
ಚಿಕ್ಕಮಗಳೂರು (ಆ.1) : ಕೇದರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಿರೀಶ್ (25) ಕೇದರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ನಿವಾಸಿಯಾಗಿರುವ ಗಿರೀಶ್, ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ. ಗಿರೀಶ್ ಕಳೆದ ವಾರ ಮೂಡಿಗೆರೆಯಿಂದ ಕೇದರನಾಥ್ ಯಾತ್ರೆಗೆ ತೆರಳಿದ್ದ. ಆದರೆ ಕೇದರನಾಥದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಬಳಿಕ ಸ್ಥಳೀಯರ ಸಹಾಯದಿಂದ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ .ಚಿಕಿತ್ಸೆ ಫಲಕಾರಿಯಾಗದ ಸಾವನ್ನಪಿದ್ದಾನೆ
ಈ ಬಗ್ಗೆ ಕೇದರನಾಥ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಗಿರೀಶ್ ಮೃತದೇಹ ರಿಷಿಕೇಶ್ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಕುಟುಂಬಸ್ಥರು ಬರುವಂತೆ ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಸಂಶಯ ಪ್ರವೃತ್ತಿಯ ಪತಿರಾಯ; ಪತ್ನಿ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿ ವಿಕೃತಿ!
ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಆತ್ಮಹತ್ಯೆ
ವಿಜಯಪುರ: ಕೆಲವೇ ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಹೋಬಳಿಯ ಬಿಜ್ಜವಾರ ಗ್ರಾಮದ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಪಟ್ಟಣದ ಕೆರೆಕೋಡಿ ನಿವಾಸಿ ರಮೇಶ್(26), ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟತಾಲೂಕಿನ ಜರುಗಹಳ್ಳಿ ಗ್ರಾಮದ ಸಹನ(22) ಆತ್ಮಹತ್ಯೆ ಮಾಡಿಕೊಂಡವರು.
ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ, ಆಕೆಯ ಹಣದ ದಾಹಕ್ಕೆ ವ್ಯಕ್ತಿ ಆತ್ಮಹತ್ಯೆ
ದೇವನಹಳ್ಳಿಯ ರೆಡ್ಡಿ ಎಲೆಕ್ಟ್ರಾನಿಕ್ಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್, ಜರುಗಹಳ್ಳಿಯ ಸಹನಾಳನ್ನು ಪ್ರೀತಿಸಿ, ಐದು ತಿಂಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರು ಐದು ದಿನಗಳ ಹಿಂದೆ ಬಿಜ್ಜವಾರದ ಸಂಬಂಧಿಕರ ಮನೆಗೆ ಬಂದಿದ್ದರು. ಅನ್ಯೋನ್ಯವಾಗಿದ್ದ ದಂಪತಿ, ಭಾನುವಾರ ಬಿಜ್ಜವಾರದ ಅಶ್ವತ್ಥನಾರಾಯಣ ಅವರ ತೋಟದಲ್ಲಿನ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಮೃತದೇಹಗಳು ಪತ್ತೆಯಾಗಿದೆ. ತಕ್ಷಣ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ವಿಜಯಪುರ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ