ಚಳ್ಳಕೆರೆ ಪೊಲೀಸರು ನಾಯಕನಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಸೂರಯ್ಯನ ಸಹೋದರ ಜಯಣ್ಣ ಈ ಬಗ್ಗೆ ನಾಯಕನಹಟ್ಟಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ಸಹೋದರ ಸೂರಯ್ಯನ ಸಾವಿಗೆ ಮೋಹನ್ ಕುಮಾರನೇ ಕಾರಣವಾಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾನೆ.
ಚಳ್ಳಕೆರೆ(ನ.07): ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ತಾಡಪಾಲ್ ಮುಚ್ಚುವ ವಿಚಾರದಲ್ಲಿ ತಂದೆ ಬೈದನೆಂದು ಕುಪಿತಗೊಂಡ ಮಗ ಮಲಗಿದ್ದ ತಂದೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಾಯಕನಹಟ್ಟಿ ಠಾಣಾ ವ್ಯಾಪ್ತಿಯ ಭತ್ತಯ್ಯನಹಟ್ಟಿಯ ವರವು ಕಾವಲಿನಲ್ಲಿ ನಡೆದಿದೆ.
ಗ್ರಾಮದ ಸೂರಯ್ಯ(೫೦) ಎಂಬ ವ್ಯಕ್ತಿ ತನ್ನ ಮಗ ಮೋಹನ್‌ಕುಮಾರ್ (೨೮) ಎಂಬಾತನಿಂದ ಭೀಕರವಾಗಿ ಕೊಲೆಯಾಗಿದ್ದಾನೆ. ಮೃತ ಸೂರಯ್ಯ ತನ್ನ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಮಳೆ ಕಾರಣ ಕಿತ್ತು ಈರುಳ್ಳಿ ಬೆಳೆಗೆ ತಾಡಪಾಲ್ ಹಾಕುವಂತೆ ಹೆಂಡತಿ ಸುವರ್ಣಮ್ಮ ಹಾಗೂ ಪುತ್ರ ಮೋಹನ್‌ಕುಮಾರ್‌ಗೆ ತಿಳಿಸಿದ್ದು, ತಾಡಪಾಲ್ ಮುಚ್ಚದ ಕಾರಣ ಕೋಪಗೊಂಡ ಸೂರಯ್ಯ, ಪತ್ನಿ ಮತ್ತು ಪುತ್ರನನ್ನು ಬೈದಿದ್ದಲ್ಲದೆ ಕೋಲಿನಿಂದ ಹೊಡೆದಿರುತ್ತಾನೆ. ನ.೫ರ ಸಂಜೆ ಈ ಪ್ರಕರಣ ನಡೆದಿದ್ದು, ನ.೬ರ ಸೋಮವಾರ ಬೆಳಗ್ಗೆ ವರವು ಕಾವಲಿನ ಜಮೀನಿನ ಗುಡಿಸಲು ಮುಂದೆ ಸೂರಯ್ಯ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ ಮೋಹನ್ ಕುಮಾರ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ನೇರವಾಗಿ ಚಳ್ಳಕೆರೆ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
undefined
ಅಪ್ಪ ಮಗನನ್ನ ಕೊಂದರೆ.. ಇಲ್ಲಿ ಮಗ ತಾಯಿಯನ್ನ ಮುಗಿಸಿದ..!
ಕೂಡಲೇ ಚಳ್ಳಕೆರೆ ಪೊಲೀಸರು ನಾಯಕನಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಸೂರಯ್ಯನ ಸಹೋದರ ಜಯಣ್ಣ ಈ ಬಗ್ಗೆ ನಾಯಕನಹಟ್ಟಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ಸಹೋದರ ಸೂರಯ್ಯನ ಸಾವಿಗೆ ಮೋಹನ್ ಕುಮಾರನೇ ಕಾರಣವಾಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾನೆ. ನಾಯಕನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿ:
ತಂದೆಯನ್ನೇ ಭೀಕರವಾಗಿ ಕೊಲೆಮಾಡಿದ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್, ಮೀನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು. ಡಿವೈಎಸ್ಪಿ ರಾಜಣ್ಣ, ತಳಕು ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದರು.