ಮನೆಯಿಂದ ಕಾಣೆಯಾದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ದೊಡ್ಡಮನಿ ಕಾಲನಿಯಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ
ಹುಬ್ಬಳ್ಳಿ (ಏ.1) : ಮನೆಯಿಂದ ಕಾಣೆಯಾದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ದೊಡ್ಡಮನಿ ಕಾಲನಿಯಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕ್ರಿಶ್ಚಿಯನ್ ಕಾಲನಿಯ ನದೀಮ್ ಹುಬ್ಬಳ್ಳಿ (8) ಹತ್ಯೆಯಾದ ಬಾಲಕ. ಈತ ಗುರುವಾರ ಮನೆಯಿಂದ ಹೊರ ಹೋಗಿದ್ದ, ನಂತರ ರಾತ್ರಿಯಾದರೂ ಮರಳಿ ಬಂದಿರಲಿಲ್ಲ. ಈಗ ಶವವಾಗಿ ಸಿಕ್ಕಿದ್ದಾನೆ.
ಶ್ರೀನಗರದ ನಿವಾಸಿಯಾಗಿದ್ದ ನದೀಮ್ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಘಂಟಿಕೇರಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದನು. ಗುರುವಾರ ಎಂದಿನಂತೆ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದನು. ಆದರೆ, ರಾತ್ರಿಯಾದರೂ ಮನೆಗೆ ವಾಪಸ್ ಬರದ ಕಾರಣ ಆತಂಕಕ್ಕೊಳಗಾದ ಕುಟುಂಬಸ್ಥರು ಎಲ್ಲಡೆ ತಡಕಾಡಿ ನಂತರ ಬೆಂಡಿಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ, ಶುಕ್ರವಾರ ಇಲ್ಲಿಯ ದೊಡ್ಡಮನಿ ಕಾಲನಿಯ ಮೈದಾನದ ಮುಳ್ಳುಕಂಟಿಗಳ ಮಧ್ಯೆ ಅರೇ ನಗ್ನ ಸ್ಥಿತಿಯಲ್ಲಿ ನದೀಮ್ ಮೃತದೇಹ ಪತ್ತೆಯಾಗಿದೆ. ಭೀಕರವಾಗಿ ಹತ್ಯೆ ಮಾಡಲಾಗಿದೆ. ಅತ್ಯಾಚಾರ ಎಸಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ. ಮೃತ ಬಾಲಕನ ಮನೆಯಲ್ಲಿ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತ್ತು. ಬಾಲಕನ ಮನೆಗೆ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಲೈಂಗಿಕ ದೌರ್ಜನ್ಯ ನಡೆಸಿ 7 ವರ್ಷದ ಬಾಲಕಿ ಹತ್ಯೆ ಮಾಡಿದ ನೆರೆಮನೆಯ ಕಾಮುಕ: ಗೋಣಿಚೀಲದಲ್ಲಿ ಶವ ಪತ್ತೆ