ಘಟನೆಯ ನಂತರ ಗುರುಶಾಂತಪ್ಪ ಕೂಡಲಿಯಿಂದ ತನ್ನ ಕಾಲಿಗೆ ಹೊಡೆದುಕೊಂಡಿದ್ದಲ್ಲದೇ, ಸ್ಕ್ರೂಡ್ರೈವರ್‌ನಿಂದ ಹೊಟ್ಟೆಯ ಭಾಗಗಳಿಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ನಂತರ ಅವನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.
ನವಲಗುಂದ(ಮಾ.31): ಕ್ಷುಲ್ಲಕ ಕಾರಣಕ್ಕೆ ಮಲಗಿದ ವೇಳೆ ಪತ್ನಿಯ ಚಂಡನ್ನೇ(ಮುಖದ ಭಾಗದ) ಕಡಿದು ಕೊಲೆ ಮಾಡಿರುವ ಘಟನೆ ಅಣ್ಣಿಗೇರಿ ತಾಲೂಕಿನ ಕಾಲವಾಡ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಕಾಲವಾಡ ಗ್ರಾಮದ ಪಾರವ್ವ ಅನವಾಲದ(48) ಕೊಲೆಯಾದ ದುರ್ದೈವಿ. ಇವಳ ಪತಿ ಗುರುಶಾಂತಪ್ಪ ಅನವಾಲದ(58) ಎಂಬುವವನೇ ಕೊಲೆ ಮಾಡಿದ ಆರೋಪಿ.
ಪಾರವ್ವಳು ಮಕ್ಕಳ ಹಾಗೂ ತನ್ನ ಮೇಲೆಯೇ ಮಾಟ, ಮಂತ್ರ ಮಾಡಿಸಿದ್ದಾಳೆ ಎಂಬ ಸಂಶಯ ವ್ಯಕ್ತಪಡಿಸಿ ಗುರುಶಾಂತಪ್ಪ ಹಲವು ದಿನಗಳಿಂದ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದನು. ಅಲ್ಲದೇ ಓಣಿಯಲ್ಲಿ ಬೇರೆಯವರೊಂದಿಗೆ ಮಾತನಾಡಿದರೆ ವಿನಾಕಾರಣ ಅವಳೊಂದಿಗೆ ಜಗಳವಾಡುತ್ತಿದ್ದನು. ಗುರುವಾರವೂ ಇದೇ ಘಟನೆ ನಡೆದಿದ್ದು, ರಾತ್ರಿ ಅವಳು ಮಲಗಿದ ವೇಳೆ ಕೋಪಗೊಂಡ ಗುರುಶಾಂತಪ್ಪ ಕೊಡಲಿಯಿಂದ ಮುಖಕ್ಕೆ ಹಾಗೂ ಕುತ್ತಿಗೆಯ ಭಾಗಕ್ಕೆ ಬಲವಾಗಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಬಾಣಸವಾಡಿಯಲ್ಲಿ ಹವಾ ಇಡೋ ವಿಚಾರಕ್ಕೆ ರೌಡಿಶೀಟರ್ ಕೇರಂ ದಿನೇಶ್ ಕೊಲೆಗೈದ ಸ್ಪೀಡ್ ದಿಲೀಪ್ ಗ್ಯಾಂಗ್
ಘಟನೆಯ ನಂತರ ಗುರುಶಾಂತಪ್ಪ ಕೂಡಲಿಯಿಂದ ತನ್ನ ಕಾಲಿಗೆ ಹೊಡೆದುಕೊಂಡಿದ್ದಲ್ಲದೇ, ಸ್ಕ್ರೂಡ್ರೈವರ್‌ನಿಂದ ಹೊಟ್ಟೆಯ ಭಾಗಗಳಿಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ನಂತರ ಅವನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಪಿ. ಗೋಪಾಲ ಬ್ಯಾಕೋಡ, ಸಿಪಿಐ ರವಿಕುಮಾರ ಕಪ್ಪತನವರ ಹಾಗೂ ಅಣ್ಣಿಗೇರಿ ಪಿಎಸ್ಐ ಸಿದ್ಧಾರೂಢ ಆಲದಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು.