ತನಗೆ ತಾಳಿ ಕಟ್ಟಿಇದೀಗ ಮತ್ತೊಂದು ಮದುವೆ ಆಗಲು ಹೊರಟಿದ್ದ ತನ್ನ ಪತಿಯನ್ನು ಕಲ್ಯಾಣ ಮಂಟಪದಲ್ಲೇ ತಡೆದು ರಂಪ ಮಾಡಿದ್ದ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಶಾಂತಿಗ್ರಾಮ ಸಮೀಪದ ನೀಲಗಿರಿ ಕಾಡಿನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಹಾಸನ (ನ.12): ತನಗೆ ತಾಳಿ ಕಟ್ಟಿಇದೀಗ ಮತ್ತೊಂದು ಮದುವೆ ಆಗಲು ಹೊರಟಿದ್ದ ತನ್ನ ಪತಿಯನ್ನು ಕಲ್ಯಾಣ ಮಂಟಪದಲ್ಲೇ ತಡೆದು ರಂಪ ಮಾಡಿದ್ದ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಶಾಂತಿಗ್ರಾಮ ಸಮೀಪದ ನೀಲಗಿರಿ ಕಾಡಿನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ನ.10ರಂದು ಕಿರಣ್ ಎಂಬ ಯೋಧ ನಗರದ ಬೂವನಹಳ್ಳಿ ಬೈಪಾಸ್ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮದುವೆಯಾಗುತ್ತಿದ್ದ. ಈ ಸಂದರ್ಭ ಅಲ್ಲಿಗೆ ಪೊಲೀಸರೊಂದಿಗೆ ಬಂದ ಆಶಾ ಎಂಬಾಕೆ ತಾನು ಮತ್ತು ಕಿರಣ್ ಈಗಾಗಲೇ ಮದುವೆ ಆಗಿದ್ದು, ಈಗ ನನ್ನನ್ನು ವಂಚಿಸಿ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ.
ತಾನು ವಿಧವೆ ಮತ್ತು ಇಬ್ಬರು ಮಕ್ಕಳಿದ್ದು ಕಿರಣ್ ಕೆಲ ತಿಂಗಳ ಹಿಂದೆ ತನ್ನ ಮನೆಯಲ್ಲೇ ತಾಳಿ ಕಟ್ಟಿದ್ದ ಎಂದು ಗಲಾಟೆ ನಡೆಸಿದ್ದಳು. ಅಷ್ಟೊತ್ತಿಗಾಗಲೆ ಕಿರಣ್ 2ನೇ ಹುಡುಗಿಗೆ ತಾಳಿ ಕಟ್ಟಿದ್ದ. ಆದರೆ ಇಷ್ಟೆಲ್ಲಾ ರಂಪಾಟ ನೋಡಿದ ವಧು ಈ ಮದುವೆ ಬೇಡ ಎಂದು ಹೇಳಿ, ತಾಳಿ ವಾಪಸ್ ಕೊಟ್ಟು ಹೋಗಿದ್ದಾಳೆ. ರಾಜಿ ಸಂಧಾನದ ನಂತರ ಕಿರಣ್ ಮನೆಗೆ ಹೊರಟವನೇ ಮತ್ತೆ ಆಶಾಳನ್ನು ಸಂಪರ್ಕಿಸಿದ್ದಾನೆ. ಇಬ್ಬರ ನಡುವೆ ಮನಸ್ತಾಪವೇರ್ಪಟ್ಟಿದ್ದು, ನಂತರ ಶಾಂತಿಗ್ರಾಮ ಸಮೀಪದ ಹೊಂಗೆರೆ ಬಳಿಯ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಇಬ್ಬರೂ ನೇಣು ಬಿಗಿದುಕೊಂಡಿದ್ದಾರೆ.
ಒಂದೇ ಭೇಟಿ, 3 ಸಮುದಾಯಗಳ ಒಲವು ಗಳಿಸಲು ಮೋದಿ ಯತ್ನ
ನೇಣಿಗೆ ಶರಣಾದ ಯುವಕ: ಮನೆಯ ಬಳಿಗೆ ಬಂದು ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಹೆದರಿದ ಯುವಕ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಹಾರಕಬಾವಿ ಗ್ರಾಮದ ತಿಪ್ಪೇಶ (25) ಮೃತ ಯುವಕನಾಗಿದ್ದಾನೆ.
ಹಾರಕಬಾವಿ ಗ್ರಾಮದ ತಿಪ್ಪೇಶ ಎನ್ನುವವರು ತನ್ನ ಸ್ನೇಹಿತ ಬಸವರಾಜನ ಜತೆಗೂಡಿ ಅದೇ ಗ್ರಾಮದ ಚೌಡೇಶ ಎನ್ನುವವರಿಗೆ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಆ ಬೈಗುಳದಿಂದ ಸಿಟ್ಟು ಮಾಡಿಕೊಂಡಿದ್ದ ಚೌಡೇಶ ಮತ್ತಿತರರು ತಿಪ್ಪೇಶ ಮತ್ತು ಆತನ ಸ್ನೇಹಿತ ಬಸವರಾಜನ ಮನೆಯ ಬಳಿ ಹೋಗಿ ಹುಡುಕಿದ್ದಾರೆ. ಆಗ ಬಸವರಾಜ ಮಾತ್ರ ಅವರ ಕೈಗೆ ಸಿಕ್ಕಿದ್ದರಿಂದ ಆತನನ್ನು ಹೊಡೆದಿದ್ದು ತಿಪ್ಪೇಶ ಅವರ ಕೈಗೆ ಸಿಕ್ಕಿಲ್ಲ. ಮನೆಯಲ್ಲಿ ತಿಪ್ಪೇಶ ಇರಲಿಲ್ಲವಾದ್ದರಿಂದ ಕೋಪದಲ್ಲಿದ್ದ ಚೌಡೇಶ ಮತ್ತು ಆತನ ಕಡೆಯವರು, ತಿಪ್ಪೇಶ ಸಿಕ್ಕರೆ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಗಲಾಟೆಯ ಭಯದಿಂದಾಗಿ ಹೊಲದಲ್ಲಿ ಅಡಗಿಕೊಂಡಿದ್ದ ತಿಪ್ಪೇಶನನ್ನು ಅವರ ಮನೆಯವರು ಸಮಾಧಾನಪಡಿಸಿ ಮನೆಗೆ ರಾತ್ರಿ ಕರೆತಂದು ಒಳಗಿರುವಂತೆ ತಿಳಿಸಿದ್ದಾರೆ.
ವಂದೇ ಭಾರತ್ ರೈಲಲ್ಲ, ಹೆಗ್ಗುರುತು: ಪ್ರಧಾನಿ ಮೋದಿ
ಮರುದಿನ ಬೆಳಗ್ಗೆ ತಿಪ್ಪೇಶನ ಮನೆಯ ಬಳಿಗೆ ಚೌಡೇಶ ಮತ್ತು ಆತನ ಕಡೆಯವರು ಮತ್ತೆ ಬಂದು ಬೆದರಿಕೆ ಹಾಕಿದ್ದಾರೆ. ಇದನ್ನರಿತ ತಿಪ್ಪೇಶನ ಅಜ್ಜಿ ಗಲಾಟೆ ಆಗುತ್ತದೆ, ಮನೆಯಲ್ಲಿಯೇ ಇರುವಂತೆ ತಿಳಿಸಿ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದಾರೆ. ಮಧ್ಯಾಹ್ನ ಮನೆಗೆ ಬಂದು ಬೀಗ ತೆಗೆದು ನೋಡಿದಾಗ ತಿಪ್ಪೇಶನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಕುರಿತು ಮೃತನ ಮಾವ ಸಿದ್ದೇಶ ಎನ್ನುವವರು ನೀಡಿದ ದೂರಿನಂತೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.