
ಬೆಂಗಳೂರು(ಮಾ.12): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಬಹುಕೋಟಿ ನಿವೇಶನ ಅಕ್ರಮ ಭಾರೆ ಪ್ರಕರಣ ಸಂಬಂಧ ಬಿಡಿಎ ಅಧೀಕ್ಷಕಿ ಸೇರಿದಂತೆ ಆರು ಮಂದಿಯನ್ನು ಶೇಷಾದ್ರಿಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest). ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ.
ಬಿಡಿಎ ಅಧೀಕ್ಷಕಿ ಎಚ್.ಡಿ.ಕಮಲಮ್ಮ, ನಿವೃತ್ತ ನೌಕರೆ ಮಂಜುಳಾ ಬಾಯಿ, ಮಧ್ಯವರ್ತಿಗಳಾದ ಎಚ್‌ಬಿಆರ್ ಲೇಔಟ್‌ನ ಕೃಷ್ಣೋಜಿರಾವ್, ಮೈಸೂರಿನ ಪ್ರಕಾಶ್, ರಾಜಾಜಿನಗರದ ಗೌಸ್ ಖಾನ್, ಸೈಯದ್ ಮೋಸುದ್ದೀನ್ ಬಂಧಿತರು. ಆರೋಪಿಗಳಿಂದ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನು ಕೆಲವು ಬಿಡಿಎ ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಪತ್ತೆಗೆ ಇನ್ಸ್‌ಪೆಕ್ಟರ್ ಎಂ.ಎಸ್.ರವಿ ನೇತೃತ್ವದ ತಂಡ ಕಾರ್ಯಾಚರಣೆ ಮುಂದುವರೆಸಿದೆ.
ಬೆಂಗಳೂರಿನ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ 2041 ಸಿದ್ಧಪಡಿಸುವ ಬಿಡಿಎ ನಿರ್ಧಾರಕ್ಕೆ ತೀವ್ರ ವಿರೋಧ!
ಕೆಂಗೇರಿಯ ವಿಶ್ವೇಶ್ವರಯ್ಯ ಹಾಗೂ ಬಾಣಸವಾಡಿ ಸಮೀಪದ ಎಚ್‌ಬಿಆರ್ ಬಡಾವಣೆಗಳಲ್ಲಿ ಸುಮಾರು ಕೋಟ್ಯಂತರ ರು. ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ಆರೋಪಿಗಳು(Accused) ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಡಿಎನಲ್ಲಿ ಅಧೀಕ್ಷಕಿ ಹುದ್ದೆಯಲ್ಲಿರುವ ಕಮಲಮ್ಮ ಅವರಿಗೆ ಹಲವು ವರ್ಷಗಳಿಂದ ಅದೇ ವಿಭಾಗದ ಕೇಸ್ ವರ್ಕರ್ ಆಗಿ ನಿವೃತ್ತರಾಗಿದ್ದ ಮಂಜುಳಾ ಬಾಯಿ ಹಾಗೂ ಇನ್ನುಳಿದ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಜತೆ ಆತ್ಮೀಯತೆ ಇತ್ತು. ಈ ಸ್ನೇಹದಲ್ಲೇ ಹಣದಾಸೆಗೆ ಮಧ್ಯವರ್ತಿಗಳ ಜತೆ ಸೇರಿ ಬಿಡಿಎಗೆ ಅವರು ವಂಚಿಸಿದ್ದಾರೆ. ಬಿಡಿಎ ಅಭಿವೃದ್ಧಿಪಡಿಸಿದ್ದ ಕೆಂಗೇರಿಯ ವಿಶ್ವೇಶ್ವರಯ್ಯ ಮತ್ತು ಎಚ್‌ಬಿಆರ್ ಬಡಾವಣೆಗಳಲ್ಲಿ 14 ನಿವೇಶನಗಳು(Sites) ಜನರಿಗೆ ಮಂಜೂರಾಗಿವೆ ಎಂದು ನಕಲಿ ದಾಖಲೆಗಳನ್ನು(Fake Documents) ಆರೋಪಿಗಳು ಸೃಷ್ಟಿಸಿದ್ದರು. ಬಳಿಕ ಈ ದಾಖಲೆಗಳನ್ನು ಬಳಸಿಕೊಂಡು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಜನರಿಗೆ ಮಾರಾಟ ಮಾಡಿ ಹಣ ಸಂಪಾದಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ಕರೆ ಆಧರಿಸಿ ಬಲೆ
ಈ ಲೇಔಟ್‌ಗಳಲ್ಲಿ ತಲಾ 30*40 ನಿವೇಶನಕ್ಕೆ 70 ರಿಂದ 80 ಲಕ್ಷ ಹಾಗೂ 60*40 ನಿವೇಶನಕ್ಕೆ 1.5ಯಿಂದ 1.8 ಕೋಟಿ ರು. ವರೆಗೆ ಅಕ್ರಮವಾಗಿ ಪರಭಾರೆ ಮಾಡಿದ್ದರು. ಈ ಅಕ್ರಮವು 2015-18ರ ಅವಧಿಯಲ್ಲಿ ನಡೆದಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಭೂ ಹಗರಣ(Land Scam) ಬೆಳಕಿಗೆ ಬಂದ ನಂತರ ನಗರ ತೊರೆದ ಕಮಲಮ್ಮ ಅವರು, ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತುಮಕೂರು(Tumakuru) ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿರುವ ಹುಟ್ಟೂರಿಗೆ ಹೋಗಿ ತಲೆಮರೆಸಿಕೊಂಡಿದ್ದರೆ, ಸೇವೆಯಿಂದ ನಿವೃತ್ತರಾಗಿದ್ದ ಮಂಜುಳಾ ಬಾಯಿ ತಪ್ಪಿಸಿಕೊಂಡಿದ್ದರು. ಕೊನೆಗೆ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಅವರಿಬ್ಬರನ್ನು ಪತ್ತೆ ಹಚ್ಚಲಾಯಿತು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
BDA ಬ್ರಹ್ಮಾಂಡ ಭ್ರಷ್ಟಾಚಾರ ಬಯಲು: 300 ಅಲ್ಲ, 1,500 ಕೋಟಿ ಅಕ್ರಮ ಪತ್ತೆ!
60 ಬಿಡಿಎ ಅಧಿಕಾರಿಗಳ ತನಿಖೆಗೆ ಅಸ್ತು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(BDA) ನಡೆದಿರುವ ಕೋಟ್ಯಂತರ ರು. ಅವ್ಯವಹಾರ ಪ್ರಕರಣ ಸಂಬಂಧ 60 ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ತನಿಖೆ(Probe) ನಡೆಸಲು ನಗರಾಭಿವೃದ್ಧಿ ಇಲಾಖೆಯು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ACB) ಅನುಮತಿ ನೀಡಿದೆ.
ಮೂಲೆ ನಿವೇಶನ ಅಕ್ರಮ ಪರಭಾರೆ, ನಕಲಿ ಫಲಾನುಭವಿಗಳು, ಬದಲಿ ನಿವೇಶನ(Site) ಸೇರಿದಂತೆ ಬೇರೆ ಬೇರೆ ವಿಧದಲ್ಲಿ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಅಕ್ರಮ(Scam) ಎಸಗಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಎಸಿಬಿ ಅಧಿಕಾರಿಗಳು ಬಿಡಿಎ ಕೇಂದ್ರ ಕಚೇರಿ ಮತ್ತು ನಗರದ ವಿವಿಧೆಡೆ ಇರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಕಡತಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಕೋಟ್ಯಂತರ ರು. ಅಕ್ರಮ ಎಸಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿ, ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರವಾಗಿರುವ ನಗರಾಭಿವೃದ್ಧಿ ಇಲಾಖೆಗೆ(Department of Urban Development) ಪತ್ರ ಬರೆಯಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ