ವಿಜಯಪುರ: ಜಗಳ ಬಿಡಿಸಲು ಬಂದ ಅತ್ತೆ ಕೊಂದು ಚೀಲದಲ್ಲಿ ಶವ ಕಟ್ಟಿ ನಾಲೆಗೆಸೆದ ಅಳಿಯ!

Published : Jan 30, 2025, 12:37 PM IST
ವಿಜಯಪುರ: ಜಗಳ ಬಿಡಿಸಲು ಬಂದ ಅತ್ತೆ ಕೊಂದು ಚೀಲದಲ್ಲಿ ಶವ ಕಟ್ಟಿ ನಾಲೆಗೆಸೆದ ಅಳಿಯ!

ಸಾರಾಂಶ

ಗೌರಾಬಾಯಿ ಪುತ್ರಿ ದೇವಕಿಯನ್ನು ಭೀಮಪ್ಪ ಮದುವೆಯಾಗಿದ್ದ. ನಿರಂತರ ಮದ್ಯ ಸೇವನೆ ಸಂಬಂಧ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅತ್ತೆ ಗೌರಾಬಾಯಿ ಇಬ್ಬರಿಗೂ ತಿಳಿವಳಿಕೆ ಹೇಳಲು ಮಂಗಳವಾರ ಬಂದಿದ್ದರು. ಆಗ ಕುಡಿದ ಮತ್ತಿನಲ್ಲಿ ಸಿಟ್ಟಿಗೆದ್ದು ದೊಣ್ಣೆಯಿಂದ ಆಕೆಯನ್ನು ಅಳಿಯ ಭೀಮಪ್ಪ ಹತ್ಯೆ ಮಾಡಿದ್ದಾನೆ. ಬಳಿಕ, ಶವವನ್ನು ಚೀಲದಲ್ಲಿ ಕಟ್ಟಿ ಗ್ರಾಮದ ಬಳಿಯಿರುವ ಕೆನಾಲ್‌ಗೆ ಬಿಸಾಕಿದ್ದಾನೆ. 

ದೇವರಹಿಪ್ಪರಗಿ(ಜ.30):  ಗಂಡ ಹೆಂಡತಿಯ ಜಗಳ ಬಿಡಿಸಲು ಬಂದ ಅತ್ತೆಯನ್ನೇ ಅಳಿಯನೊಬ್ಬ ಭೀಕರವಾಗಿ ಕೊಲೆ ಮಾಡಿ ಬಳಿಕ ಶವವನ್ನು ಕೆನಾಲ್‌ಗೆ ಎಸೆದಿರುವ ಘಟನೆ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ. ಶಿರಶ್ಯಾಡ ಗ್ರಾಮದ ಗೌರಾಬಾಯಿ ಈರಣ್ಣ ನರಳಿ(65) ಕೊಲೆಯಾಗಿರುವ ಮಹಿಳೆ. ಭೀಮಪ್ಪ ಗುಗ್ಗರಿ (ಪಡಸಲಗಿ) ಅತ್ತೆ ಹತ್ಯೆ ಮಾಡಿರುವ ಆರೋಪಿ. 

ಗೌರಾಬಾಯಿ ಪುತ್ರಿ ದೇವಕಿಯನ್ನು ಭೀಮಪ್ಪ ಮದುವೆಯಾಗಿದ್ದ. ನಿರಂತರ ಮದ್ಯ ಸೇವನೆ ಸಂಬಂಧ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅತ್ತೆ ಗೌರಾಬಾಯಿ ಇಬ್ಬರಿಗೂ ತಿಳಿವಳಿಕೆ ಹೇಳಲು ಮಂಗಳವಾರ ಬಂದಿದ್ದರು. ಆಗ ಕುಡಿದ ಮತ್ತಿನಲ್ಲಿ ಸಿಟ್ಟಿಗೆದ್ದು ದೊಣ್ಣೆಯಿಂದ ಆಕೆಯನ್ನು ಅಳಿಯ ಭೀಮಪ್ಪ ಹತ್ಯೆ ಮಾಡಿದ್ದಾನೆ. ಬಳಿಕ, ಶವವನ್ನು ಚೀಲದಲ್ಲಿ ಕಟ್ಟಿ ಗ್ರಾಮದ ಬಳಿಯಿರುವ ಕೆನಾಲ್‌ಗೆ ಬಿಸಾಕಿದ್ದಾನೆ. 

ವಿಜಯಪುರ: ಪುತ್ರಿಯ ಫೋಟೋ ಸ್ಟೇಟಸ್ಸಲ್ಲಿ ಹಾಕಿದ್ದ ವ್ಯಕ್ತಿಯ ಕೊಂದ ತಂದೆ!

ಅಲ್ಲದೇ, ವಿಷಯವನ್ನು ಯಾರಿಗೂ ಹೇಳದಂತೆ ಆಕೆಯ ಪತ್ನಿಗೆ ಜೀವ ಬೆದರಿಕೆ ಹಾಕಿದ್ದ. ಆದರೂ, ಹೆಂಡತಿ ದೇವಕಿ ದೇವರ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ನಾಲೆಯಲ್ಲಿ ಶವಕ್ಕಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ನಡೆಸಿದ್ದರು. 

ಬುಧವಾರ ಮಧ್ಯಾಹ್ನ ಶವ ಪತ್ತೆಯಾಗಿದ್ದು, ಹೊರತೆಗೆಯಲಾಗಿದೆ. ಬಳಿಕ ಗ್ರಾಮಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ ಮರಿಹಾಳ, ಡಿವೈಎಸ್ಪಿ ಜಿ.ಎಚ್.ತಳಕಟ್ಟಿ, ತಹಸೀಲ್ದಾರ್‌ಪ್ರಕಾಶ ಸಿಂದಗಿ, ಪಿಎಸ್‌ಐ ಬಸವರಾಜ ತಿಪ್ಪರಡ್ಡಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ