
ತುಮಕೂರು, (ಜುಲೈ.02) : ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯನೊಬ್ಬ ಪಿಡಿಓ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಚಿವ ಮಾಧುಸ್ವಾಮಿ ಬೆಂಬಲಿಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ಪ್ರಸನ್ನ ಕುಮಾರ್, ಜೆಸಿ ಪುರ ಪಿಡಿಓ ಗ್ರಾಪಂ ಕಚೇರಿಯಲ್ಲೇ ಲೇಡಿ ಪಿಡಿಓ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಪದೇ ಪದೇ ಪಿಡಿಓ ಬಳಿ ಹೋಗಿ ಹಿಡಿದುಕೊಳ್ಳುವ ಪ್ರಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಆ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್
ಗ್ರಾಮಪಂಚಾಯ್ತಿ ಕಚೇರಿಯನ್ನೇ ಸದಸ್ಯ ಕುಮಾರ ಪಿಡಿಓ ಕೋಮಲ ಅವರ ಬಳಿಗೆ ಹೋಗಿ ಮುಟುವುದಕ್ಕೆ ಹೋಗುವುದು ಹೀಗೆ ಅಸಭ್ಯ ವರ್ತನೆ ಮಾಡಿದ್ದಾನೆ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಸದಸ್ಯತ್ವ ರದ್ದು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಲವ್ವಿಡವ್ವಿ ಜೊತೆಗೆ ಪಿಡಿಓ ಲಂಚ ಬಾಕತನದ ಆಡಿಯೋ ವೈರಲ್
ಸದಸ್ಯನ ಜೊತೆ ಪ್ರೇಮಪ್ರಣಯದಾಟದ ಜೊತೆಗೆ PDO ಲಂಚ ಬಾಕತನದ ಆಡಿಯೋ ವೈರಲ್ ಆಗಿದೆ. ಕಚೇರಿ ನೌಕರರ ಸಂಬಳ ನೀಡಲು ಐದು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ.ಐಓಗೆ 500 ಕೊಡಿ ನನಗೆ 5000 ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಆಡಿಯೋ ಸಹ ವೈರಲ್ ಆಗಿದೆ.
ಇನ್ನು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಧುಗಿರಿಯ ಮಧು ಕಾಮಪುರಾಣ ಬಟಾಬಯಲಾಗಿದೆ. ಮಹಿಳೆಯ ಜೊತೆಗಿನ ಲವ್ವಿಡವ್ವಿ ಫೋಟೋಗಳು ವೈರಲ್ ಆಗಿವೆ. ಮಧುಗಿರಿ ತಾಲ್ಲೂಕಿನ ಬೇಡತ್ತೂರು ಗ್ರಾಮದ ಸದಸ್ಯೆ ಮಂಜುಳ ಜೊತೆಗೆ ಎಂಜಾಯ್ ಮಾಡುತ್ತಿರುವುದು ಹಾಗೂ ಇಬ್ಬರ ಚುಂಬನದ ಫೋಟೋಗಳು ಹರಿದಾಡುತ್ತಿವೆ.
ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆದುಕೊಂಡು ಹೋಗಿ ಎಂಜಾಯ್ ಮಾಡಿದ್ದಾರೆ. ಫೋಟೋ ವೈರಲ್ ಆದ ತಕ್ಷಣ, ಮಧು ಮಧುಗಿರಿಯಿಂದ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ