ಗಲಾಟೆ ಪ್ರಕರಣದಲ್ಲಿ ಮಗ ಜೈಲು ಪಾಲಾಗಿದ್ದರಿಂದ ಮನನೊಂದು ತಾಯಿಯೊಬ್ಬರು ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿ (ಜು.31): ಗಲಾಟೆ ಪ್ರಕರಣದಲ್ಲಿ ಮಗ ಜೈಲು ಪಾಲಾಗಿದ್ದರಿಂದ ಮನನೊಂದು ತಾಯಿಯೊಬ್ಬರು ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಉಣಕಲ್ ನಿವಾಸಿ ಭಾರತಿ ಪಾಟೀಲ್ (ದ್ಯಾಮವ್ವ) ಕೆರೆಗೆ ಬಿದ್ದು ಸಾವಿಗೆ ಶರಣಾದ ತಾಯಿ. ಉದಯನಗರದಲ್ಲಿ ಇವರ ಮಗ ವಿನಾಯಕಗೌಡ ಪಾಟೀಲ ಹಾಗೂ ಮಾರುತಿ ಮಾನೆ ಎಂಬುವರ ಮಗ ಸೇರಿದಂತೆ ಇತರರು ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದರು.
ಇದೇ ಘಟನೆ ಸಂಬಂಧ ಪೊಲೀಸರು ವಿನಾಯಕಗೌಡನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ತನ್ನ ಮಗ ಜೈಲು ಸೇರಿದ್ದರಿಂದ ತಾಯಿ ಭಾರತಿ ಪಾಟೀಲ್ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವಿದ್ಯಾನಗರ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮನೆ ಬಿಟ್ಟು ಬಂದವಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಕಾನ್‌ಸ್ಟೇಬಲ್: ರಕ್ಷಕರೇ ಹೀಗೆ ಮಾಡಿದ್ರೆ ಹೇಗೆ?
ಇಬ್ಬರು ಮಗಳೊಂದಿಗೆ ತಾಯಿ ಆತ್ಮಹತ್ಯೆ: ಬರೀ ಹೆಣ್ಣು ಮಕ್ಕಳೇ ಹುಟ್ಟಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ತೋಟದ ವಸ್ತಿಯಲ್ಲಿ ಮಂಗಳವಾರ ನಡೆದಿದೆ. ಅಕ್ಕಮ್ಮ ಶ್ರೀಶೈಲ ಗುಬ್ಬೇವಾಡ(30), ಮಕ್ಕಳಾದ ಅವ್ವಮ್ಮ (3) ಸಾವಿತ್ರಿ (1) ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಕಳೆದ ಆರು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳೆಂಬ ಮಾಹಿತಿ ಕುರಿ ಕಾಯಲು ಪತಿ ಶ್ರೀಶೈಲ ಹೋಗಿದ್ದ ವೇಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.
ಒಟ್ಟು ನಾಲ್ಕು ಹೆಣ್ಣು ಮಕ್ಕಳ ಇಬ್ಬರು ಶಾಲೆಗೆ ಹೋಗಿದ್ದು, ತಾಯಿಯಾಗಿದ್ದ ಅಕಮ್ಮಾ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರ ಭೇಟಿ, ಪರಿಶೀಲನೆ ಶವಗಳನ್ನು ಬಾವಿಯಿಂದ ಮೇಲೆತ್ತಿದ್ದ ಗ್ರಾಮಸ್ಥರು. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವಗಳನ್ನು ಬಾವಿಯಿಂದ ಮೇಲೆತ್ತಿದ್ದ ಗ್ರಾಮಸ್ಥರು, ಮರಣೋತ್ತರ ಪರೀಕ್ಷೆಗೆ ಶವಗಳನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಇಂಡಿ ಉಪವಿಭಾಗ ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಂದಗಿ ಸಿಪಿಐ ರವಿ ಉಕ್ಕುಂದ ಹಾಗೂ ದೇವರಹಿಪ್ಪರಗಿ ಪಿಎಸೈ ಸುರೇಶ ಗಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾವೇರಿಯಲ್ಲಿ ವಿಷ ಸೇವಿಸಿದ್ದ ರೈತ ಸಾವು: ಪರಿಸ್ಥಿತಿ ಉದ್ವಿಗ್ನ
ಬೆಂಕಿ ಹಚ್ಚಿಕೊಂಡು ಎಂಟು ತಿಂಗಳ ಮಗುವಿನ ಜತೆ ತಾಯಿ ಆತ್ಮಹತ್ಯೆ: ಮಾನಸಿಕ ಖಿನ್ನತೆಗೆ ಒಳಗಾಗಿ ತಾಯಿಯೊಬ್ಬಳು ತನ್ನ 8 ತಿಂಗಳ ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ತಾಲೂಕಿನ ದಾಸನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹದೇವಸ್ವಾಮಿಯವರ ಪತ್ನಿ ಸಿಂಧು (24) ಮಗು ಮುದ್ದುಮಾದಯ್ಯನೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. 9 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ತೊರೆವಳ್ಳಿ ಗ್ರಾಮದ ಸಿಂಧುವನ್ನು ದಾಸನೂರು ಗ್ರಾಮದ ಮಹದೇವಸ್ವಾಮಿ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಸಿಂಧುವಿಗೆ 4 ಬಾರಿ ಗರ್ಭಪಾತವಾಗಿದ್ದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.