ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್ ಸೊಸೆಗೆ ಮಕ್ಕಳಾಗಿಲ್ಲವೆಂದು ಕಿರುಕುಳ; ಕಾಟ ತಾಳಲಾರದೇ ನೇಣಿಗೆ ಶರಣಾದ್ಲು!

Published : Mar 31, 2024, 01:35 PM IST
ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್ ಸೊಸೆಗೆ ಮಕ್ಕಳಾಗಿಲ್ಲವೆಂದು ಕಿರುಕುಳ; ಕಾಟ ತಾಳಲಾರದೇ ನೇಣಿಗೆ ಶರಣಾದ್ಲು!

ಸಾರಾಂಶ

ತನಗೆ ದುಡಿಯುವ ಹೆಂಡತಿಯೇ ಬೇಕೆಂದು ಸಾಫ್ಟ್‌ವೇರ್ ಹುಡುಗಿ ಮದುವೆಯಾದ ಗಂಡ, ಆತನ ತಾಯಿಯೊಂದಿಗೆ ಸೇರಿಕೊಂಡು ಮಕ್ಕಳಾಗಿಲ್ಲವೆಂದು ಹೆಂಡತಿಗೆ ಕಿರುಕುಳ ನಿಡಿದ್ದಾನೆ. ಬೇಸತ್ತ ಪತ್ನಿ ನೇಣಿಗೆ ಶರಣಾಗಿದ್ದಾಳೆ.

ಶಿವಮೊಗ್ಗ (ಮಾ.31): ತನ್ನ ಮಗನಿಗೆ ದುಡಿಯುವ ಹುಡಿಗಿಯೇ ಬೇಕೆಂದು ಸಾಫ್ಟ್‌ವೇರ್ ಸೊಸೆಯನ್ನು ತಂದುಕೊಂಡ ಅತ್ತೆ, ನಿನಗೆ ಮಕ್ಕಳಾಗಿಲ್ಲ ಬಂಜೆ ಎಂದು ಹೀಯಾಳಿಸಿ ಹಿಂಸೆ ಕೊಟ್ಟಿದ್ದಾಳೆ. ಹಗಲು-ರಾತ್ರಿ ಮನೆಗಾಗಿ ಒತ್ತಡದಲ್ಲಿಯೇ 5 ವರ್ಷಗಳ ಕಾಲ ಕೆಲಸ ಮಾಡಿದ ಸೊಸೆ, ಮಕ್ಕಳಾಗಿಲ್ಲವೆಂದು ಕುಟುಂಬಸ್ಥರು ನೀಡುತ್ತಿದ್ದ ಕಿರುಕುಳ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಾಕ್ಷರತೆಗೇನೂ ಕಡಿಮೆಯಿಲ್ಲ. ಎಲ್ಲರೂ ಸುಶಿಕ್ಷಿತರಾಗಿದ್ದರೂ ಕುಟುಂಬವೆಂದು ಬಂದಾಗ ಅತ್ತೆ-ಸೊಸೆ ಕಾದಾಟಕ್ಕೆ ಕೊನೆ ಹಾಕಲಾಗಿಲ್ಲ. ಶಿವಮೊಗ್ಗದ ಗಾಡಿ ಕೊಪ್ಪದ ಪೊಲೀಸ್ ಲೇಔಟ್ ನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಅಶ್ವಿನಿ (31) ಮೃತ ದುರ್ದೈವಿ ಆಗಿದ್ದಾಳೆ. ಕೌಟುಂಬಿಕ ಸಂಗತಿಗಳಿಂದ ಬೇಸತ್ತ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾಳೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ರಾಜಕೀಯ ನಾಯಕನ ಹೆಂಡತಿಗೆ ಇಬ್ಬಿಬ್ಬರು ಬಾಯ್ ಫ್ರೆಂಡ್ಸ್‌; ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಂದುಬಿಟ್ಟಳು!

ಮೃತ ಮಹಿಳೆ ಶ್ವೇತಾ ಕಳೆದ 5 ವರ್ಷಗಳ ಹಿಂದೆ ಅಭಿಲಾಶ್‌ ಎಂಬುವವರನ್ನು ಮದುವೆಯಾಗಿದ್ದರು. ಇಷ್ಟು ವರ್ಷಗಳು ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದು ಅವರು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಆಕೆಯ ಅತ್ತೆಯ ಮನೆಯವರು ಹೇಳುತ್ತಿದ್ದಾರೆ. ಆದರೆ, ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಆಕೆಯ ಪಾಲಕರು, ಅಭಿಲಾಶ್ ಕುಟುಂಬದವರು ಅಶ್ವಿನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಆಕೆಗೆ ಮಕ್ಕಳಾಗಿಲ್ಲವೆಂದು ಪ್ರತಿದಿನ ಮಾನಸಿಕವಾಗಿ ಹೀಯಾಳಿಸುತ್ತಿದ್ದರು. ಇದರಿಂದ ಆಕೆ ಬೇಸತ್ತು ಹೀಗೆ ಮಾಡಿಕೊಂಡಿದ್ದಾಳೆ. ಇದಕ್ಕೆ ಆಕೆಯ ಅತ್ತೆ ಹಾಗೂ ಗಂಡನೇ ಕಾರಣ ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಅಳಲು ತೋಡಿಕೊಂಡದ್ದಾರೆ.

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಇನ್ನು ಅಶ್ವಿನಿ ಯಾವುದೂ ದುಡಿಮೆಯಿಲ್ಲದೇ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವ ಗೃಹಿಣಿಯಲ್ಲ. ಕೈತುಂಬಾ ಸಂಬಳ ತರುವಂತಹ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಕೆಲಸ ಮಾಡುತ್ತಿದ್ದಳು. ಇನ್ನು ಆಕೆಯ ಸಂಬಳವನ್ನು ತನಗೇ ನೀಡಬೇಕೆಂದು ಅತ್ತೆ ತಾಕೀತು ಮಾಡಿ, ಕಿತ್ತುಕೊಳ್ಳುತ್ತಿದ್ದರು. ಅಶ್ವಿನಿ ಸಾವಿಗೆ ಕಾರಣರಾದ ಆಕೆಯ ಪತಿ ಹಾಗೂ ಕುಟುಂಬಸ್ಥರನ್ನು ಬಂಧಿಸಬೇಕು ಎಂದು ಅಶ್ವಿನಿ ಪಾಲಕರು ಆಗ್ರಹಿಸಿದ್ದಾರೆ. ಜೊತೆಗೆ, ಅಶ್ವಿನಿ ಮೃತದೇಹವನ್ನು ಅಭಿಲಾಶ್ ಮನೆಯ ಮುಂದಿಟ್ಟು ಮಗಳ ಸಾವಿಗೆ ನ್ಯಾಯ ಬೇಕು. ಆಕೆಯ ಮನೆಯವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನೀವು ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ನಂತರ ಮೃತೆ ಆಶ್ವಿನಿ ಪಾಲಕರು ಆಕೆಯ ಗಂಡ ಅಭಿಲಾಶ್ ಹಾಗೂ ಕುಟುಂಬದವರ ವಿರುದ್ಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!