ನ್ಯಾಯ ಪಂಚಾಯತಿ ಮಾಡಿದ್ರೂ ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕಿದ್ದರಂತೆ. ಇದರಿಂದ ಬೇಸತ್ತ ಮಗ ಸಿದ್ದಪ್ಪ ತಂದೆಯನ್ನೇ ಕೊಲೆ ಮಾಡಿದ್ದಾನೆ. ನಾಪತ್ತೆಯಾಗಿರುವ ಮಗ ಸಿದ್ದಪ್ಪನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ತುಮಕೂರು(ಆ.14): ಮಚ್ಚಿನಿಂದ ಹೊಡೆದು ಮಗನೇ ತಂದೆಯನ್ನ ಬರ್ಬರವಾಗಿ ಹತ್ಯೆಗೈದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ವೆಂಕಟಪ್ಪ (75) ಮೃತ ದುರ್ದೈವಿಯಾಗಿದ್ದು, ಸಿದ್ದಪ್ಪ (45) ತಂದೆಯನ್ನ ಕೊಲೆಗೈದ ಪಾಪಿ ಮಗ.
ವೆಂಕಟ್ಟಪ್ಪ ಮೂರೂವರೆ ಎಕರೆ ಆಸ್ತಿ ಹೊಂದಿದ್ದರು. ಇದರಲ್ಲಿ ಒಂದು ಎಕರೆ ಮಾರಾಟ ಮಾಡಿದ್ದ. ಜಮೀನು ಮಾರಾಟ ಮಾಡಿದ್ದ 25 ಲಕ್ಷ ಹಣವನ್ನ ಮಗಳಿಗೆ ಕೊಟ್ಟಿದ್ದ ಹಾಗೂ ಜಮೀನನ್ನು ಸಹ ಮಗಳ ಹೆಸರಿಗೆ ಬರೆದುಕೊಟ್ಟಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ತಂದೆ ಮಗನ ಮಧ್ಯೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು.
ತುಮಕೂರು: ಚಿನ್ನದ ಸರಕ್ಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ವೃದ್ಧೆ ಕೊಂದ ದುರುಳರು..!
ನ್ಯಾಯ ಪಂಚಾಯತಿ ಮಾಡಿದ್ರೂ ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕಿದ್ದರಂತೆ. ಇದರಿಂದ ಬೇಸತ್ತ ಮಗ ಸಿದ್ದಪ್ಪ ತಂದೆಯನ್ನೇ ಕೊಲೆ ಮಾಡಿದ್ದಾನೆ. ತಂದೆಯ ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವೆಂಕಟಪ್ಪ ಸಾವನ್ನಪ್ಪಿದ್ದಾರೆ. ತಂದೆಯನ್ನ ಕೊಲೆಗೈದು ಮಗ ಸಿದ್ದಪ್ಪ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ ಹಾಗೂ ಕೋಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಗ ಸಿದ್ದಪ್ಪನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.