ಕಲಬುರಗಿ: ಸಾಲ ತೀರಿಸಲು ತಂದೆ ಹೆಸರಿಗೆ ಇನ್ಶೂರೆನ್ಸ್ ಮಾಡಿಸಿ ಹತ್ಯೆಗೈದ ಮಗ!

By Kannadaprabha News  |  First Published Jan 8, 2025, 9:00 AM IST

ಆರು ತಿಂಗಳ ಹಿಂದೆಯೇ ನಡೆದಂತಹ ಅಪಘಾತ ಪ್ರಕರಣದ ಹಿಂದೆ ಅಪ್ಪನ ವಿಮೆ ಹಣ ಲಪಯಾಟಿಸಿ ತಾನು ಮಾಡಿದ್ದ ಸಾಲ ತೀರಿಸಲು ಹೊಂಚು ಹಾಕಿದ್ದ ಪಾಪಿ ಮಗನ ರೋಚಕ ಕಥೆ ಅಡಗಿರೋದನ್ನ ಪೊಲೀಸರು ತಮ್ಮ ತನಿಖೆಯಿಂದ ಸಾಬೀತು ಮಾಡಿದ್ದಾರೆ.


ಕಲಬುರಗಿ(ಜ.08):  ತಾನು ಮಾಡಿದ ಸಾಲ ತೀರಿಸಲು ಹೆತ್ತ ತಂದೆಯನ್ನೇ ಕೊಂದು ಅಪಘಾತದ ಕಥೆಕಟ್ಟಿದ ಸತೀಶ ಎಂಬ ಪಾಪಿಪುತ್ರನನ್ನು ಕಲಬುರಗಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಕುರಿತಂತೆ ಕಲಬುರಗಿ ಜಿಲ್ಲಾ ಎಸ್ಪಿ ಶ್ರೀನಿವಾಸುಲು ಅಡ್ಡೂರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಆರು ತಿಂಗಳ ಹಿಂದೆಯೇ ನಡೆದಂತಹ ಅಪಘಾತ ಪ್ರಕರಣದ ಹಿಂದೆ ಅಪ್ಪನ ವಿಮೆ ಹಣ ಲಪಯಾಟಿಸಿ ತಾನು ಮಾಡಿದ್ದ ಸಾಲ ತೀರಿಸಲು ಹೊಂಚು ಹಾಕಿದ್ದ ಪಾಪಿ ಮಗನ ರೋಚಕ ಕಥೆ ಅಡಗಿರೋದನ್ನ ಪೊಲೀಸರು ತಮ್ಮ ತನಿಖೆಯಿಂದ ಸಾಬೀತು ಮಾಡಿದ್ದಾರೆ.

Tap to resize

Latest Videos

ಕುಮಾರಸ್ವಾಮಿ ಸರ್ಕಾರ ಬೀಳಿಸಿದ್ದ ಜಿಮ್‌ ಸೋಮನ ವಿರುದ್ಧ ರೇಪ್‌ ಕೇಸ್‌!

ಕಲಬುರಗಿ ನಗರದ ಆದರ್ಶ ಕಾಲೋನಿ ನಿವಾಸಿ ಸತೀಶ ಎಂಬಾತನೇ ಹೆತ್ತ ತಂದೆಯನ್ನೇ ಕೊಂದು ಅಪಘಾತದ ಕಥೆ ಕಟ್ಟಿದ್ದ ಬಹಾದ್ದೂರ್‌ ಮಗನಾಗಿದ್ದಾನ. ತನಿಖೆಯಲ್ಲಿ ಈತ ಆಡಿದಂತಹ ನಾಟಕಗಳೆಲ್ಲವನ್ನು ಪೊಲೀಸರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಎಲ್ಲದಕ್ಕೂ ಸಾಕ್ಷಿ ಪುರಾವೆ ಒದಗಿಸಿ ಇಡೀ ಪ್ರಕರಣದ ರಹಸ್ಯ ಭೇದಿಸಿದ್ದಾರೆ.

ಹೆತ್ತು ಕೈತುತ್ತು ಉಣಿಸಿ ಪ್ರೀತಿ ತರಿದ್ದ ತಂದೆಯನ್ನೇ ಕೊಂದು ಈ ಹೇಯ ಮಾಡಿರುವಂತಹ ಪುತ್ರ ಇದೀಗ ಕಂಬಿ ಎಣಿಸುತ್ತಿದ್ದಾನೆ. ಈ ಹೇಯ ಕೆಲಸ ಮಾಡಲು ಪಾಪಿ ಪುತ್ರನಿಗೆ ಸಹಕರಿಸಿದ ಆರೋಪದ ಮೇಲೆ ಯುವರಾಜ, ರಾಕೇಶ, ಅರುಣ ಕುಮಾರ್‌ ಇವರನ್ನೂ ಪೊಲೀಸರು ಬಂಧಿಸಿದ್ದಾರೆ.

6 ತಿಂಗಳ ಹಿಂದಿನ ಅಪಘಾತ ಕೊಲೆಯಾಗಿತ್ತು!

ಆರು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣದ ರಹಸ್ಯ ಬಯಲಾಗಿದ್ದೇ ರೋಚಕ. ಜು.8, 2024 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೂರ್ (ಬಿ) ಕ್ರಾಸ್ ಬಳಿ ಟ್ರ್ಯಾಕ್ಟರ್ ಹಾಯ್ದು ಕಾಳಿಂಗರಾವ್ ಎನ್ನುವ 65 ವರ್ಷದ ವಯೋವೃದ್ದ ಸಾವಿಗೀಡಾಗಿದ್ದ. ತಂದೆ ಕಾಳಿಂಗರಾವ್ ಮಗನ‌ ಜೊತೆ ಶಹಾಬಾದ ಕಡೆ ಬೈಕ್ ಮೇಲೆ ತೆರಳುತ್ತಿದ್ದಾಗ ಬೆಣ್ಣೂರ ಕ್ರಾಸ್ ಬಳಿಯ ನಿರ್ಜನ‌ ಪ್ರದೇಶದಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದುಕೊಂಡು ಹೋಗಿತ್ತು. ಆ ಪ್ರಕರಣದಲ್ಲಿ ತಂದೆ ಕಾಳಿಂಗರಾವ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಮಗ ಸತೀಶಗೂ ತೀವ್ರ ಗಾಯಗಳಾಗಿತ್ತು. ಸತೀಶ ನೀಡಿದ ದೂರು‌ ಆಧರಿಸಿ ಮಾಡಬೂಳ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು.

ಪೊಲೀಸರ ಸರಳ ಪ್ರಶ್ನೆಯೇ ಮಗನಿಗೆ ಸಂಕಷ್ಟ ತಂದೊಡ್ಡಿತ್ತು:

ಆರು ತಿಂಗಳ ಹಿಂದೆ ನಡೆದ ಅಪಘಾತದ ಹಿಂದೆ ಅಪ್ಪನ ಇನ್ಶೂರೆನ್ಸ್ ಹಣ ಪಡೆದು ಸಾಲ ತೀರಿಸುವ ಮಗನ ಕೆಟ್ಟ ಹುನ್ನಾರ ಅಡಗಿರೋದು ಪೊಲೀಸರ ಸರಳ ಪ್ರಶ್ನೆಯೊಂದರಿಂದ ಹೊರಬಿತ್ತು. ಬೈಕ್ ಮೇಲೆ ತಂದೆಯನ್ನು ಕರೆದುಕೊಂಡು ಆ ಸಂಜೆ 7-30 ರ ಸುಮಾರಿಗೆ ಎಲ್ಲಿಗೆ ಹೊರಟಿದ್ರಿ? ಎನ್ನುವ ಪೊಲೀಸರ ಸರಳ ಪ್ರಶ್ನೆಯೇ ಇಡೀ ಪ್ರಕರಣ ಬಯಲಿಗೆ ಬರಲು ಕಾರಣವಾಯಿತು. ಸತೀಶ ತನ್ನ ತಂದೆಯ ಹೆಸರಿಗಿದ್ದ 5 ಲಕ್ಷ ರು. ಇನ್ಶೂರೆನ್ಸ್ ಹಣ ಪಡೆದುಕೊಂಡು, ಇನ್ನೊಂದು 25 ಲಕ್ಷ ರು. ಮೊತ್ತದ ಇನ್ಶೂರೆನ್ಸ್ ಕ್ಲೇಮ್‌ಗೆ ಓಡಾಡುತ್ತಿದ್ದ. ಅದೊಂದು ದಿನ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಡಲು ಆತನ ಹೊಟೇಲ್ ಬಳಿ ಹೋದಾಗ ಅಚ್ಚರಿ ಕಾದಿತ್ತು. ಅದಾಗಲೇ ಆತ ತನ್ನ ಹೊಟೆಲ್ ಮಾರಿಕೊಂಡು ತೆಲಂಗಾಣದಲ್ಲಿ ಶಿಫ್ಟ್ ಆಗಿರೋ ಮಾಹಿತಿ ಪೊಲೀಸರಿಗೆ ಗೊತ್ತಾಯ್ತು.

ಆಗ ಅಪಘಾತದ ವಿಚಾರವಾಗಿ ಪೊಲೀಸರಿಗೆ ಇದ್ದಂತಹ ಸಂಶಯ ಮತ್ತಷ್ಟು ಗಟ್ಟಿಯಾಗಿ ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ಇಂಚಿಂಚು ಮಾಹಿತಿ ಬಾಯ್ಬಿಟ್ಟಿದ್ದಾನೆ. ತನ್ನ ತಂದೆಯ ಹೆಸರಲ್ಲಿ ಎರಡು ಇನ್ಶೂರೆನ್ಸ್ ಪಾಲಿಸಿ ಮಾಡಿಸಿ ಕೆಲ ದಿನಗಳ ನಂತರ ಅವರನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿ ಅಪಘಾತ ಮಾಡಿಸಿ ಕೊಲೆ ಮಾಡುತ್ತಾನೆ. ತನಗೂ ಗಾಯಗಳಾಗಿದೆ ಎನ್ನುವುದನ್ನು ತೋರಿಸಲು ಸ್ನೇಹಿತರ ಕಡೆಯಿಂದ ತಲೆಗೆ ಕಲ್ಲಿನಿಂದ ಹೊಡೆಸಿಕೊಂಡು ಸತೀಶ ಗಾಯ ಮಾಡಿಕೊಳ್ಳುತ್ತಾನೆ.

ಅಪಘಾತದ ಸ್ಥಳ ಪರಿಶೀಲಿಸಿದಾಗಲೇ ಪೊಲೀಸರಿಗೆ ಒಂದು ಸಣ್ಣ ಅನುಮಾನ ಶುರುವಾಗಿತ್ತು. ಅದರ ಜಾಡಲ್ಲೇ ತನಿಖೆ ಹೆಜ್ಜೆ ಇಟ್ಟಾಗ 6 ತಿಂಗಳ ನಂತರ ಪಾಪಿ ಪುತ್ರ ಸತೀಶ ಮತ್ತವರ ಸ್ನೇಹಿತರ ನೀಚ ಕೃತ್ಯ ಬಯಲಾಗತ್ತದೆ. ತಂದೆಯನ್ನು ಕೊಂದ ಮಗ ಸತೀಶ, ಪ್ರಕರಣದ ಮಾಸ್ಟರ್ ಮೈಂಡ್ ಸ್ನೇಹಿತ ಅರುಣ್, ಹಾಗೂ ರಾಕೇಶ ಎನ್ನುವವರನ್ನ ಕಲಬುರಗಿಯ ಮಾಡಬೂಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ತಂಗಿ ಹೆಸರನಲ್ಲಿಯೂ ಐಶ್ವರ್ಯ ಭಾರೀ ವಂಚನೆ

ಶಹಾಬಾದ್‌ ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಚೇತನ್‌, ಶೀಲಾವೇದಿ ಹಾಗೂ ಪೊಲೀಸ್‌ ಸಿಬ್ಬಂದಿ ಒಳಗೊಂಡ ತಂಡ ಈ ಪ್ರಕರಣದ ರಹಸ್ಯ ಭಜಿಸುವಲ್ಲಿ ಯಶಸ್ವಿಯಾಗಿದ್ದಿ ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸುಲು ಶ್ಲಾಘಿಸಿದ್ದಾರೆ.

ಕೊಲೆಗೆ ಸಂಚು- ಸುಪಾರಿ

ಪಾಪಿ ಪುತ್ರ ಸತೀಶ ಮತ್ತು ಸ್ನೇಹಿತ ಅರುಣಕುಮಾರ ಸೇರಿಕೊಂಡು ಅಪಘಾತ ಯಾವಾಗ, ಎಲ್ಲಿ, ಹೇಗೆ ಮಾಡಬೇಕೆಂದು ಸಂಚು ರೂಪಿಸಿರುತ್ತಾರೆ. ರು.5 ಲಕ್ಷ ಸುಪಾರಿಗೂ ಸಿದ್ದರಾಗುತ್ತಾರೆ. ಕೃತ್ಯವೆಸಗಲು ಅರುಣಕುಮಾರ ತನ್ನ ಸಹಚರರಾದ ತರಿ ತಾಂಡಾದ ರಾಕೇಶ ಮತ್ತು ಯುವರಾಜ ಇವರನ್ನು ಸಂಪರ್ಕ ಮಾಡಿ ಅವರಿಬ್ಬರಿಗೂ ತಲಾ 50 ಸಾವಿರದಂತೆ 1 ಲಕ್ಷ ರು. ಸುಪಾರಿ ನೀಡಿರೋದು ಕೂಡಾ ತನಿಖೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

click me!