂ ಕರೆದುಕೊಂಡು ಅಲ್ಲಿಗೆ ಹೋದೆ. ಅಂಗಾತ ಬಿದ್ದವನ ತಿರುಗಿಸಿ ನೋಡಿದಾಗ ಅಲ್ಲಿ  ಸ್ಪುರದ್ರೂಪಿ ಯುವಕನ  ಕತ್ತು ಸೀಳಿ ಸಾಯಿಸಿರುವುದು ಕಾಣಿಸಿತ್ತು ಎಂದಿದ್ದಾರೆ.

ಸ್ವಲ್ಪವೇ ದೂರದಲ್ಲಿ  ಫಿಯೆಟ್‌ ಕಾರು ಸಮೀಪದಲ್ಲಿಯೇ ಇತ್ತು. ಅಲ್ಲಿ ಹೋಗಿ ನೋಡಿದಾಗ ಕಾರಲ್ಲಿ ಬ್ಲಡ್‌ ಇತ್ತು. ಇಲ್ಲಿ ಸಾಯಿಸಿ ಬಳಿಕ ಹೆಣ ಕೆರೆ ಬಳಿ ಬೀಸಾಕಲಾಗಿದೆ ಎಂದು ತಿಳಿಯಿತು. ಕಾರಿನ ನಂಬರ್‍‌ ಜಾಡು ಹಿಡಿದು ಹೋದಾಗ, ಅದರ ಓನರ್‍‌ ಯಾರು ಎಂದು ತಿಳಿಯಿತು. ಅವರ ಬಳಿ ಹೋದಾಗ, ಅವರಿಗೆ ಏನೂ ವಿಷಯವೇ ಗೊತ್ತಿರಲಿಲ್ಲ. ನಂತರ ಅವರು ಆ ಕಾರನ್ನು ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಜಾನಕಿ ಎಂಬ ಯುವತಿಗೆ ನೀಡಿರುವುದಾಗಿ ಹೇಳಿದರು. ತುಂಬಾ ಹಳೆಯ ಕಾರಾಗಿದ್ದರಿಂದ ಪಾಪ ಕೆಲಸ ಮಾಡುತ್ತಿದ್ದವಳಿಗೆ ನೀಡಿದೆ ಎಂದರು. ಬಳಿಕ ಅವರ ಬಳಿಯೇ ಜಾನಕಿ ಮನೆಯ ವಿಳಾಸ ಪಡೆದು ಹೋದಾಗ, ಅಲ್ಲಿ ಜಾನಕಿಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿರುವುದು ಕಂಡು ಬಂದಿತು. ಅಲ್ಲಿ ಸತ್ತವ ಜಾನಕಿಯ ಗಂಡ ಎನ್ನುವುದು ತಿಳಿಯಿತು. ನಂತರ ಅಕ್ಕ-ಪಕ್ಕದ ಮನೆಯವರನ್ನು ವಿಚಾರಿಸಿದಾಗ, ಇಬ್ಬರೂ ತುಂಬಾ ಪ್ರೀತಿಯಿಂದ ಸಂಸಾರ ಮಾಡುತ್ತಿರುವುದು ತಿಳಿಯಿತು. ಈ ಕೇಸ್ ಬಿಡಿಸುವುದು ದೊಡ್ಡ ಸಮಸ್ಯೆಯೇ ಆಯಿತು ಎಂದು ಘಟನೆಯನ್ನು ವಿವರಿಸಿದ್ದಾರೆ ಡಿವೈಎಸ್‌ಪಿ ರಾಜೇಶ್‌.  

ಬೆಂಗಳೂರಿನಲ್ಲಿ ಮಧ್ಯರಾತ್ರಿ ಬೈಕ್​ ಹಿಂಬದಿ 'ಭೂತ'ದ ಸವಾರಿ: ವಿಡಿಯೋದಲ್ಲಿರೋ ಕಾಲಿನ ಮೇಲೆ ಎಲ್ಲರ ಕಣ್ಣು!
   
ಅವರ ಮನೆಯವರಿಗೂ ವಿಷಯ ತಿಳಿಸಲಾಯಿತು. ಕೊನೆಗೆ ಅಂತ್ಯಕ್ರಿಯೆ ಸಂದರ್ಭದಲ್ಲಿ, ಒಬ್ಬ ಮಿಸ್ಸಿಂಗ್‌ ಎನ್ನುವುದು ತಿಳಿಯಿತು. ಆತ ಜಾನಕಿಯ ರಾಖಿ ಸಹೋದರ ಎನ್ನುವುದು ತಿಳಿಯಿತು. ಅವನನ್ನು ಹುಡುಕಿ ಹೊರಟಾಗ ಅವನ ರೂಮ್‌ನಲ್ಲಿ ಇನ್ನೊಬ್ಬ ಇದ್ದ. ಇಬ್ಬರನ್ನೂ ಕರೆದುಕೊಂಡು ಬಂದೆವು. ಅವರ ಮೈ ನೋಡಿದಾಗ ಗಾಯದ ಗುರುತು ಇತ್ತು. ಡೌಟ್‌ ಬಂದು ನಮ್ಮದೇ ಭಾಷೆಯಲ್ಲಿ ಪ್ರಶ್ನಿಸಿದಾಗ, ಅವರು ಸತ್ಯ ಒಪ್ಪಿಕೊಂಡರು. ಜಾನಕಿ ಗಂಡ ಅಮೃತ್‌ ರಾಯ್‌ಗೆ ಶೋಕಿ ಮಾಡುವ ಹುಚ್ಚು. ಕೈಯಲ್ಲಿ ಏನೂ ದುಡ್ಡು ಇಲ್ಲದಿದ್ದರೂ, ಸ್ನೇಹಿತರ ಬಳಿ ಅಷ್ಟು ದುಡ್ಡಿದೆ, ಇಷ್ಟಿದೆ ಎಂದೆಲ್ಲಾ ಜಂಭ ಕೊಚ್ಚಿ ಕೊಳ್ಳುತ್ತಿದ್ದ. ಸರಿಯಾದ ಕೆಲಸ ಇಲ್ಲದಿದ್ದರೂ ಸೈಟ್‌ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಐದು ಲಕ್ಷ ಇದೆ ಎಂದೆಲ್ಲಾ ಹೇಳಿದ್ದ. ಆ ಕಾಲದಲ್ಲಿ ಐದು ಲಕ್ಷ ಅಂದ್ರೆ ದೊಡ್ಡ ಅಮೌಂಟ್‌. ಆದ್ದರಿಂದ ಅವನ ಸ್ನೇಹಿತರೆಲ್ಲಾ ಸೇರಿ ಸಾಯಿಸುವ ಪ್ಲ್ಯಾನ್‌ ಮಾಡಿದ್ರು. ಅದರಂತೆ ಅವನನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ರೆ, ಮನೆಯಲ್ಲಿ ಜಾನಕಿಯ ಕೊಲೆ ಮಾಡಲಾಗಿತ್ತು. ಆ ಮೇಲೆ ಮನೆಯೆಲ್ಲಾ ತಡಕಾಡಿದ್ರೂ ಏನೂ ಸಿಕ್ಕಿರಲಿಲ್ಲ ಎಂದಿದ್ದಾರೆ ರಾಜೇಶ್‌.

ಕೊನೆಗೆ ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ವಿ. ಆದರೆ ಮುಖ್ಯ ಆರೋಪಿ ಮಾತ್ರ ಎಸ್ಕೇಪ್‌ ಆಗಿದ್ದ. ಅವನು ಅಸ್ಸಾಂ ರೈಲು ಹತ್ತಿ ಗುಹಾಟಿಗೆ ಹೋಗೋ ಪ್ಲ್ಯಾನ್‌ ಮಾಡಿದ್ದ. ಅವನು ಸಕ್ಸಸ್‌ ಕೂಡ ಆಗ್ತಿದ್ದನೋ ಏನೋ, ಆದರೆ ವಾಪಸ್‌ ಬೆಂಗಳೂರಿಗೇ ಬಂದು ನಮ್ಮ ಕೈಯಲ್ಲಿ ಸಿಕ್ಕಾಕೊಂಡ ಎಂದ ರಾಜೇಶ್‌ ಅವರು, ಅವನ ಬಗ್ಗೆ ಹೇಳುತ್ತಲೇ ಇದನ್ನು ಏನು ಹೇಳಬೇಕೋ ಗೊತ್ತಾಗ್ತಿಲ್ಲ ಎಂದಿದ್ದಾರೆ. ವಾಪಸ್‌ ಬೆಂಗಳೂರಿಗೆ ಬರಲು ಕಾರಣ ಕೇಳಿದಾಗ, ಅವನು ಟ್ರೇನ್‌ನಲ್ಲಿ ಹೋಗುವಾಗ ಜಾನಕಿಯ ಆತ್ಮ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡಿದಂತೆ. ಅವನು ಹೆದರಿ ಚಲಿಸುತ್ತಿರುವ ರೈಲಿನಿಂದ ಹಾರಿದ್ದಾನೆ. ಗಾಯಗಳಾಗಿದ್ದವು. ಅವನ ಬಳಿ ಇದ್ದ ದುಡ್ಡೆಲ್ಲಾ ನಾಪತ್ತೆಯಾಗಿದ್ದವು. ಅದಕ್ಕಾಗಿ ವಾಪಸ್‌ ಬೆಂಗಳೂರಿಗೆ ಬಂದು ದುಡ್ಡು ತೆಗೆದುಕೊಂಡು ಹೋಗಲು ಬಂದು ನಮ್ಮ ಬಳಿ ಸಿಕ್ಕಾಕ್ಕೊಂಡಿದ್ದ. ಅವನು ಹೇಳಿದ ಈ ಕಥೆ ಕೇಳಿ ಎಲ್ಲರಿಗೂ ಶಾಕ್‌ ಆಯಿತು. ಜಾನಕಿ ಆತ್ಮದಿಂದ ಮುಖ್ಯ ಅಪರಾಧಿ ಸಿಕ್ಕಂತಾಯಿತು. ಕೊನೆಗೆ ಎಲ್ಲರಿಗೂ ಜೀವಾವಧಿ ಶಿಕ್ಷೆಯಾಯಿತು ಎಂದಿದ್ದಾರೆ ಅವರು.  

ಧಾರವಾಡದ ಯುವತಿ ದೇಹ ಹೊಕ್ಕ ಎಂಟು ಆತ್ಮ: ಕೂದಲು ಒರೆಸುವಾಗ ನಡೆದ ಭಯಾನಕ ಘಟನೆ ವಿವರಿಸಿದ ಘೋಸ್ಟ್​ ಹಂಟರ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!