Bengaluru Crime: ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

Kannadaprabha News   | Asianet News
Published : Feb 27, 2022, 11:18 AM IST
Bengaluru Crime: ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

ಸಾರಾಂಶ

*  ಬೆಂಗಳೂರಿನ ದೇವರಬೀಸನಹಳ್ಳಿಯ ಓಂ ಶಕ್ತಿ ದೇವಾಲಯ ಸಮೀಪ ನಡೆದ ಘಟನೆ *  ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ *  ತಾಯಿಯ ಹತ್ಯೆಗೈದ ಕಿರಾತಕನ ಬಂಧನ  

ಬೆಂಗಳೂರು(ಫೆ.27):  ಭಿಕ್ಷೆ ಬೇಡಿ ಸಂಪಾದಿಸಿದ ಹಣವನ್ನು ಮದ್ಯ(Alcohol) ಸೇವನೆಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ತನ್ನ ತಾಯಿಯನ್ನು ದುರುಳ ಮಗನೊಬ್ಬ ಕೊಂದಿರುವ(Murder) ಘಟನೆ ನಗರದ ದೇವರಬೀಸನಹಳ್ಳಿಯ ಓಂ ಶಕ್ತಿ ದೇವಾಲಯ ಸಮೀಪ ನಡೆದಿದೆ.

ದೇವರಬೀಸನಹಳ್ಳಿ ನಿವಾಸಿ ಯಮುನಮ್ಮ(70) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಮೃತಳ ಪುತ್ರ ಅಂಬರೀಷ್‌ನನ್ನು ಬಂಧಿಸಲಾಗಿದೆ(Arrest). ಹಣದ ವಿಚಾರವಾಗಿ ತಾಯಿ ಜತೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಆರೋಪಿ ಗಲಾಟೆ ಮಾಡಿದ್ದಾನೆ. ಆಗ ತಾಯಿ ಮೇಲೆ ಹಲ್ಲೆ ನಡೆಸಿ, ಬಳಿಕ ಜೋರಾಗಿ ದೂಡಿದ್ದಾನೆ. ಈ ಹಂತದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಾಗ ತಲೆ ಕಲ್ಲಿಗೆ ಬಡಿದಿದ್ದರಿಂದ ತೀವ್ರವಾಗಿ ಗಾಯಗೊಂಡು ಯಮುನಮ್ಮ ಮೃತಪಟ್ಟಿದ್ದಾಳೆ(Death). ಪರಾರಿಯಾಗಿದ್ದ ಆರೋಪಿಯನ್ನು(Accused) ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bizarre Crime : ತುಮಕೂರಲ್ಲಿ ಕೋಳಿ ಕಳ್ಳರ ಕೈಚಳಕ... ಬಾಕ್ಸ್ ಮಂಗಮಾಯ!

ರಾಯಚೂರು(Raichur) ಜಿಲ್ಲೆ ಲಿಂಗಸೂಗೂರು ತಾಲೂಕಿನ ಯಮುನಮ್ಮ, ದೇವರಬೀಸನಹಳ್ಳಿಯ ಓಂಶಕ್ತಿ ದೇವಸ್ಥಾನ ಸಮೀಪ ಜೋಪಡಿಯಲ್ಲಿ ತನ್ನ ಮಕ್ಕಳ ಜತೆ ವಾಸವಾಗಿದ್ದಳು. ಕೊರೋನಾ(Coronavirus) ಮೊದಲ ಅಲೆಯಲ್ಲಿ ಆಕೆಯ ಹಿರಿಯ ಪುತ್ರ ಸೋಂಕಿತನಾಗಿ ಮೃತಪಟ್ಟಿದ್ದ. ನಂತರ ಕಿರಿಯ ಪುತ್ರನ ಜತೆ ಆಕೆ ನೆಲೆಸಿದ್ದಳು. ದೇವರ ಬೀಸನಹಳ್ಳಿ ವ್ಯಾಪ್ತಿಯಲ್ಲಿ ಭಿಕ್ಷಾಟನೆ(Begging) ಮಾಡಿ ಯಮುನಮ್ಮ ಜೀವನ ಸಾಗಿಸುತ್ತಿದ್ದಳು. ಆದರೆ ಯಾವುದೇ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ ಅಂಬರೀಷ್, ಭಿಕ್ಷೆ ಬೇಡಿ ತಾಯಿ ಸಂಪಾದಿಸಿದ ಹಣಕ್ಕೆ ಕೈ ಹಾಕುತ್ತಿದ್ದ. ವಿಪರೀತ ಮದ್ಯ ವ್ಯಸನಿ ಆಗಿದ್ದ ಆತ, ಪ್ರತಿದಿನ ಕುಡಿಯಲು ಹಣ ಕೊಡುವಂತೆ ತಾಯಿ ಜತೆ ಗಲಾಟೆ ಮಾಡುತ್ತಿದ್ದ. ಹಣ ಕೊಡದೆ ಹೋದರೆ ಆಕೆಯನ್ನು ಹಿಡಿದು ಬಡಿಯುತ್ತಿದ್ದ. ತನ್ನ ಸಂಕಷ್ಟವನ್ನು ಸ್ಥಳೀಯರ ಬಳಿ ಹೇಳಿಕೊಂಡು ಆಕೆ ಕಣ್ಣೀರಿಟ್ಟಿದ್ದಳು ಎಂದು ಪೊಲೀಸರು(Police) ತಿಳಿಸಿದ್ದಾರೆ.

ಬುದ್ದಿ ಮಾತಿಗೂ ಬೆಲೆ ಇಲ್ಲ

ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಯಮುನಮ್ಮ ತನ್ನ ಜೋಪಡಿ ಸಮೀಪದ ಅಂಗಡಿ ಬಳಿಗೆ ಹೋಗಿ ತನ್ನನ್ನು ಮಗ ಕೊಂದು ಬಿಡುತ್ತಾನೆ. ಸ್ಪಲ್ಪ ಹಣ ಕೊಡಿ ನಾನು ಊರಿಗೆ ಹೋಗುತ್ತೇನೆ ಎಂದು ಗೋಳಾಡಿದ್ದಾಳೆ. ಆಗ ಸ್ಥಳೀಯರು, ಅಂಬರೀಷ್‌ಗೆ ಬೈದು ಬುದ್ಧಿ ಹೇಳಿ ಬಂದಿದ್ದರು. ಇದಾದ ಕೆಲ ಹೊತ್ತಿನಲ್ಲೇ ಹಣಕ್ಕಾಗಿ ತಾಯಿಯನ್ನು ಆತ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ರಾಮನಗರ: ಕಾಂಗ್ರೆಸ್(Congress) ಮುಖಂಡನನ್ನ ದುಷ್ಕರ್ಮಿಗಳು(Miscreants) ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಮನಗರ(Ramanagara) ಜಿಲ್ಲೆಯ ಬಿಡದಿ ಹೋಬಳಿ ಬೈರವನ ದೊಡ್ಡಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಗಂಡಪ್ಪ ಎಂಬುವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ. 

Harsha Murder Case: ಪೊಲೀಸರ ಭರ್ಜರಿ ಬೇಟೆ: ಸೈತಾನರ ಸೈನ್ಯದ ಹುಡುಕಾಟದ ರೋಚಕ ತನಿಖೆ

ದುಷ್ಕರ್ಮಿಗಳು ಗಂಡಪ್ಪ(Gundappa) ಅವರ ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‌ನಿಂದ ಚುಚ್ಚಿ ಕೊಲೆ(Murder) ಮಾಡಲಾಗಿದೆ. ಬೈರವನ ದೊಡ್ಡಿ ಸಮೀಪ ಇರುವ ಅವರದೇ ತೋಟದ ಬೈಕ್ ಸರ್ವಿಸ್ ಸ್ಟೇಷನ್ ಮನೆಯಲ್ಲಿ ಕೊಲೆ ಮಾಡಲಾಗಿದೆಮ ಎಂದು ತಿಳಿದು ಬಂದಿದೆ. 

ರಾತ್ರಿ 11 ಗಂಟೆಗೆ ಘಟನೆ ನಡೆದಿದೆ. ಮೃತದೇಹವನ್ನ(Deadbody) ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಮೀನು ವಿವಾದಕ್ಕೆ(Land Dispute) ಸಂಬಂಧಿಸಿದಂತೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಿಡದಿ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ(Investigation) ಆರಂಭಿಸಿದ್ದಾರೆ. ಪೊಲೀಸರು ತನಿಖೆಯಿಂದಷ್ಟೇ ಕೊಲೆಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ