ಪರಸ್ತ್ರಿಯೊಂದೊಂದಿಗೆ ರಾಸಲೀಲೆ ಜೊತೆಗೆ ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತ ಆನಂದಪಡುತ್ತಿದ್ದ ಕಾಮುಕ ಶಿಕ್ಷಕನ ವಿಡಿಯೋ ವೈರಲ್ ಅಗಿದೆ. ಮೊಬೈಲ್ನ ಮೆಮೋರಿ ಕಾರ್ಡ್ ತೆಗೆದಾಗ ಶಿಕ್ಷಕನ ಕರ್ಮಕಾಂಡ ಹೊರಬಂದಿದೆ.
ರಾಯಚೂರು/ಕೊಪ್ಪಳ, (ಜುಲೈ.02): ಶಿಕ್ಷಕ-ಮಕ್ಕಳ ಸಂಬಂಧವು ಮಗುವಿನ ಸರ್ವತೋಮುಖ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ಭವಿಷ್ಯದ ವೃತ್ತಿಪರತೆ, ವೈಯಕ್ತಿಕ ಜೀವನದಲ್ಲಿ ಯಶಸ್ಸು ಮತ್ತು ಶಿಸ್ತನ್ನು ಇದು ಕಲಿಸುತ್ತದೆ. ಇದಕ್ಕಾಗಿ ಮಗು ಮತ್ತು ಶಿಕ್ಷಕರ ನಡುವೆ ಪರಸ್ಪರ ಗೌರವ ಮತ್ತು ವಿಶ್ವಾಸದ ವಾತಾವರಣ ಇರಬೇಕಾಗುತ್ತದೆ.ಆದ್ರೆ, ಇಲ್ಲೊಬ್ಬ ಶಿಕ್ಷಕ, ಶಿಕ್ಷಕರಿಗೆ ಅವಮಾನಿಸುವಂತ ಕೃತ್ಯ ಮಾಡಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಶಿಕ್ಷಕ ಆಟ- ಪಾಠದ ನೆಪದಲ್ಲಿ ಮಕ್ಕಳನ್ನು ಮನೆಗೆ ಕರೆಸಿಯಿಸಿಕೊಂಡು ಮಾಡಬಾರದ್ದನ್ನು ಮಾಡಿದ್ದಾನೆ. ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಅವರ ಹತ್ತಿರ ಹೋಗುತ್ತಿದ್ದ ಈತ, ಅವರ ಗುಪ್ತಾಂಗ ಮುಟ್ಟಿ ದೈಹಿಕ ಕಿರುಕುಳ ಕೊಡುತ್ತಿದ್ದ. ಮಕ್ಕಳಿಂದಲೇ ಬಟ್ಟೆ ಬಿಚ್ಚಿಸಿ ವಿಕೃತ ಆನಂದ ಪಡೆಯುತ್ತಿದ್ದನಂತೆ. ಇನ್ನು ಮಹಿಳೆಯರನ್ನ ಪರಿಚಯಿಸಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಈತ, ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯನ್ನ ಲೈಂಗಿಕವಾಗಿ ಬಳಿಸಿಕೊಂಡಿದ್ದನ್ನ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾನೆ.
ಕಚೇರಿಯಲ್ಲೇ PDO, ಗ್ರಾ.ಪಂ ಸದಸ್ಯನ ಲವ್ವಿಡವ್ವಿ : Video ವೈರಲ್
ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಕೆಸಲ ಮಾಡುತ್ತಿದ್ದ ಶಿಕ್ಷಕ ಅಜರುದ್ಧೀನ್ ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸಂಜೆ ಟ್ಯೂಶನ್ ಹೇಳುವ ನೆಪದಲ್ಲಿ ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತ ಆನಂದ ಪಡೆಯುತ್ತಿದ್ದ. ಅಲ್ಲದೇ ನೆರೆ-ಮನೆಯ ಕೆಲ ಮಹಿಳೆಯರನ್ನೂ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಪರಸ್ತ್ರೀಯರ ಜತೆಗಿನ ಕಾಮದಾಟದ ದೃಶ್ಯವನ್ನ ವಿಡಿಯೋ ಮಾಡಿಕೊಂಡಿದ್ದ. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಅಜರುದ್ಧೀನ್ ಕಾಮಪುರಾಣ ಬಟಾಬಯಲಾಗಿದೆ. ಸದ್ಯ ಕೆಲಸದಿಂದ ಅಮಾನತು ಮಾಡಲಾಗಿದೆ. ಈತನ ಕಾಮದಾಟದ ವಿಚಾರ ಬಯಲಾಗುತ್ತಿದ್ದಂತೆ ಸಿಟ್ಟಿಗೆದ್ದ ಸಾರ್ವಜನಿಕರು ಶಿಕ್ಷಕನ ವಿರುದ್ಧ ರೊಚ್ಚಿಗೆದಿದ್ದು, ಶಾಲೆಯತ್ತ ದೌಡಾಯಿಸಿದ್ದಾರೆ.
ಮೆಮೋರಿ ಕಾರ್ಡ್ ತೆಗೆದಾಗ ಶಿಕ್ಷಕನ ಕರ್ಮಕಾಂಡ ಬಯಲು
ಪ್ರತಿನಿತ್ಯ ಮಕ್ಕಳೊಂದಿಗೆ ಆಟವಾಡುವ ನೆಪದಲ್ಲಿ ತಡರಾತ್ರಿವರೆಗೂ ಕಾಲಕಳೆಯುತ್ತಿದ್ದ ಈ ಶಿಕ್ಷಕ, ಮಗುವೊಂದರ ತಲೆಯ ಮೇಲೆ ಗ್ಲಾಸ್ ಇಟ್ಟು, ಎರಡೂ ಕೈಗಳನ್ನು ಮೇಲೆತ್ತಲು ಈತ ತಿಳಿಸಿದ್ದು, ಮಗು ಶಿಕ್ಷಕ ಹೇಳಿದಂತೆ ಮಾಡುವಾಗ ಬೇರೆ ಮಕ್ಕಳಿಂದ ಚಡ್ಡಿ ಕಳಚಿಸುತ್ತಾನೆ. ಬಳಿಕ ಕಟ್ಟಿಗೆಯಿಂದ ಗುಪ್ತಾಂಗಕ್ಕೆ ತಿವಿದು, ವಿಕೃತ ಆನಂದ ಪಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಗು ಅತ್ತರೂ ಬಿಡದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ, ಈತ ಬೇರೆ ಬೇರೆ ಮಹಿಳೆಯರೊಂದಿಗಿನ ಕಾಮದಾಟವನ್ನು ಮೊಬೈಲ್ನಲ್ಲಿ ಸೆರೆ ಹಿಡಿದ್ದಾನೆ. ಇತ್ತೀಚೆಗೆ ಶಿಕ್ಷಕನ ಮೊಬೈಲ್ ಕಳೆದಿದ್ದು ಯಾರದೋ ಕೈಗೆ ದೊರೆತಿದೆ. ಮೊಬೈಲ್ನ ಮೆಮೋರಿ ಕಾರ್ಡ್ ತೆಗೆದಾಗ ಶಿಕ್ಷಕನ ರಾಸಲೀಲೆಗಳು ಬಹಿರಂಗವಾಗಿವೆ.
ಮಹಿಳೆಯೊಂದಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ, ಚುಂಬನದ ಫೋಟೋಗಳು ವೈರಲ್
ಶಿಕ್ಷಕನ ವಿರುದ್ಧ ಕೇಸ್ ಬುಕ್
ಯೆಸ್..ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದೇ ತಡ ಕಾಮಿ ಶಿಕ್ಷಕ ಅಜರುದ್ದೀನ್ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸ್ವತಃ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ನೊಂದ ಮಹಿಳೆ ದೂರು ನೀಡಿದ್ದು, ಈಗಾಗಲೇ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಬಂಧನಕ್ಕೆ ವಿಶೇಣ ತಂಡ ರಚನೆ ಮಾಡಲಾಗಿದ್ದು, ಕೂಡಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗವುದು. ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಶಿಕ್ಷಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಲೈಂಗಿಕವಾಗಿ ಬಳಸಿಕೊಂಡ ಕೆಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ. ಇದರಿಂದ ಮಹಿಳೆ ನೊಂದಿದ್ದಾರೆ. ಅವರೇ ಬಂದು ದೂರು ಕೊಟ್ಟಿದ್ದಾರೆ. ಶಿಕ್ಷಕ ಅಜರುದ್ದೀನ್ ವಿರುದ್ದ 376 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ನಾವು ಕೂಡಲೇ ಅರೋಪಿಯನ್ನು ಅರೆಸ್ಟ್ ಮಾಡ್ತೀವಿ ಎಂದು ಹೇಳಿದರು.