ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯನ್ನು ಪ್ರೇಮ ಪಾಶಕ್ಕೆ ಸಿಲುಕಿಸಿ ಯುವಕನೊಬ್ಬ 2.5 ಕೋಟಿ ರೂಪಾಯಿ ವಂಚಿಸಿದ್ದಾನೆ. ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.
ಬೆಂಗಳೂರು (ಡಿ.05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದರಲ್ಲಿ ಹೈಸ್ಕೂಲ್ ಓದುವಾಗಲೇ ಯುವಕನನೊಬ್ಬನನ್ನು ಲವ್ ಮಾಡಿದ್ದಾಳೆ. ಆಗ ಹುಡುಗಿ ಮನೆಯವರು ಕೋಟಿ ಕುಳ ಎಂಬುದನ್ನು ನೋಡಿ ಆಕೆಯನ್ನು ಸಿನಿಮಾ, ಪಬ್, ರೆಸಾರ್ಟ್, ಪಾರ್ಟಿ ಎಂದೆಲ್ಲಾ ಸುತ್ತಾಡಿಸಿ ಆಕೆಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ. ಇದಾದ ನಂತರ ಯುವತಿಯೊಂದಿಗೆ ಇರುವ ಖಾಸಗಿ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಅವರ ಮನೆಯವರಿಂದ ಬರೋಬ್ಬರಿ 2.5 ಕೋಟಿ ರೂ. ಪಡೆದು ಪಂಗನಾಮ ಹಾಕಿದ್ದಾನೆ.
ಹೌದು, ಶ್ರೀಮಂತ ಕುಟುಂಬಗಳ ಅಪ್ರಾಪ್ತ ವಯಸ್ಕ ಹುಡುಗಿಯರನ್ನು ಪ್ರೇಮ ಪಾಶಕ್ಕೆ ಸಿಲುಕಿಸುವ ಕೆಲವು ಯುವಕರು ಅವರನ್ನು ಎಲ್ಲ ರೀತಿಯಿಂದಲೂ ಬಳಸಿಕೊಂಡು, ಪುನಃ ಅವರ ಮನೆಯವರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಮುಂದಾಗುತ್ತಾರೆ. ಇಂತಹ ಘಟನೆಗಳಿಗೆ ಲವ್ ಸೆಕ್ಸ್ ಅಂಡ್ ದೋಖಾ ಎಂದು ಕರೆಯುತ್ತಾರೆ. ಇದೇ ರೀತಿ ಬೆಂಗಳೂರಿನಲ್ಲಿಯೂ ಇಂತಹದ್ದೊಂದು ಘಟನೆ ನಡೆದಿದೆ. ಇಲ್ಲಿ ಶ್ರೀಮಂತ ಮನೆತನದ ಹೈಸ್ಕೂಲ್ ಓದುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿ, ಪ್ರೇಮದ ನಾಟಕವಾಡಿ ಬಲೆಗೆ ಬೀಳಿಸಿಕೊಂಡ ಯುವಕನೊಬ್ಬ ಆಕೆಯನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡಿದ್ದಾನೆ. ನಂತರ, ಅವರ ಮನೆಯವರಿಗೆ ಮಗಳ ಖಾಸಗಿ ಫೋಟೋ ಹಾಗೂ ವಿಡಿಯೋ ತೋರಿಸಿ ಮಾಡಿ 2.5 ಕೋಟಿ ರೂ. ದೋಚಿದ್ದಾನೆ.
ಈ ಘಟನೆ ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ನಂಬಿಸಿ ವಂಚನೆ ಮಾಡಿ, ಮತ್ತಷ್ಟು ಹಣಕ್ಕಾಗಿ ಬೆದರಿಕೆ ಒಡ್ಡುತ್ತಿದ್ದ ಆರೋಪಿ ಮೋಹನ್ ಕುಮಾರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನೂ ಕೂಡ ಬೆಂಗಳೂರು ಹೊರ ವಲಯದ ಖಾಸಗಿ ಶಾಲೆಯಲ್ಲಿ 2017-2022ರವರೆಗೆ ಓದುತ್ತಿದ್ದನು. ಈ ವೇಳೆ ಪರಿಚಯವಾಗಿದ್ದ ಶ್ರೀಮಂತ ಕುಟುಂಬದ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದನು. ಈ ನಡುವೆ ಶಾಲೆಯಲ್ಲಿ ಓದುವಾಗಲೇ ರೆಸಾರ್ಟ್, ಪಬ್, ಪಾರ್ಟಿ, ಸಿನಿಮಾ ಹಾಗೂ ಪಾರ್ಕ್ ಎಂದೆಲ್ಲಾ ಕರೆದುಕೊಂಡು ಸುತ್ತಾಡಿದ್ದಾನೆ. ಇನ್ನು ಹುಡುಗಿ ಮನೆಯವರು ಕೋಟಿ ಕುಳ ಎಂಬುದನ್ನು ಅರಿತು ಹುಡುಗಿ ಕಡೆಯಿಂದಲೇ ಹಣ ಖರ್ಚು ಮಾಡಿಸಿದ್ದಾನೆ. ಇನ್ನು ಯುವತಿ ಅಪ್ರಾಪ್ತೆ ಆಗಿದ್ದಾಗಲೇ ಆಕೆಯನ್ನು ಹಲವು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ.
ಇದನ್ನೂ ಓದಿ: Bengaluru: 15 ಲಕ್ಷ ಮೋಸ ಮಾಡಿದ ಕಾಲೇಜು ಸಹಪಾಠಿ, ನೇಣಿಗೆ ಕೊರಳುಕೊಟ್ಟ 19 ವರ್ಷದ ಯುವತಿ!
ಇನ್ನು ಪ್ರೌಢಶಾಲಾ ಹಂತದ ಶಿಕ್ಷಣ ಮುಗಿಯುತ್ತಿದ್ದಂತೆ ಪ್ರೇಯಸಿಯನ್ನು ಗೋವಾ, ರೆಸಾರ್ಟ್, ಪಾರ್ಟಿ ಎಂತೆಲ್ಲಾ ಜೊತೆಗೆ ಹಲವು ದಿನಗಕಟ್ಟಲೆ ಕರೆದೊಯ್ಯುತ್ತಿದ್ದನು. ಆಗ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯ ಖಾಸಗಿ ಫೋಟೋ, ವಿಡಿಯೋ ಸಂಗ್ರಹ ಮಾಡಿಟ್ಟುಕೊಂಡಿದ್ದಾನೆ. ನಂತರ, ನನಗೆ ಏನೋ ಸ್ವಲ್ಪ ಹಣ ಬೇಕಿದೆ ಕೊಡು ಎಂದಯ ಕೇಳಿದಾಗ ಯುವತಿ ನಿರಾಕರಣೆ ಮಾಡಿದ್ದಾಳೆ. ಆಗ ನೀನು ಹಣ ಕೊಡದಿದ್ದರೆ ನಿನ್ನ ಖಾಸಗಿ ಫೋಟೋ ಸೋಶಿಯಲ್ ಮೀಡಿಯಾಗೆ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಲೂ, ಯುವತಿ ಹಣ ಹೊಂದಿಸಿ ಕೊಡಲು ಸಾಧ್ಯವಾಗದಿದ್ದಾಗ ನೇರವಾಗಿ ಅವರ ಮನೆಯವರಿಗೆ ಯುವತಿಯ ಖಾಸಗಿ ಫೋಟೋ, ವಿಡಿಯೋ ಕಳಿಸಿ ಬೆದರಿಕೆ ಹಾಕಿದ್ದಾನೆ.
ಆಗ ಯುವತಿ ಮನೆಯವರಿಂದ ಹಂತ ಹಂತವಾಗಿ 2.5 ಕೋಟಿ ರೂ. ಹಣವನ್ನು ಹಾಕಿಸಿಕೊಂಡಿದ್ದಾರೆ. ಜೊತೆಗೆ, ತನಗಾಗಿ ಬೈಕ್, ಚಿನ್ನಾಭರಣ, ನಗದು ಹಣ, ಬೆಲೆ ಬಾಳುವ ವಾಚ್‌ಗಳನ್ನು ಗಿಫ್ಟ್ ಆಗಿ ಪಡದುಕೊಂಡಿದ್ದಾರೆ. ಇದಾದ ನಂತರವೂ ಯುವತಿಯ ಪ್ರೀತಿ ನಿರಾಕರಣೆ ಮಾಡಿ ಮೋಸ ಮಾಡಿದ್ದು, ಪುನಃ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈತನ ಕಿರುಕುಳ ತಾಳಲಾರದೇ ಯುವತಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಜೊತೆಗೆ, ಆರೋಪಿಯಿಂದ ಕೆಲವೊಂದಿಷ್ಟು ಹಣ, ಚಿನ್ನಾಭರಣ ಹಾಗೂ ಕೆಲವು ವಸ್ತುಗಳನ್ನು ರಿಕವರಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಆನ್‌ಲೈನ್ ಗೇಮಿಂಗ್ ಸಾಲದ ಶೂಲಕ್ಕೆ ಪ್ರವೀಣ ಬಲಿ