ಮಂಗಳೂರಿನ 'ಧರ್ಮ ಚಾವಡಿ'ಯ  ಶ್ರೀ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ ಆತ್ಮಹತ್ಯೆ

By Manjunath Nayak  |  First Published Jul 22, 2022, 6:17 PM IST

Dharmachavadi Mutt Swamiji Suicide: ಮಂಗಳೂರಿನ  'ಧರ್ಮ ಚಾವಡಿ' ಮಠದ ಶ್ರೀ ಶ್ರೀ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ ಶುಕ್ರವಾರ ಮಠದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ


ಮಂಗಳೂರು (ಜು. 22): ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಪಂಚಾಯತ್‌ನ  ಕೊಳಂಬೆ ಗ್ರಾಮದ ತಲಕಲ ಶೆಟ್ಟಿಪಾಲ್ ಎಂಬಲ್ಲಿಯ 'ಧರ್ಮ ಚಾವಡಿ' ಮಠದ ಶ್ರೀ ಶ್ರೀ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ (50) ಶುಕ್ರವಾರ ಮಠದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ  ಸ್ವಾಮೀಜಿಯ ಪತ್ನಿ ಪ್ರಭಾ ಶೆಟ್ಟಿ(46) ಬಜಪೆ ಪೋಲೀಸರಿಗೆ ದೂರು ನೀಡಿದ್ದಾರೆ. ದಂಪತಿಗೆ ಪುತ್ರಿಯೊಬ್ಬಳಿದ್ದಾಳೆ. ಹೋಟೆಲ್ ಉದ್ಯಮ ನಡೆಸುತ್ತಿದ್ದ ದೇವಿಪ್ರಸಾದ್ ಶೆಟ್ಟಿ ಅವರು ಸುಮಾರು 5 ವರ್ಷದ ಹಿಂದೆ ಸಂಸಾರವನ್ನು ತ್ಯಜಿಸಿ ಸನ್ಯಾಸಿ ದೀಕ್ಷೆ ಪಡೆದುಕೊಂಡ ಬಳಿಕ ತಲಕಲದಲ್ಲಿ ತಮ್ಮ ವಿಶಾಲವಾದ ಜಾಗದಲ್ಲಿ ಧರ್ಮ ಚಾವಡಿ ಸ್ಥಾಪಿಸಿ ಮಠದಲ್ಲೇ ವಾಸಿಸುತ್ತಿದ್ದರು. 

ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ಬಳಿಕ ಸ್ವಾಮೀಜಿಯವರು ಕೋಣೆಯೊಳಗಡೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾಣಿಸಿರುವ ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tap to resize

Latest Videos

ಇವರ ಪೂರ್ವಾಶ್ರಮದ ಹೆಸರು ದೇವಿಪ್ರಸಾದ್ ಶೆಟ್ಟಿ ಎಂಬುದಾಗಿದ್ದು, ಇವರು ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಸಂಸಾರದಲ್ಲಿ ವಿರಸ, ವಿರಕ್ತಿ ಹೊಂದಿ ಬಳಿಕ ಧರ್ಮ ಚಾವಡಿ ಎಂಬ ಸಂಸ್ಥೆಯನ್ನು ನಿರ್ಮಿಸಿ ಸನ್ಯಾಾಸ ದೀಕ್ಷೆ ಸ್ವೀಕರಿಸಿದ್ದರು. ಧರ್ಮಚಾವಡಿ ಸಂಸ್ಥೆ ಅಪಾರ ಪ್ರಮಾಣದ ಆಸ್ತಿ ಹೊಂದಿದೆ ಎನ್ನಲಾಗಿದೆ. ಇವರ ಪೂರ್ವಾಶ್ರಮದ ಪತ್ನಿ ಮತ್ತು ತಾಯಿ ಅಲ್ಲೇ ಸಮೀಪದಲ್ಲಿರುವ ಪೂರ್ವಾಶ್ರಮದ ಮನೆಯಲ್ಲಿ ವಾಸಿಸುತ್ತಿದ್ದರು. ಪುತ್ರಿ ವಿದೇಶದಲ್ಲಿ ನೆಲೆಸಿದ್ದಾಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಕ್ರಿಕೆಟ್ ತಂಡದಿಂದ ಕೈ ಬಿಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ, ಸೆಲ್ಫಿ ವಿಡಿಯೋ ಲಭ್ಯ

ಕಳೆದ ವರ್ಷ ಧರ್ಮ ಚಾವಡಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಅದ್ದೂರಿಯ ಪೂಜಾ ಕಾರ್ಯಕ್ರಮವೊಂದು ನಡೆದಿತ್ತು. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯವರು ಮಠಕ್ಕೆ ಬರುವ ಭಕ್ತರ ಭವಿಷ್ಯ ನುಡಿಯುತ್ತಿದ್ದು, ಹೆಚ್ಚು ಜನಪ್ರಿಯರಾಗಿದ್ದರು ಎನ್ನಲಾಗಿದ್ದು, ಧರ್ಮ ಚಾವಡಿಯ ಹೆಸರಲ್ಲಿ ಅಪಾರ ಪ್ರಮಾಣದ ಆಸ್ತಿ ಇದೆ ಎನ್ನಲಾಗಿದೆ. ವ್ಯವಹಾರಿಕವಾಗಿ ಜಿಗುಪ್ಸೆಗೊಂಡು ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಸ್ಪಷ್ಟ ಕಾರಣ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. 

click me!