ಇದೇ ರೀತಿ ಹದಿನೈದಕ್ಕೂ ಹೆಚ್ಚು ಕೇಸ್‌ಗಳು ಈತನ ಮೇಲಿವೆ ಎಂದು ಪೊಲೀಸರು ಕಂಡುಹಿಡಿದಿದ್ದಾರೆ. ಕಳ್ಳನನ್ನು ಅಂಗಡಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲಾಯಿತು.
ತಿರುವನಂತಪುರ (ಜ.7): ಬ್ಯಾಂಕ್ ಸ್ಲಿಪ್‌ನಲ್ಲಿರುವ ಸೀಲ್ ತೋರಿಸಿ ಮೊಬೈಲ್ ಅಂಗಡಿಯ ಉದ್ಯೋಗಿಗಳನ್ನು ವಂಚಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಖಾತೆಗೆ ಹಣ ವರ್ಗಾವಣೆ ಮಾಡಿದ್ದೇನೆ ಎಂದು ಹೇಳಿ 1.80 ಲಕ್ಷ ರೂಪಾಯಿ ಮೌಲ್ಯದ ಫೋನ್‌ಗಳೊಂದಿಗೆ ಪರಾರಿಯಾಗಿದ್ದ ಯುವಕನನ್ನು ಬಂಧಿಸಲಾಗಿದೆ. ಇದು ಆತನ ಮೊದಲ ಅಪರಾಧವಲ್ಲ ಎನ್ನುವುದು ಕೂಡ ತಿಳಿದುಬಂದಿದೆ. ಕೇರಳ ರಾಜ್ಯದ ಹಲವೆಡೆ ಇದೇ ರೀತಿ ವಂಚನೆ ಮಾಡಿದ ಹದಿನೈದಕ್ಕೂ ಹೆಚ್ಚು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಪ್ಪುರಂ ಮೂಲದ ಇಜಾಸ್ ಅಹ್ಮದ್ ಬಂಧಿತ ಆರೋಪಿ. ನೆಯ್ಯಟ್ಟಿಂಕರದಲ್ಲಿ ಹೊಸದಾಗಿ ಆರಂಭವಾಗಲಿರುವ ಖಾಸಗಿ ಬಟ್ಟೆ ಕಂಪನಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಇಜಾಸ್, ನೆಯ್ಯಾಟಿಂಕರದ ಅಕ್ಷಯ ಕಾಂಪ್ಲೆಕ್ಸ್‌ನಲ್ಲಿರುವ ಆರ್‌ಎಸ್‌ಬಿ ಮೊಬೈಲ್ ಅಂಗಡಿಗೆ ಮೊದಲು ಭೇಟಿ ನೀಡಿದ್ದ. ರಿಯಲ್‌ಮಿ ಕಂಪನಿಯ ಒಂದೇ ರೀತಿಯ ಆರು ಫೋನ್‌ಗಳನ್ನು ಬೇಕು ಎಂದು ಅವರಲ್ಲಿ ಕೇಳಿದ್ದ. ಅಂಗಡಿಯ ಉದ್ಯೋಗಿಗಳು ಫೋನ್‌ಗಳನ್ನು ನೀಡಿ ಅದಕ್ಕೆ ಬಿಲ್ ಮಾಡಿಕೊಟ್ಟರು. ಎಚ್‌ಡಿಎಫ್‌ಸಿ ಬ್ಯಾಂಕ್ ಮೂಲಕ ಹಣವನ್ನು ಖಾತೆಗೆ ವರ್ಗಾಯಿಸುವುದಾಗಿ ಹೇಳಿ ಬಿಲ್‌ನೊಂದಿಗೆ ಆತ ಹೊರನಡೆದಿದ್ದ.
ರಸ್ತೆ ಅಪಘಾತದಲ್ಲಿ ಗಾಯಗೊಂಡರೆ ಇನ್ನು ಕ್ಯಾಶ್‌ಲೆಸ್ ಟ್ರೀಟ್‌ಮೆಂಟ್, ನಿತಿನ್ ಗಡ್ಕರಿ ಘೋಷಣೆ!
ಸ್ವಲ್ಪ ಹೊತ್ತಿನ ನಂತರ, ಖಾತೆಗೆ ಹಣ ವರ್ಗಾವಣೆ ಮಾಡಿದ್ದಾಗಿ ತೋರಿಸುವ ಬ್ಯಾಂಕ್ ಸ್ಲಿಪ್‌ನೊಂದಿಗೆ ಬಂದು ಆರು ಫೋನ್‌ಗಳನ್ನು ತೆಗೆದುಕೊಂಡು ಹೋಗಿದ್ದ. ಅರ್ಧ ಗಂಟೆ ಕಳೆದರೂ ಖಾತೆಗೆ ಹಣ ಬಾರದಿದ್ದಾಗ ಅಂಗಡಿಯ ಉದ್ಯೋಗಿಗಳು ಬ್ಯಾಂಕ್‌ಗೆ ಹೋಗಿ ವಿಚಾರಿಸಿದರು. ಬ್ಯಾಂಕ್‌ಗೆ ಬಂದ ಇಜಾಸ್ ಅಲ್ಲಿ ಗಡಿಬಿಡಿಯಲ್ಲಿರುವಂತೆ ನಾಟಕ ಮಾಡಿದ್ದ ಖಾತೆಗೆ ಹಣ ವರ್ಗಾವಣೆ ಮಾಡಲು ಫಾರ್ಮ್ ತುಂಬಿ ಕೊಟ್ಟು, ನಿಧಾನವಾಗಿ ಜನಸಂದಣಿ ಕಡಿಮೆಯಾದಾಗ ವರ್ಗಾವಣೆ ಮಾಡಿದರೆ ಸಾಕು ಎಂದು ಉದ್ಯೋಗಿಗಳಿಗೆ ಹೇಳಿ ಫಾರ್ಮ್‌ನಲ್ಲಿ ಸೀಲ್ ಹಾಕಿಸಿಕೊಂಡು ಹೋಗಿದ್ದ. ಬ್ಯಾಂಕ್ ಸೀಲ್ ಇರುವ ಸ್ಲಿಪ್ ತೋರಿಸಿಯೇ ಫೋನ್ ತೆಗೆದುಕೊಂಡು ಹೋಗಿದ್ದ. ಮೊಬೈಲ್ ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆತನನ್ನು ಪತ್ತೆ ಹಚ್ಚಿದ್ದಾರೆ. ಸೋಮವಾರ ಇಜಾಸ್‌ನನ್ನು ಅಂಗಡಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲಾಯಿತು.
ಭಿಕ್ಷುಕನನ್ನು ಪ್ರೀತಿಸಿ ಓಡಿಹೋದ 6 ಮಕ್ಕಳ ತಾಯಿ; ಪೊಲೀಸರ ಮುಂದೆ ಗೋಳಾಡುತ್ತಿರುವ ಗಂಡ!