ತಾಯಿ ಮೊಬೈಲ್‌ ಚಾರ್ಜರ್ ಕೊಡದ್ದಕ್ಕೆ ನೇಣಿಗೆ ಶರಣಾದ ಮಗ!

By Ravi Janekal  |  First Published Aug 1, 2023, 11:10 AM IST

ತಾಯಿ ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಮಗನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ನಡೆದಿದೆ.


ತುಮಕೂರು (ಆ.1) : ತಾಯಿ ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಮಗನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿಖಿಲ್ ಗೌಡ (18) ನೇಣಿಗೆ ಶರಣಾಗಿರುವ ಯುವಕ. ಅಶಾ ಕಾರ್ಯಕರ್ತೆಯಾಗಿರು  ವರಲಕ್ಷಮ್ಮ ಎಂಬಾಕೆಯ ಮಗ.  ಪಾವಗಡ ಪಟ್ಟಣದ ಶಾಂತಿ ಎಸ್ಎಸ್ ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ. ನಿನ್ನೆ ಭಾನುವಾರ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದ ನಿಖಿಲ್. ಈ ವೇಳೆ ನನಗೆ ಅದು ಕೊಡಿಸಿಲ್ಲ, ಇದು ಕೊಡಿಸಿಲ್ಲ ಎಂದು ತಾಯಿ ಜತೆಗೆ ಗಲಾಟೆ ಮಾಡಿದ್ದ ನಿಖಿಲ್. ಇದೆಲ್ಲ ಆದ ಬಳಿಕ ಮೊಬೈಲ್ ಚಾರ್ಜರ್ ಕೊಡು ಎಂದ್ದಿದ್ದಾನೆ. ಆದರೆ ತಾಯಿ ನನ್ನ ಬಳಿ ಚಾರ್ಜರ್ ಇಲ್ಲ ಎಂದು ಹೇಳಿದ್ದಾಳೆ. ಬಳಿಕ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದ ತಾಯಿ ವರಲಕ್ಷ್ಮಮ್ಮ. ಮನೆಗೆ ವಾಪಸ್ ಬಂದು ಬಾಗಿಲು ತೆರೆಯಲು ನೋಡಿದ್ದಾಳೆ. ಆದರೆ ಒಳಗಡೆಯಿಂದ ಮನೆ ಬಾಗಿಲು ಲಾಕ್ ಆಗಿದೆ. ಬಾಗಿಲು ಬಡಿದಿದ್ದಾಳೆ. ಆದರೂ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಘಟನೆ ಬಯಲಿಗೆ ಬಂದಿದೆ.

Tap to resize

Latest Videos

ಕಳೆದ ಎಂಟು ವರ್ಷದ ಹಿಂದೆಯೇ ಸಾವನ್ನಪ್ಪಿರುವ ಮೃತ ನಿಖಿಲ್ ಗೌಡ ತಂದೆ. ವರಲಕ್ಷ್ಮಮ್ಮಗೆ ಇಬ್ಬರು ಮಕ್ಕಳು. ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತೋರ್ವ ಮಗಳು ಭಾಗ್ಯಮ್ಮ. ಇದ್ದೊಬ್ಬ ಮಗನಲ್ಲೇ ತಂದೆಯನ್ನು ಕಾಣುತ್ತ ಆಶಾ ಕಾರ್ಯಕರ್ತೆಯಾಗಿ ಬದುಕು ಸಾಗಿಸಿದ್ದ ವರಲಕ್ಷ್ಮಮ್ಮ. ನಿನ್ನೆ ಚಾರ್ಜರ್ ಇಲ್ಲವೆಂದ ಕ್ಷುಲ್ಲಕ ಕಾರಣಕ್ಕ ಮಗನ ದುರಂತ ಸಾವಿಗೆ ಕುಸಿದು ಬಿದ್ದಿದ್ದಾಳೆ.

ಹೊಸಪೇಟೆ:  ಕ್ಷುಲ್ಲಕ ಕಾರಣ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯ!

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಚಿಕ್ಕ ಚಿಕ್ಕ ಕಾರಣಗಳಿಗೆ ಆತ್ಮಹತ್ಯೆ ದಾರಿಹಿಡಿಯುವ ಮಕ್ಕಳ ಮನಸನ್ನು ಮೊಬೈಲ್ ಎಂಬ ಮಾಯೆ ಅದ್ಯಾವ ಪರಿ ಆವರಿಸಿಕೊಂಡಿದೆ. ಇಂಥ ಘಟನೆಗಳು ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿದೆ. ಚಿಕ್ಕವಯಸ್ಸಿನಲ್ಲೇ ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗದಂತೆ ನೋಡಿಕೊಳ್ಳಬೇಕು. ಮೊಬೈಲ್‌ನಿಂದ ಆಗುವ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.

Karnataka Crimes: ಮನೆ ಮೇಲೆ ಆಟ ಆಡುವಾಗ ಜಗಳ; ಚಾಕು ಇರಿತಕ್ಕೆ ಬಾಲಕ ಸಾವು!

click me!