Karwar: ಮೊಮ್ಮಗನನ್ನು ನೋಡಲು ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ

By Govindaraj S  |  First Published May 19, 2022, 3:30 AM IST

ಆಕೆ ತನ್ನ ಮಗಳು ಜನ್ಮ ನೀಡಿದ್ದ ಪುಟ್ಟ ಕಂದಮ್ಮನನ್ನು ನೋಡಲೆಂದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಮಗಳು ಪ್ರೀತಿಸಿ ಅಳಿಯನ ಜತೆ ಸಂಸಾರ ಪ್ರಾರಂಭಿಸಿದ್ದರಿಂದ ಆಕೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾಗು ಅಂತಾ ಅತ್ತೆ ಕೇಳಿಕೊಂಡಿದ್ದಳು.


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಮೇ.19): ಆಕೆ ತನ್ನ ಮಗಳು ಜನ್ಮ ನೀಡಿದ್ದ ಪುಟ್ಟ ಕಂದಮ್ಮನನ್ನು ನೋಡಲೆಂದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಮಗಳು ಪ್ರೀತಿಸಿ ಅಳಿಯನ ಜತೆ ಸಂಸಾರ ಪ್ರಾರಂಭಿಸಿದ್ದರಿಂದ ಆಕೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾಗು ಅಂತಾ ಅತ್ತೆ ಕೇಳಿಕೊಂಡಿದ್ದಳು. ಅಷ್ಟರಲ್ಲೇ ಅಳಿಯ ಹಾಗೂ ಅತ್ತೆಯ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮೊದಲೇ ನಶೆಯಲ್ಲಿದ್ದ ಅಳಿಯ ತನ್ನಲ್ಲಿದ್ದ ಚಾಕು ತೆಗೆದು ಅತ್ತೆಯ ಹೊಟ್ಟೆಗೆ ಇರಿದೇ ಬಿಟ್ಟಿದ್ದ. ಕ್ಷಣಮಾತ್ರದಲ್ಲಿ ನಡೆದಿದ್ದ ಈ ದುರ್ಘಟನೆಯಿಂದ ಮುಂದೇನಾಯ್ತು.? ಈ ಸ್ಟೋರಿ ನೋಡಿ. 

Tap to resize

Latest Videos

ಇಲ್ಲೊಬ್ಬ ಭೂಪ ಯುವತಿಯನ್ನು ಪ್ರೀತಿಸಿ ಜತೆಯಲ್ಲಿರಿಸಿಕೊಂಡು ಆಕೆಯನ್ನು ತನ್ನ ಮಗುವಿನ ತಾಯಿಯನ್ನಾಗಿ ಮಾಡಿದ್ದಲ್ಲದೇ, ಮಗುವನ್ನು ನೋಡಲು ಬಂದ ಅತ್ತೆಗೆ ಚೂರಿ ಇರಿದಿದ್ದಾನೆ. ಹೌದು! ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದರಮಜಾನ್ ರಫೀಕ್ ಶೇಕ್ (23) ಎಂಬಾತನೇ ಕೊಲೆ ಯತ್ನ ನಡೆಸಿರುವ ಆರೋಪಿ. ಮೊದಲೇ ಕುಡಿತ ಹಾಗೂ ಗಾಂಜಾದ ಚಟ ಹೊಂದಿದ್ದ ಆರೋಪಿ ರಮಜಾನ್ ರಫೀಕ್ ಶೇಕ್, ದೂರದ ಸಂಬಂಧಿಯಾದ ಕಾರವಾರ ಕದ್ರಾ ನಿವಾಸಿ ಫಾತಿಮಾ ಸಲಿಂ (37) ಎಂಬವರ ಮಗಳು ರಿಯಾನಾ ಸಲೀಂ (18) ಎಂಬಾಕೆಯನ್ನು ಪ್ರೀತಿಸಿ ಆಕೆಯನ್ನು ತನ್ನ ಮನೆಯಾದ ಹಳಿಯಾಳಕ್ಕೆ ಕರೆದುಕೊಂಡು ಹೋಗಿ ಕಳೆದ ನಾಲ್ಕು ವರ್ಷಗಳಿಂದ ಸಂಸಾರ ಪ್ರಾರಂಭಿಸಿದ್ದ.  ಆದರೆ, ಶಾಸ್ತ್ರೋಕ್ತವಾಗಿ ಮಾತ್ರ ಮದುವೆಯಾಗಿರಲಿಲ್ಲ. 

Uttara Kannada: ಮಾರುಕಟ್ಟೆಗೆ ಲಗ್ಗೆ ಇಟ್ಟ ಕರಿ ಈಶಾಡ್ ಮಾವಿನ‌ ಹಣ್ಣು: ಖರೀದಿಗೆ ಮುಗಿಬಿದ್ದ ಜನತೆ

ಇದೇ ವಿಚಾರವಾಗಿ ಯುವತಿ ರಿಯಾನಾಳ ತಾಯಿ ಕುಟುಂಬ ಹಾಗೂ ಆಕೆಯ ಗಂಡನಿಗೆ ಕೊಂಚ ಮನಸ್ತಾಪವೂ ಇತ್ತು. ಈ ಬಾರಿ ಆರೋಪಿಯ ಪತ್ನಿ ಹೆರಿಗೆಗಾಗಿ ಕಾರವಾರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ಕೂಡಾ ನೀಡಿದ್ದಳು. ಮಗಳು ಮಗುವಿಗೆ ಜನ್ಮ ನೀಡಿದ್ದಾಳೆಂಬ ಸುದ್ದಿ ಕೇಳಿ ಆಸ್ಪತ್ರೆಯ SICU ವಿಭಾಗಕ್ಕೆ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜತೆ ಬಂದ ತಾಯಿ ಫಾತಿಮಾ ಸಲೀಂ ಮಗಳ ಸುಖ ದುಃಖವನ್ನು ಕೇಳಿಕೊಂಡ ಬಳಿಕ ಅಳಿಯನ‌ ಜತೆ ಮಾತಿಗಿಳಿದಿದ್ದಳು. ಈ ವೇಳೆ ಅಳಿಯ ಮಹಾಶಯ ನನ್ನ ಮಗುವನ್ನು ನೋಡಲು ನೀವ್ಯಾಕೆ ಬಂದಿದ್ದೀರಿ? ಅಂತಾ ಭುಸುಗುಟ್ಟಲು ಪ್ರಾರಂಭಿಸಿದ್ದ. 

ಆದರೆ, ಈ ನಡುವೆ ಮತ್ತೆ ಅಳಿಯ ಕುಡಿದುಕೊಂಡು ಬಂದಿದ್ದು, ಕುಟುಂಬದ ದ್ವೇಷದ ಬಗ್ಗೆ ಅಳಿಯ ಹಾಗೂ ಅತ್ತೆಯ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕುಪಿತಗೊಂಡ ಅಳಿಯ ಹಲ್ಲೆ ನಡೆಸಿ ತನ್ನ ಜತೆಯಲ್ಲಿ ಇರಿಸಿಕೊಂಡಿದ್ದ ಸಣ್ಣ ಚೂರಿಯಿಂದ ಅತ್ತೆಯ ಹೊಟ್ಟೆಗೆ ಇರಿದೇ ಬಿಟ್ಟಿದ್ದ. ಅಂದಹಾಗೆ, ಅತ್ತೆ ಫಾತಿಮಾ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜತೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅಳಿಯನ ಜತೆ ಮಾತನಾಡಿ, ತನ್ನ ಮಗಳನ್ನು ಇರಿಸಿಕೊಳ್ಳುವ ಬದಲು ಶಾಸ್ತ್ತೋಕ್ತವಾಗಿ ಮದುವೆಯಾಗು. ಇಲ್ಲಾಂದ್ರೆ ಸಮಾಜ ಏನನ್ನುತ್ತೆ? ಮಗಳನ್ನು ಮದುವೆಯಾಗಿಲ್ಲಂದ್ರೆ ವಾಪಾಸ್ ಕಳುಹಿಸು ಎಂದು ತಿಳಿಸಿದ್ರು. 

ಈ ವೇಳೆ ಮಾತಿಗೆ ಮಾತು ಬೆಳೆದು ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು. ಜನರ ಮಾತಿಗೆ ತಕ್ಕ ಮಟ್ಟಿಗೆ ಸುಮ್ಮನಾದ ರಮಜಾನ್ ರಫೀಕ್ ಶೇಕ್, ಹೊರಗೆ ಹೋದವರನೇ ಕುಡಿದು ಬಂದು ಮತ್ತೆ ಖ್ಯಾತೆ ತೆಗೆದಿದ್ದಾನೆ. ಅಲ್ಲದೇ, ಅತ್ತೆಗೆ ಕೈಯಿಂದ ಹೊಡೆದು ತನ್ನ ಬಾಣಂತಿ ಪತ್ನಿ, ಸಣ್ಣ ಕಂದಮ್ಮ ಹಾಗೂ ಅತ್ತೆಯ ಮಕ್ಕಳ ಮುಂದೆಯೇ ಅತ್ತೆಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದ. ಚಾಕುವಿನೇಟು ತಿಂದ ಮಹಿಳೆ ಅಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. 

ಚಾರಣ ಪ್ರಿಯರಿಗೆ ಯೋಗ್ಯ ಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ

ಇನ್ನು ಚೂರಿ ಇರಿತಕ್ಕೆ ಒಳಗಾದ ಮಹಿಳೆಯ ಮಕ್ಕಳು, ಸಂಬಂಧಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಆರೋಪಿ ರಮಜಾನ್ ರಫೀಕ್ ಶೇಖ್‌ನನ್ನು ಹಿಡಿದು ಚೆನ್ನಾಗಿ ತದುಕಿದ್ದಾರೆ. ಥಳಿಸಿದ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಮೊದಲೇ ನಶೆಯಲ್ಲಿದ್ದ ಆರೋಪಿಗೆ ಸರಿಯಾಗಿ ತದುಕಿದ ಬಳಿಕ ಆತ ಪ್ರಜ್ಞೆ ತಪ್ಪುವ ಹಂತಕ್ಕೆ ಹೋಗಿದ್ದ. ಇದರಿಂದ ಆರೋಪಿಯನ್ನು ಕೂಡಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕುಟುಂಬಕ್ಕೆ ಹೊಸ ಸದಸ್ಯ ಮಗುವಿ‌ನ ಪ್ರವೇಶದೊಂದಿಗೆ ಎಲ್ಲವೂ ಹ್ಯಾಪಿ ಎಂಡಿಂಗ್ ಕಾಣಬೇಕಿತ್ತಾದರೂ, ಮಗುವಿನ ತಂದೆ, ಆರೋಪಿ ರಮಜಾನ್ ಸಲೀಂನ ಹುಚ್ಚಾಟದಿಂದಾಗಿ ಸಂಬಂಧದ ನಡುವೆ ಮತ್ತಷ್ಟು ಬಿರುಕು ಮೂಡಲು ಕಾರಣವಾಗಿದೆ. ತನ್ನ ನೀಚ ಬುದ್ಧಿಯಿಂದಾಗಿ ಆರೋಪಿ ತನ್ನ ಕಾಲಿಗೆ ತಾನೇ ಕೊಡಲಿಯೇಟು ನೀಡಿದ್ದಾನೆ. 

click me!