ನೌಕರಿ ಕೊಡಿಸುವುದಾಗಿ ಸಕಲೇಶಪುರ ಮೂಲದ ರೇಖಾ ಎಂಬ ಮಹಿಳೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಹಲವರಿಗೆ ಮೋಸ ಮಾಡಿರುವ ಪ್ರಕರಣದಲ್ಲಿ ರೇಖಾ ಎಂಬುವವರನ್ನು ಸುರಪುರ ಪೋಲಿಸರು ಎಡೆಮುರಿ ಕಟ್ಟಿದ್ದಾರೆ.
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ (ಮೇ.19): ನೌಕರಿ ಕೊಡಿಸುವುದಾಗಿ ಸಕಲೇಶಪುರ ಮೂಲದ ರೇಖಾ ಎಂಬ ಮಹಿಳೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಹಲವರಿಗೆ ಮೋಸ ಮಾಡಿರುವ ಪ್ರಕರಣದಲ್ಲಿ ರೇಖಾ ಎಂಬುವವರನ್ನು ಸುರಪುರ ಪೋಲಿಸರು (Police) ಎಡೆಮುರಿ (Arrest) ಕಟ್ಟಿದ್ದಾರೆ. ಆಡಿಯೋದಲ್ಲಿ (Audio) ಶಾಸಕ ರಾಜೂಗೌಡ (Mla Raju Gowda) ನನಗೆ ಪರಿಚಯ ಎಂದು ರೇಖಾ ಹೆಸರು ಬಳಸಿದ್ದರು. ರೇಖಾ ವಿರುದ್ಧ ಶಾಸಕ ರಾಜೂಗೌಡ ಸುರಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಶಾಸಕ ರಾಜೂಗೌಡ ದೂರಿನನ್ವಯ ಸುರಪುರ ಪೋಲಿಸರು ಆರೋಪಿ ರೇಖಾಳನ್ನು ಬೆಂಗಳೂರಿನಲ್ಲಿ (Bengaluru) ಬಂಧಿಸಿ ಸುರಪುರಕ್ಕೆ ಕರೆ ತಂದಿದ್ದಾರೆ.
undefined
NGO ಓಪನ್, ಬ್ಯಾಂಕ್‌ನಲ್ಲಿ ಕೆಲಸದ ಆಮಿಷ ತೋರಿಸಿದ್ದ ಕಿಲಾಡಿ ಮಹಿಳೆ: ರೇಖಾ ಎಂಬ ಮಹಿಳೆ ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವಳು. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಎಸ್ಟೇಟ್ ಮಾಡ್ತಾ ಇದ್ದಳು. ಅಲ್ಲಿ ರೇಖಾಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದ ಈರಪ್ಪಗೌಡ ಎಂಬಾತನ ಪರಿಚಯವಾಗುತ್ತೆ, ಈರಪ್ಪಗೌಡ ಅದೇ ಕೆ.ಆರ್.ಪುರಂ ನಲ್ಲಿ ಬೇಕರಿಯನ್ನು ಇಟ್ಟುಕೊಂಡಿದ್ದ, ರೇಖಾ ನೌಕರಿ ಕೊಡಿಸುವ ದಂಧೆಗೆ ಈರಪ್ಪಗೌಡ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ. ಮುಂದೆ ಈರಪ್ಪಗೌಡ ತನ್ನ ತವರೂ ಜಿಲ್ಲೆಯಾದ ಯಾದಗಿರಿ ಹಾಗೂ ಪಕ್ಕದ ಜಿಲ್ಲೆ ರಾಯಚೂರು ಜಿಲ್ಲೆಯಲ್ಲಿ ಪರಿಚಯ ಇಟ್ಟುಕೊಂಡು ದುಡ್ಡು ಕೊಟ್ರೆ ನೌಕರಿ ಕೊಡಿಸುವುದಾಗಿ ಆಮಿಷ ನೀಡ್ತಾರೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಾವು ಒಂದು ಟ್ರಸ್ಟ್ ಓಪನ್ ಮಾಡ್ತಾ ಇದೀನಿ, ಇದರಿಂದ ಬ್ಯಾಂಕ್ ಓಪನ್ ಮಾಡಿ ಅದರಲ್ಲಿ ನೌಕರಿ ಕೊಡಿಸುತ್ತೇವೆ ಹಲವಾರು ಜನರಿಗೆ ಫಂಗನಾಮ ಹಾಕಿದ್ದಾರೆ.
Yadgir: ದೇವಾಪುರ ಶ್ರೀಮಠದಿಂದ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್‌ಗೆ ಕಾಯಕ ಶ್ರೀ ಪ್ರಶಸ್ತಿ ಪ್ರದಾನ!
ಪಿಐ ಸುನೀಲ್ ಮೂಲಿಮನಿ ಸೈಬರ್ ಕ್ರೈಂ ಪಿಐ ಬಾಪೂಗೌಡ ಪಾಟೀಲ್ ನೇತೃತ್ವದಲ್ಲಿ ಸಿಕ್ಕಿಬಿದ್ದ ದೋಖಾ ರೇಖಾ: ನೌಕರಿ ಕೊಡಿಸುವುದಾಗಿ ರೇಖಾ ಎಂಬ ಮಹಿಳೆ ವಂಚಿಸಿದ್ದರೆಂಬ ಆಡಿಯೋದಲ್ಲಿ ಸುರಪುರ ಶಾಸಕ ರಾಜೂಗೌಡ ನನಗೆ ಪರಿಚಯ ಎಂದು ಹೆಸರು ಬಳಸಿದ್ದರು. ರಾಜೂಗೌಡ ರ ದೂರಿನನ್ವಯ ಸುರಪುರ ಪಿಐ ಸುನೀಲ್ ಮೂಲಿಮನಿ ಮತ್ತು ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿನ ರೇಖಾ ಅವರನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಆರೋಪಿ ರೇಖಾಳನ್ನು ಸುರಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ವಂಚಕಿ ರೇಖಾನನ್ನ ಬಂಧಿಸಿದ ಸುರಪುರ ಪಿಐ ಸುನೀಲ್ ಮೂಲಿಮನಿ ಮತ್ತು ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್ ನೇತೃತ್ವದ ಟೀಂ ಈಗ ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ.
ಆಡಿಯೋ ಹಿಂದೆ ದುರುದ್ದೇಶ, ಮುಂದೆ ಮಹಾನಾಯಕನ ಕೈವಾಡ ಹೊರಬರುತ್ತೆ: ದೋಖಾ ಮಾಡಿದ ರೇಖಾ ಎಂಬ ಮಹಿಳೆಯನ್ನು ಬಂಧಿಸಿದ ಹಿನ್ನೆಲೆ ಸುರಪುರ ಶಾಸಕ ರಾಜೂಗೌಡ ಪ್ರತಿಕ್ರಿಯಿಸಿ, ಆಡಿಯೋ ಹಿಂದೆ ದುರುದ್ದೇಶವಿದೆ. ಮುಂದೆ 'ಮಹಾನಾಯಕ' ನ ಕೈವಾಡ ಹೊರಬರುತ್ತದೆ. ನನಗೆ ಕಪ್ಪುಚುಕ್ಕೆ ಹಚ್ಚುವವರನ್ನು ನಾನು ಬೀಡಲ್ಲ, ನಾನು ತಪ್ಪು ಮಾಡಿದ್ರೆ ಕ್ಷಮೆ ಕೇಳ್ತಿದ್ದೆ, ಇಬ್ಬರೂ ಕಳ್ಳರು ಮಾತಾನಾಡಿದ್ದಕ್ಕೆ ಇಷ್ಟು ಹೈಲೆಟ್ ಆಗಿದೆ. ನಾನು ದೂರು ಕೊಡದಿದ್ರೆ ಬಹಳ ಜನರಿಗೆ ಮೋಸ ಮಾಡುತ್ತಿದ್ದರು. ಇದರ ಹಿಂದೆ ರಾಜೂಗೌಡರಿಗೆ ಕಪ್ಪುಚುಕ್ಕೆ ತರುವುದಾಗಿದೆ. ಕೇವಲ ಆಡಿಯೋದಲ್ಲಿ ನನ್ನ ಹೆಸರು ಮಾತ್ರ ಬಿಡ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ರಾಜಕೀಯ ಕೆಸರೇರಚಾಟದಲ್ಲಿ ಅಮಾಯಕರು ಬಲಿಯಾಗಬಾರದು ಎಂದು ಸ್ಪಷ್ಟೀಕರಣ ನೀಡಿದರು.
Yadgir: ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಯನ್ನು ಕೊಲೆ ಮಾಡಿದ ಪತಿ: ಪಾಪಿ ಗಂಡ ಎಸ್ಕೇಪ್!
ಬೆಂಗಳೂರಿನಲ್ಲಿದ್ದೆ ಸುರಪುರದವರಿಗೆ ವಂಚಿಸಿದ ಕಿರಾತಕಿ: ಈ ರೇಖಾ ಎಂಬ ಮಹಿಳೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಈರಪ್ಪಗೌಡ ಎಂಬ ಮಧ್ಯವರ್ತಿಯನ್ನು ಇಟ್ಟುಕೊಂಡು ನೌಕರಿ ಕೊಡಿಸುವ ಡೀಲ್ ಕುದುರಿಸುತ್ತಿದ್ರು, ಕಲ್ಯಾಣ ಕರ್ನಾಟಕದ ಮುಗ್ಧ ಜನರನ್ನೆ ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದ ಮೋಸಗಾತಿ ರೇಖಾ. ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ತಾಲೂಕಿನಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಹಣವನ್ನು ಎಗರಿಸಿದ್ದಾಳೆ. ನನಗೆ ನಾಯಕರು ಪರಿಚಯ ಇದ್ದಾರೆಂದು ಜನರಿಗೆ ಮೋಸ ಮಾಡುತ್ತಿದ್ದಳು. ರೇಖಾ ವಿರುದ್ಧ ಸುರಪುರ ಪೋಲಿಸ್ ಠಾಣೆಯಲ್ಲಿ ಮೂವರು ಮೋಸ ಹೋದವರು ದೂರು ನೀಡಿದ್ದಾರೆ. ಸೂಗೂರು ಗ್ರಾಮದ ಮಲ್ಲನಗೌಡ 3.65 ಲಕ್ಷ ರೂ. ಕೋನಾಳ್ ಗ್ರಾಮದ ಈರಪ್ಪ ಗೆ 6.50 ಲಕ್ಷ ರೂ. ಸಗರ ಗ್ರಾಮದ ವಿಶ್ವನಾಥನಿಗೆ 15 ಲಕ್ಷ ರೂ. ಮೋಸ ಮಾಡಿದ್ದಾಳೆ.