ಬಾಳೆಹೊನ್ನೂರು (ಫೆ.21) : ಅಂಗನವಾಡಿ ಸಹಾಯಕಿಯೊಂದಿಗೆ ವಾಗ್ವಾದದ ವೇಳೆ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸುತ್ತಿದ್ದಾಗ ಗುರಿ ತಪ್ಪಿ ಸಿಡಿದು ಬೈಕ್ ಸವಾರರಿಬ್ಬರಿಗೆ ತಗುಲಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮ(Bidare village)ದಲ್ಲಿ ಸೋಮವಾರ ನಡೆದಿದೆ.
ಬಿದರೆ ಗ್ರಾಮದ ಪ್ರವೀಣ್ (33), ಪ್ರಕಾಶ್ (30) ಮೃತ ಯುವಕರಾಗಿದ್ದಾರೆ. ಇದೇ ಗ್ರಾಮದ ರಮೇಶ್ ಎಂಬಾತ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಈತ ಮಾನಸಿಕ ಅಸ್ವಸ್ಥ(Mental illness) ಎಂದು ಹೇಳಲಾಗಿದೆ. ಆರೋಪಿ ರಮೇಶ್(Ramesh), ಗ್ರಾಮದ ಅಂಗನವಾಡಿ(Anganawadi)ಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಸಹಾಯಕಿ ಮಮತಾ ಅವರನ್ನು ದಾರಿಯಲ್ಲೇ ಅಡ್ಡಗಟ್ಟಿಕ್ಯಾತೆ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ರಮೇಶ್ ಅಲ್ಲೇ ಸಮೀಪದಲ್ಲಿದ್ದ ತನ್ನ ಮನೆಯಿಂದ ನಾಡಬಂದೂಕನ್ನು ತಂದು ಸಹಾಯಕಿಗೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆತನ ಗುರಿ ತಪ್ಪಿ ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಪ್ರವೀಣ್, ಪ್ರಕಾಶ್ ಎಂಬಿಬ್ಬರಿಗೆ ಗುಂಡು ತಗುಲಿದೆ, ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Wild elephant attack: ಕಡಬ: ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರ ಬಲಿ
ಬಾಳೆಹೊನ್ನೂರು ಠಾಣೆ(Balehonnuru police station)ಯಲ್ಲಿ ದೂರು ದಾಖಲಾಗಿದ್ದು, ಆರೋಪಿ ರಮೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಕೊಲೆ: ಮತ್ತಿಬ್ಬರ ಬಂಧನ
ಗೋಕಾಕ: ನಗರದ ಉದ್ಯಮಿ ರಾಜೇಶ/ಮುನ್ನಾ ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸ್ ಇಲಾಖೆ ಬಂಧಿಸಲು ಯಶಸ್ವಿಯಾಗಿದೆ.
ನಗರದ ಮೋಮಿನ್ ಗಲ್ಲಿಯ ವೆಲ್ಡಿಂಗ್ ವರ್ಕ್ ಮಾಡುವ ಮೋಯಿನ್ ಪಟೇಲ್(24) ಮತ್ತು ಲಕ್ಕಡ ಗಲ್ಲಿಯ ಟೈಲ್ಸ್ ಕೆಲಸ ಮಾಡುವ ಅಬುತಾಲ್ ಮೊಹ್ಮದ್ ಹನೀಫ್ ಮುಲ್ಲಾ(21) ಬಂಧಿತ ಆರೋಪಿಗಳು. ಇವರಿಬ್ಬರೂ ಈಗಾಗಲೇ ಬಂಧಿತರಾಗಿರುವ ಶಾಪಥ್ ತ್ರಾಸಗರನ ಗೆಳೆಯರು. ಸಿಟಿ ಕ್ಲಿನಿಕ್ ವೈದ್ಯ ಸಚೀನ ಶಿರಗಾಂವಿ, ಎರಡನೇ ಆರೋಪಿ ಸಿಟಿ ಆಸ್ಪತ್ರೆ ವೈದ್ಯ ಹುಕ್ಕೇರಿ ತಾಲೂಕು ಶಿರಢಾಣ ಮೂಲದ ಡಾ. ಶಿವಾನಂದ ಕಾಡಗೌಡ ಪಾಟೀಲ ಹಾಗೂ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಶಾಪಥ್ ಇರ್ಷಾದ್ ತ್ರಾಸಗರ ಇವರೆಲ್ಲರೂ ಸೇರಿ ನಗರÜ ಸಮೀಪದ ಯೋಗಿಕೊಳ್ಳದಲ್ಲಿ ಕೊಲೆ ಮಾಡಿದ್ದಾರೆ. ಕೊಲೆಗೈಯ್ಯುವ ನಾಲ್ಕು ದಿನದ ಶಾಪಥ್ .50 ಸಾವಿರ ಪಡೆದು ಮೂವರೂ ಹಂಚಿಕೊಂಡಿದ್ದರು. ಬಂಧಿತರಿಂದ .10ಸಾವಿರ ನಗದು ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
Bengaluru crime: ₹99 ಸಾವಿರ ಕೋಟಿಗೆ ಸೂಪರ್ ಟ್ಯಾಕ್ಸ್ ಹೆಸರಲ್ಲಿ ಉದ್ಯಮಿಗೆ ₹40 ಲಕ್ಷ ಟೋಪಿ!