30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ, ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ

By Vinutha Perla  |  First Published Apr 1, 2023, 12:51 PM IST

ಕಾಲ ಬದಲಾಗುತ್ತಾ ಹೋದಂತೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿಯೇ ವೃದ್ಧಾಶ್ರಮಗಳು, ಆಸರೆ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದೆ.  30 ಕೋಟಿ ಆಸ್ತಿ ಹೊಂದಿರುವ ತಮ್ಮ ಮಗ, ಎರಡು ಹೊತ್ತಿನ ಊಟವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿರುವ ಮನಕಲಕುವ ಘಟನೆ ಹರಿಯಾಣದಲ್ಲಿ ನಡೆದಿದೆ


ನವದೆಹಲಿ: 30 ಕೋಟಿ ಆಸ್ತಿ ಹೊಂದಿರುವ ತಮ್ಮ ಮಗ ಎರಡು ಹೊತ್ತಿನ ಊಟವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ವೃದ್ಧ ದಂಪತಿ ಮಾರ್ಚ್ 29ರ ರಾತ್ರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ ಬರೆದಿದ್ದಾರೆ. ಜಗದೀಶ್ ಚಂದ್ರ ಆರ್ಯ (78) ಮತ್ತು ಭಗ್ಲಿ ದೇವಿ (77) ಅವರು ಚಾರ್ಖಿ ದಾದ್ರಿಯ ಬದ್ರಾದ ಶಿವ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ವಿಷ ಸೇವಿಸುವ ಮುನ್ನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವೃದ್ಧ ದಂಪತಿಯೇ (Elder couple) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು (Death). ಈ ಘಟನೆ ಮಾರ್ಚ್ 29ರಂದು ನಡೆದಿದೆ ಎಂದು ತಿಳಿದುಬಂದಿದೆ.

Tap to resize

Latest Videos

ರೊಟ್ಟಿ ಮಾಡಿ ಕೊಡೇ ಮಾರಾಯ್ತಿ ಅಂದ್ರೆ ಮಾಡ್ಲಿಲ್ಲ ಹೆಂಡ್ತಿ, ಸಿಟ್ಟಿಗೆದ್ದು ನೇಣು ಹಾಕಿಕೊಂಡ ಪತಿ !

ಹಳಸಿದ ಆಹಾರ ಕೊಡುತ್ತಿದ್ದ ಮಗ, ಮನನೊಂದಿದ್ದ ದಂಪತಿ
30 ಕೋಟಿ ಆಸ್ತಿ ಹೊಂದಿರುವ ತಮ್ಮ ಮಗ ಎರಡು ಹೊತ್ತಿನ ಊಟವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ಜಗದೀಶ್ ಚಂದ್ರ ಆರ್ಯ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ (Sucide note) ದಂಪತಿಗಳು ತಮ್ಮ ಇನ್ನೊಬ್ಬ ಮಗ ಮಹೇಂದರ್‌ನೊಂದಿಗೆ ಈ ಹಿಂದೆ ಬಾಧ್ರಾದಲ್ಲಿ ವಾಸಿಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಆರು ವರ್ಷಗಳ ಹಿಂದೆ ಅವರು ನಿಧನರಾದಾಗ ಅವರು ತಮ್ಮ ಸೊಸೆ ನೀಲಂ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದರು ಎಂದು ತಿಳಿಸಿದ್ದಾರೆ. 

ಪತ್ನಿಗೆ ಸ್ಟ್ರೋಕ್ ಆಗಿದ್ದರಿಂದ ಪತಿ ಮಗ ವೀರೇಂದರ್ ಮನೆಗೆ ಆಗಮಿಸಿದ್ದಾರೆ. ಮಗ ತಂಗಲು ಒಪ್ಪಿಗೆ ನೀಡಿದ್ದರೂ ಸರಿಯಾಗಿ ಎರಡು ಹೊತ್ತು ಊಟ ಕೊಡುತ್ತಿರಲಿಲ್ಲ. ಕೊಟ್ಟರೂ ಹಳಸಿದ ಆಹಾರವನ್ನು ಕೊಡುತ್ತಿದ್ದರು. 30 ಕೋಟಿ ಆಸ್ತಿ ಇದ್ದರೂ ಎರಡು ಹೊತ್ತು ಊಟ ಹಾಕಲು ಅವನಿಗೂ ಇಷ್ಟವಿರಲಿಲ್ಲ.  ಇದಕ್ಕೆ ಕಾರಣ ಆತನಿಗೆ ಇದ್ದ ಇಬ್ಬರು ಪತ್ನಿಯರು ಜಗದೀಶ್ ಆರ್ಯಾ ಡೆತ್ ನೋಟ್ ಬಲ್ಲಿ ವಿವರಿಸಿದ್ದಾರೆ. ನಂತರ ಎರಡು ವರ್ಷಗಳ ಕಾಲ ವೃದ್ಧಾಶ್ರಮದಲ್ಲಿ ಇರುವಂತೆ ಒತ್ತಾಯಿಸಿ ಸೊಸೆ ಅವರನ್ನು ಹೊರಗೆ ಹಾಕಿದ್ದಾಳೆ ಎಂದು ಆರ್ಯ ಆರೋಪಿಸಿದ್ದಾರೆ.

ಪ್ರೀತಿಸಿ ಕೈಕೊಟ್ಟ ಹುಡುಗಿ, ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ

30 ಕೋಟಿ ರೂ. ಆಸ್ತಿ ನಮ್ಮದಾಗಿದ್ದು, ಅದನ್ನು ಮಗನಿಗೆ ಕೊಟ್ಟಿದ್ದೆವು. ಆದರೆ ಆತನೇ ನೋಡಿಕೊಳ್ಳಲಿಲ್ಲ. ಆದ್ದರಿಂದ ಈ ಆಸ್ತಿಯನ್ನು ಬಾಂದ್ರಾದಲ್ಲಿರುವ ಆರ್ಯ ಸಮಾಜಕ್ಕೆ ದಾನ ಮಾಡುವಂತೆ ವೃದ್ಧ ದಂಪತಿ ಮನವಿ (Request) ಮಾಡಿದ್ದಾರೆ. ದಂಪತಿಯು ತಮ್ಮ ಸಾವಿಗೆ ತನ್ನ ಮಗ ವೀರೇಂದ್ರ ಮತ್ತು ಇಬ್ಬರು ಸೊಸೆಯರನ್ನು ಕಾರಣ ಎಂದು ಹೆಸರಿಸಿದ್ದಾರೆ. ಅಲ್ಲದೇ ನಮ್ಮ ಈ ಸ್ಥಿತಿಗೆ ಕಾರಣವಾದವರನ್ನು ಶಿಕ್ಷಿಸಬೇಕು ಎಂದು ಅವರು ಅತ್ಮಹತ್ಯೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ವಿಚಾರಣೆ ವೇಳೆ ಮಗ, ಅನಾರೋಗ್ಯಕ್ಕೆ ಒಳಗಾಗಿದ್ದ ಹೆತ್ತವರಿಂದ ನನಗೆ ತೊಂದರೆ ಆಗುತ್ತಿತ್ತು. ಅನಾರೋಗ್ಯಕ್ಕೆ ಹೆದರಿ ಅವರು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಿರುವ ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ.

Mental Health: ಆತ್ಮಹತ್ಯೆ ಮನಸ್ಥಿತಿ ಹೊಂದಿರುವ ಜನರಿಗೆ ನೆರವಾಗೋದು ಹೇಗೆ ?

click me!