
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.1) : ಸಂಸಾರದಲ್ಲಿ ಗಂಡ ಹೆಂಡತಿ ಅಂದ್ಮೇಲೆ ಸಾವಿರ ಮನಸ್ತಾಪಗಳು ಬರೋದು ಸರ್ವೆ ಸಾಮಾನ್ಯ. ಆದರೆ ಎಲ್ಲವನ್ನು ಮರೆತು ಪ್ರೀತಿ, ಸಹಬಾಳ್ವೆಯಿಂದ ಹೊಂದಿಕೊಂಡು ಜೀವನ ಸಾಗಿಸುವುದೇ ನಿಜವಾದ ದಂಪತಿಗಳ ಲಕ್ಷಣ. ಆದ್ರೆ ಇಲ್ಲೊಂದು ಮನೆಯಲ್ಲಿ ಪತ್ನಿಯ ಮೇಲೆ ಪತಿ ಮೆರೆದಿರುವ ವಿಕೃತಿ ಮನಸ್ಥಿತಿ ನೋಡಿದ್ರೆ ಬೆಚ್ಚಿಬೀಳ್ತೀರಿ.
ನೋಡಿ ಹೀಗೆ ಗಂಭೀರ ಸ್ಥಿತಿಯಲ್ಲಿ ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಹೆಸರು ಪೂಜಾ (ರೇಖಾ, ಹೆಸರು ಬದಲಿಸಲಾಗಿದೆ) ಅಂತ. ಮೂಲತಃ ಇವರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ನಿವಾಸಿ. ತನ್ನ ಗಂಡ ಬಾಸ್ಕರ್ ಇಂದು ಏಕಾಏಕಿ ಪತ್ನಿಯ ಮೇಲೆ ತನ್ನ ಗಂಡಸ್ತನ ತೋರಿಸಲು ಮುಂದಾಗಿದ್ದಾನೆ. ಮನೆಯಲ್ಲಿ ಇಬ್ಬರೇ ಇದ್ದ ಸಮಯವನ್ನು ನೋಡಿಕೊಂಡ ಪಾಪಿ ಪತಿರಾಯ ಬಾಸ್ಕರ ತನ್ನ ಪತ್ನಿಯ ಗುಪ್ತಾಂಗದ ಮೇಲೆ ಕ್ರಿಕೆಟ್ ಆಡುವ ವಿಕೆಟ್ ನಿಂದ ಸಿಕ್ಕಾಪಟ್ಟೆ ಹಲ್ಲೆ ನಡೆಸಿರುವ ಘೋರ ಅಮಾನವೀಯ ಘಟನೆ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಪಾವಗಡ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪತಿ ಭಾಸ್ಕರ ಪತ್ನಿ ಮೇಲೆ ಈ ರೀತಿ ವಿಕೃತಿ ಮೆರೆಯುವ ಮೂಲಕ ತನ್ನ ಗಂಡಸ್ತನ ತೋರಿಸಲು ಮುಂದಾಗಿದ್ದಾನೆ.
ವ್ಯಕ್ತಿಯ ಮಾನಸಿಕ ದೃಢತೆ ಬಗ್ಗೆ ವೈದ್ಯರ ಪ್ರಮಾಣಪತ್ರ ಇದ್ದರಷ್ಟೇ ಮರಣಪೂರ್ವ ಹೇಳಿಕೆ ಸ್ವೀಕಾರ: ಹೈಕೋರ್ಟ್
ಸದ್ಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಬಾಸ್ಕರ, ಮೊದಲೇ ಮೆಂಟಲಿ ಅಪ್ಸೆಟ್ ಇರುತಕ್ಕಂತಹ ವ್ಯಕ್ತಿ ಆಗಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಆದ್ರೆ ಇತ್ತೀಚೆಗೆ ತನ್ನ ಹೆಂಡತಿ ಮೇಲೆ ಅನುಮಾನವೆಂಬ ಪೆಡಂಭೂತವನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದನಂತೆ. ಯಾವಾಗ ನೋಡಿದ್ರು ಹೆಂಡತಿ ಮೇಲೆ ಅನುಮಾನ ಪಡುತ್ತಾ ಮನೆಯಲ್ಲಿ ಸುಖಾ ಸುಮ್ಮನೆ ಜಗಳ ಮಾಡ್ತಿದ್ದನಂತೆ. ಇದು ಅತಿರೇಖವಾಗಿ ಇಂದು ಹೆಂಡತಿ ಮೇಲೆ ಪೌರುಷ ತೋರಿಸುವ ಬರದಲ್ಲಿ ವಿಕೃತಿ ಮೆರೆದಿರೋದು ನಿಜಕ್ಕೂ ಇಡೀ ಜಿಲ್ಲೆಗೆ ಕೆಟ್ಟ ಹೆಸರು ತಂದಿದ್ದಾನೆ ಭೂಪ.
ಸೈಕೋ ಬಾಸ್ಕರ ಮನಸೋಇಚ್ಛೆ ಅಕೆಯ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿರೋ ಪರಿಣಾಮ ಇಡೀ ಮನೆಯಲ್ಲಾ ರಕ್ತದ ಕಲೆಗಳು ಅಗಿರುವುದು ಪೊಲೀಸರು ಪರಿಶೀಲನೆ ಮಾಡುವ ವೇಳೆ ಬೆಳಕಿಗೆ ಬಂದಿದೆ. ಘಟನೆ ನಡೆದ ಬಳಿಕ ಏನೂ ಆಗದಂತೆ ಮುಗ್ದತೆ ತೋರಲು ಮುಂದಾಗಿರುವ ಭಾಸ್ಕರ ತಾನೇ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು. ಕೂಡಲೇ ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು. ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಸೈಕೋ ಭೂಪನ ವಿರುದ್ದ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಆದಷ್ಟು ಬೇಗ ಗುಣಮುಖರಾಗಿ ಬರಬೇಕಿದೆ
ತಲಪಾಡಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿ ಮುವಾದ್ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ