ಜಾತ್ರೆ ಅಂದ್ರೆ ಸಂಭ್ರಮ. ಆದರೆ ಅದೇ ಜಾತ್ರೆಯಲ್ಲಿ ತೇರು ಎಳೆಯುವ ಸಂದರ್ಭದಲ್ಲಿ ಆದ ವಿದ್ಯುತ್ ಅವಘಡದಿಂದ ಓರ್ವ ಯುವಕ ಸಾವನ್ನಪ್ಪಿ, 15ಕ್ಕೂ ಜನ ಗಾಯಗೊಂಡ ದಾರುಣ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಏ.14): ಜಾತ್ರೆ ಅಂದ್ರೆ ಸಂಭ್ರಮ. ಆದರೆ ಅದೇ ಜಾತ್ರೆಯಲ್ಲಿ ತೇರು ಎಳೆಯುವ ಸಂದರ್ಭದಲ್ಲಿ ಆದ ವಿದ್ಯುತ್ ಅವಘಡದಿಂದ (Electric Shock) ಓರ್ವ ಯುವಕ ಸಾವನ್ನಪ್ಪಿ (Death), 15ಕ್ಕೂ ಜನ ಗಾಯಗೊಂಡ ದಾರುಣ ಘಟನೆ ದಾವಣಗೆರೆ (Davanagere) ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರದಲ್ಲಿ (Kengapura) ಪ್ರತಿ ವರ್ಷದಂತೆ ಈ ವರ್ಷ ಗ್ರಾಮದ ಶಕ್ತಿ ದೇವತೆ ದುರ್ಗಮ್ಮನ ಜಾತ್ರೆ (Durgamma Fair) ಆಚರಣೆ ಮಾಡುತಿದ್ದರು. ಗ್ರಾಮದ ಜನರೆಲ್ಲ ದುರ್ಗಮ್ಮನ ತೇರು ಎಳೆದು ಸಂಭ್ರಮ ಪಡೆಯುತಿದ್ದರು.
undefined
ರಾಜಬೀದಿಯಲ್ಲಿ ದೇವತೆಯ ತೇರು ಎಳೆಯುವಾಗ ತೇರಿನ ಕಳಸಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೆಟಲ್ ತೇರಿಗೆ ಕರೆಂಟ್ ಪ್ರವಹಿಸಿ ಸ್ಥಳದಲ್ಲೆ ಅದೇ ಗ್ರಾಮದ ಅರ್ಜುನ್ ಎಂಬ 20 ವರ್ಷದ ಯುವಕ ಮೃತಪಟ್ಟಿದ್ದಾನೆ. ತೇರಿನ ಗಾಲಿ ಹಿಡಿದುಕೊಂಡಿದ್ದು ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು ಆತನಿಗೆ ದಾವಣಗೆರೆಯ ಎಸ್‌ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇದೇ ಸಂದರ್ಭದಲ್ಲಿ ತೇರಿನ ಅಕ್ಕಪಕ್ಕದಲ್ಲಿದ್ದ 13 ಜನರು ಗಾಯಗೊಂಡಿದ್ದು, ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿ ಚೇತರಿಸಿಕೊಂಡಿದ್ದಾರೆ.
Davangere ವಿಶಿಷ್ಟ ರಥೋತ್ಸವ ಅಡ್ಡಪಲ್ಲಕ್ಕಿಗೆ ನೋಟಿನ ಸಿಂಗಾರ
ಘಟನೆಯಿಂದ ಇಡೀ ಗ್ರಾಮದಲ್ಲಿ ಸೂತಕದ ವಾತವರಣ: ಪ್ರತಿ ವರ್ಷ ಗ್ರಾಮ ದೇವತೆಯ ಜಾತ್ರೆ ಮಾಡುತೀದ್ದೇವು ಆದರೆ ಈ ಭಾರೀ ಈ ರೀತಿ ಅವಘಡ ನಡೆದು ಬಿಟ್ಟಿದೆ ಎಂದು ಇಡೀ ಗ್ರಾಮ ಅರ್ಜುನ್ ಸಾವಿಗೆ ಶೋಕ ವ್ಯಕ್ತಪಡಿಸಿದೆ. ಕಣ್ಮುಚ್ಚಿ ಬಿಡುವುದರೊಳಗೆ ಘಟನೆ ನಡೆದಿದ್ದು, ಎಲ್ಲಿ ಲೋಪವಾಯಿತು ಎಂದು ಗ್ರಾಮಸ್ಥರು ಧಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜಾತ್ರೆ ತೇರಿಗೆ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿರೋ ಎಲ್ಲರೂ ಗುಣಮುಖರಾಗಲಿ ಅಂತ ಗ್ರಾಮ ದೇವತೆಗೆ ಪ್ರಾರ್ಥಿಸಿದ್ದಾರೆ. ಮೃತ ಅರ್ಜುನ್ ಗೆ 22 ವರ್ಷ ಸ್ವಂತ ಊರು ಕರೆಕಟ್ಟೆ ಗ್ರಾಮದವನು. ಅವನು ಅಜ್ಜಿ ಮನೆಯಲ್ಲಿದ್ದು ಕಳೆದ 12 ವರ್ಷಗಳಿಂದ ಇಲ್ಲೇ ಇದ್ದ. ಅರ್ಜುನ್ ತಾಯಿ ಅಜ್ಜಿ ಒಬ್ಬ ಸಹೋದರ ಮಾತ್ರ ಇದ್ದು ಕಡುಬಡತನದಲ್ಲಿರುವ ಕುಟುಂಬಕ್ಕೆ ಧಿಕ್ಕು ತೋಚದಂತಾಗಿದೆ.
ಘಟನೆಗೆ ಕಾರಣ ಬೇಸಿಗೆಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿ: ಬೆಳಿಗ್ಗೆ 7 ಗಂಟೆಗೆ ತೇರು ರಾಜಬೀದಿಯಲ್ಲಿ ಸಾಗುತ್ತಿತ್ತು. ಅದು 11 ಕೆ ವಿ ಲೈನ್ ಆಗಿದ್ದು, ತೇರು ಹರಿಯುವ ವೇಳೆ ಕರೆಂಟ್ ಇರಲಿಲ್ಲ. ಆದರೆ ತೇರು ಸಂಪೂರ್ಣ ಮೆಟಲ್ ಆಗಿದ್ದು, ಜೋತು ಬಿದ್ದ ತಂತಿ ಸ್ಪರ್ಶಿಸುತ್ತಲೇ ನಾಲ್ಕು ಗಾಲಿ ಹಿಡಿದುಕೊಂಡಿದ್ದ ಯುವಕರು ವಿಲ ವಿಲ ಒದ್ದಾಡಿದ್ದಾರೆ. ಘಟನೆಗೆ ಬೇಸಿಗೆ ಕಾಲದಲ್ಲಿ ವಿದ್ಯುತ್ ತಂತಿಗಳು ಕೆಳಗಡೆ ಇಳಿದಿರೋದೆ ಕಾರಣ ಎನ್ನಲಾಗ್ತಿದೆ. ತೇರು ಸಾಗುವ ಮಾರ್ಗದಲ್ಲಿ ತಂತಿ ಕೆಳಕ್ಕೆ ಜೋತು ಬಿದ್ದಿದ್ದರಿಂದ ಅದರ ಅನಾಹುತವನ್ನು ಯಾರು ಯೋಚಿಸಿರಲಿಲ್ಲ.
Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!
ಅರ್ಜುನ್ ಸಾವನ್ನಪ್ಪುತ್ತಲೇ ಎಲ್ಲರ ಬಾಯಲ್ಲು ಒಂದೇ ಮಾತು ಎಂತಹ ಅನಾಹುತ ಆಯಿತು ಹೀಗಾಗಬಾರದಿತ್ತು ಎಂಬುದು. ಜಾತ್ರೆಯಿಂದ ಸಂಭ್ರಮ ತುಂಬಿರಬೇಕಾದ ಊರಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸಾಗರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಊರಲ್ಲಿ ಜಾತ್ರೆ ಮಾಡುವಾಗ ಜನರು ಬೆಸ್ಕಾಂ ಸಂಬಂಧಪಟ್ಟವರು ಎಚ್ಚರಿಕೆಯಿಂದ ಇದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಜಾತ್ರೆಯ ಸುಗ್ಗಿ ಸಂಭ್ರಮದಲ್ಲಿರುವ ಇತರ ಗ್ರಾಮಸ್ಥರಿಗೆ ಇದು ಪಾಠವಾಗಬೇಕಿದೆ.