ಆರ್‌ಟಿಜಿಎಸ್ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ 33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ನಡೆದಿದೆ.
ಅಂಕೋಲಾ(ಜ.30): ಆರ್‌ಟಿಜಿಎಸ್ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ 33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಜ.24, 27ರಂದು ನಡೆದಿದೆ ಎಂದು ಅಂದಾಜಿಸಲಾಗಿದೆ.
ಕಾರವಾರದಲ್ಲಿ ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡರಿಂದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಆರ್‌ಟಿಜಿಎಸ್ ಮಾಡಿದ ₹5 ಲಕ್ಷ, ವೆಂಕ ಟೇಶ್ವರ ಗ್ಯಾಸ್ ಸೆಂಟರ್‌ನಿಂದ ವೆಂಕಟೇಶ್ವರ ಗ್ರಾಸ್ ಸೆಂಟರ್‌ಗೆ ಆರ್‌ಟಿಜಿಎಸ್ ₹5,46,000 ಲಕ್ಷ, ಇವರದೇ ಮತ್ತೊಂದು ಖಾತೆಗೆ ₹6,60,000 ಲಕ್ಷ, ಸವಿತಾ ವೆಂಕಟರಮಣ ನಾಯ್ಕರಿಂದ ಟಾಫೆ ಆಕೆಸ್ ಲಿ.ಗೆ ಆರ್‌ಟಿಜಿಎಸ್ ಮಾಡಿದ ₹16, 36,895 ಲಕ್ಷ ಸೇರಿ ಒಟ್ಟು ₹33,42,895 ಲಕ್ಷ ಹಣವು ಖಾತೆಗೆ ಜಮೆ ಆಗದೇ ಹ್ಯಾಕ್ ಆಗಿದೆ ಎಂದು ದೂರು ನೀಡಲಾಗಿದೆ.
ಮುಂಬೈಯಲ್ಲಿ ದೋಸ್ತಿ, ಮಂಗ್ಳೂರಲ್ಲಿ ದರೋಡೆ: ಕೋಟೆಕಾರ್ ಬ್ಯಾಂಕ್ ರಾಬರಿಯ ರೋಚಕ ಕಥೆ!
ಎಟಿಎಂ ಅನ್ನೇ ಹೊತ್ತೊಯ್ದರು!
ಹಾಸನ:ದುಷ್ಕರ್ಮಿಗಳು ಇಂಡಿಯಾ ಒನ್ ಎಟಿಎಂ ಯಂತ್ರವನ್ನೇ ಕಳವು ಮಾಡಿರುವ ಘಟನೆ ಮಂಗಳವಾರ ಹಾಸನದ ಪಂಚಮುಖಿ ಬೃಹತ್ ಆಂಜನೇಯ ವಿಗ್ರಹದ ಸಮೀಪ ದಲ್ಲೇ ಇರುವ ಇಂಡಿಯಾ ಒನ್ ಎಟಿಎಂ ಯಂತ್ರ ಕಳ್ಳರು ಕದ್ದೊ ಯ್ದಿದ್ದಾರೆ. ಮೊದಲೇ ಸಂಚು ಮಾಡಿ ಎಟಿಎಂ ಪಕ್ಕದಲ್ಲಿರುವ ಮನೆಗಳ ಚಿಲಕ ಹಾಕಿ ಎಟಿಎಂಗೆ ನುಗ್ಗಿದ್ದಾರೆ. ಸೈರನ್ ಬಾರದಂತೆ ನಿಗಾ ವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಸಮೇತ ಬಾಕ್ಸನ್ನೇ ಕದ್ದೊಯ್ದಿದ್ದಾರೆ. ಬೆಳಗಿನ ವೇಳೆ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ.