ಕ್ರೈಂಸಿಟಿ ಆಗ್ತಿದ್ಯಾ ಸಿಲ್ಕ್‌ ಸಿಟಿ: ಯುವಕನ ಮೇಲೆ ಲಾಂಗ್‌ನಿಂದ ಹಲ್ಲೆಗೆ ಯತ್ನ video viral

By Anusha Kb  |  First Published Jul 16, 2022, 12:26 AM IST

ರೇಷ್ಮೆನಗರಿ ರಾಮನಗರದಲ್ಲಿ ಇತ್ತೀಚಿಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಶಾಂತವಿದ್ದ ರಾಮನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಲಾಂಗ್‌ಗಳು ಜಳಪಿಸಲು ಶುರುವಾಗಿವೆ. ಇತ್ತೀಚಿಗೆ ಯುವಕನೊಬ್ಬನ ಮೇಲೆ ಪುಡಿ ರೌಡಿಯೊಬ್ಬ ಅಟ್ಟಹಾಸ ಮೆರೆಯಲು ಮುಂದಾಗಿದ್ದು, ಲಾಂಗ್ ಬೀಸುತ್ತಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ: ರೇಷ್ಮೆನಗರಿ ರಾಮನಗರದಲ್ಲಿ ಇತ್ತೀಚಿಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಶಾಂತವಿದ್ದ ರಾಮನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಲಾಂಗ್‌ಗಳು ಜಳಪಿಸಲು ಶುರುವಾಗಿವೆ. ಇತ್ತೀಚಿಗೆ ಯುವಕನೊಬ್ಬನ ಮೇಲೆ ಪುಡಿ ರೌಡಿಯೊಬ್ಬ ಅಟ್ಟಹಾಸ ಮೆರೆಯಲು ಮುಂದಾಗಿದ್ದು, ಲಾಂಗ್ ಬೀಸುತ್ತಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  
     
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ರೇಷ್ಮೆನಗರಿ ರಾಮನಗರದಲ್ಲಿ ಇತ್ತೀಚಿಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಲಾಂಗ್ ಹಾಗೂ ಮಚ್ಚುಗಳು ಹೊರ ಬರುತ್ತಿವೆ. ಈ ವಿಚಾರ ರಾಮನಗರ ಜನರನ್ನು ಆತಂಕಕ್ಕೆ ದೂಡಿದೆ. ರಾಮನಗರದ ದ್ಯಾವರಸೇಗೌಡನದೊಡ್ಡಿ ಗ್ರಾಮದ ಕಾರ್ತಿಕ್ ಎಂಬಾತನ ಮೇಲೆ ರಾಮನಗರದ ಮಾರುತಿನಗರದ ಯುವಕ ತಿರುಮಲ ಎಂಬಾತ ಏಕಾಏಕಿ ಲಾಂಗ್ ತೆಗೆದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಕಾರ್ತಿಕ್ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.

ರಾಮನಗರದ ದ್ಯಾವರಸೇಗೌಡನದೊಡ್ಡಿ ಗ್ರಾಮದ ಕಾರ್ತಿಕ್ ಹಾಗೂ ಮಲ್ಲಿಕಾರ್ಜುನ್ ಎಂಬುವವರ ನಡುವೆ ರಾಮನಗರದ ಗೌಸಿಯಾ ಕಾಲೇಜು ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು ಈ ವೇಳೆ ಮಾತಿನ ಚಕಮಕಿ ಕೂಡ ನಡೆದಿತ್ತು. ಈ ವೇಳೆ ಮಲ್ಲಿಕಾರ್ಜುನ್ ಎಂಬಾತನ ಶಿಷ್ಯ, ತಿರುಮಲ ಎಂಬಾತ ಏಕಾಏಕಿ ಶರ್ಟ್ ನ ಹಿಂಭಾಗದಲ್ಲಿ ಇಟ್ಟುಕೊಂಡಿದ್ದ ಲಾಂಗ್ ತೆಗೆದು, ಕಾರ್ತಿಕ್ ಎಂಬಾತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಕ್ಷಣಾರ್ಧದಲ್ಲಿ ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ. ಇನ್ನು ಈ ಎಲ್ಲ ಘಟಾನವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಪ್ರಕರಣ ಸಂಬಂಧ ತಿರುಮಲ ಎಂಬಾತನನ್ನು ರಾಮನಗರ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.  

Tap to resize

Latest Videos

ರಾಮನಗರದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಗೃಹಣಿಯ ಕೊಲೆ

ಈ ಹಿಂದೆ ನಡೆದ ಗಲಾಟೆ ಸಂಬಂಧ ಕಾರ್ತಿಕ್ ರಾಮನಗರದ ಪುರ ಠಾಣೆಯಲ್ಲಿ ತಿರುಮಲ ಹಾಗೂ ಮಲ್ಲಿಕಾರ್ಜುನ್ ಮೇಲೆ ದೂರು ನೀಡಿದ್ದ. ಆದರೆ
ದೂರು ನೀಡಿದ ನಂತರ ಮಲ್ಲಿಕಾರ್ಜುನ್ ಹಾಗೂ ತಿರುಮಲ ಎಂಬುವವರು ಎಸ್ಕೇಪ್ ಆಗಿದ್ರು. ನಿನ್ನೆ (ಜು.15)ಅವರು ಬಂದಿರುವ ವಿಚಾರ ತಿಳಿದು ತಿರುಮಲ ಹಾಗೂ ಮಲ್ಲಿಕಾರ್ಜುನ್ ಎಂಬಾತನನನ್ನು ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ನಾಲ್ಕು ಗೂಸಾ ಸಹ ನೀಡಿದ್ದಾರೆ. ಇದೇ ವೇಳೆ ದೂರು ನೀಡಿದ್ದ ಕಾರ್ತಿಕ್ ಎಂಬಾತನನ್ನು ಸಹ ಕರೆಸಿದ ಪೊಲೀಸರು ಠಾಣೆಯಲ್ಲೇ ತಿರುಮಲ ಹಾಗೂ ಮಲ್ಲಿಕಾರ್ಜುನ್ ಮುಂದೆ ಆತನಿಗೂ ಥಳಿಸಿದರಂತೆ. ಹೀಗಾಗಿ ಇಂದು (ಜು.16) ಕಾಂಗ್ರೆಸ್ ಕಾರ್ಯಕರ್ತರು ರಾಮನಗರ ಟೌನ್ ಠಾಣೆ ಪಿಎಸ್ ಐ ಮುರಳಿಧರ್ ವಿರುದ್ದ ಠಾಣೆಯ ಮುಂಭಾಗವೇ ಪ್ರತಿಭಟನೆ ನಡೆಸಿ, ಘೋಷಣೆಗಳನ್ನ ಕೂಗಿ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.

Ramanagara: ಬಾಂಗ್ಲಾ ಪ್ರಜೆಗಳ ಬಂಧನ: ಜನರಲ್ಲಿ ಹೆಚ್ಚಿದ ಆತಂಕ

ಒಟ್ಟಾರೆ ಶಾಂತವಿರೋ ರಾಮನಗರದಲ್ಲಿ ಇತ್ತೀಚೆಗೆ ಪುಡಿರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಕೂಡ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಮುಂಜಾಗ್ರತ ಕ್ರಮ ವಹಿಸಬೇಕಿದೆ.

click me!